'ಮೊದಲು ರಾಜರು ಡ್ಯಾನ್ಸ್ ನೋಡಲು ಆಸ್ತಿ, ದುಡ್ಡು ಖರ್ಚು ಮಾಡ್ತಿದ್ದರು, ಈಗ ರೀಚಾರ್ಜ್ ಮಾಡಿದರೆ ಸಾಕು'
ಚಂದನವನದ ಚಂದದ ಗೊಂಬೆ ನಿವೇದಿತಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಬೀಚ್, ಬಾತ್‌ರೂಮ್, ಬೆಡ್‌ರೂಮ್ ಹೀಗೆ ಪ್ರತಿಯೊಂದು ಸ್ಥಳದಲ್ಲೂ ರೀಲ್ಸ್ ಮಾಡಿ ಹಂಚಿಕೊಳ್ಳುವ ನಿವೇದಿತಾ ತಮ್ಮ ದೇಹ ಸೌಂದರ್ಯವನ್ನು ತೋರಿಸಿಕೊಳ್ಳುತ್ತಾ ನೋಡುಗರ ಗಮನ ಸೆಳೆಯುತ್ತಿರುತ್ತಾರೆ. ಹೀಗೆ ಅವರೇನೇ ವಿಡಿಯೋ ಹಂಚಿಕೊಂಡರೂ ಕೂಡ ತಕ್ಷಣ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತದೆ. ಇದೀಗ ಮತ್ತೊಂದು ವಿಡಿಯೋವನ್ನು ಹಂಚಿಕೊಂಡಿದ್ದು ಮಳೆ, ಗುಡುಗು, ಮಿಂಚಿನಲ್ಲಿ ಮೈನೆನೆದು ಪಡ್ಡೆಹುಡುಗರ ಮನ ಕದ್ದಿದ್ದಾರೆ ಚಂದದ ಗೊಂಬೆ ನಿವೇದಿತಾ.
ಹೌದು ಗಾಯಕಿ ಶ್ರೇಯಾ ಘೋಷಲ್ ಹಾಡಿರುವ 'ಓ ಬೇಕಬರ್' ಹಿಂದಿ ಹಾಡಿಗೆ ನಿವೇದಿತಾ ಗೌಡ ರೀಲ್ಸ್ ಮಾಡಿದ್ದಾರೆ. ನಿವೇದಿತಾ ಹಿಂಬದಿಯಲ್ಲಿ ಕಪ್ಪು ಮೋಡ, ಮಳೆ, ಗುಡುಗು, ಮಿಂಚು ಕಾಣಿಸುತ್ತದೆ. ಮುಖ್ಯ ರಸ್ತೆಯ ಮನೆ ಅಂಗಳದ ಕಾಂಪೌಂಡ್ ಒಳಗಡೆ ನಿವೇದಿತಾ ಗೌಡ ವಿಡಿಯೋಕ್ಕೆ ಡಿಫ್ರೆಂಟ್ ಫೋಸ್ ಕೊಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

ಈ ವಿಡಿಯೋಕ್ಕೆ ವಿಭಿನ್ನ ರೀತಿಯ ಕಾಮೆಂಟ್‌ಗಳು ಬಂದಿವೆ. ನೆಟ್ಟಿಗರೊಬ್ಬರು ಹಾಸ್ಯಾಸ್ಪದವಾಗಿ ಕಾಮೆಂಟ್ ಮಾಡಿದ್ದಾರೆ. "ಮೊದಲು ರಾಜರು ಡ್ಯಾನ್ಸ್ ನೋಡಲು ಆಸ್ತಿ, ದುಡ್ಡು ಎಲ್ಲವನ್ನೂ ಖರ್ಚು ಮಾಡ್ತಿದ್ದರು; ನಾವು ಈಗ ಡೇಟಾ ರೀಚಾರ್ಜ್ ಮಾಡಿದರೆ ಸಾಕು!" ಎಂದು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ವಿಡಿಯೋವನ್ನು ಮೆಚ್ಚಿಕೊಂಡರೆ ಇನ್ನೂ ಕೆಲವರು ನಿಂದಿಸಿದ್ದಾರೆ.
ಅಂದಹಾಗೆ ನಿವೇದಿತಾ ಸಿನಿಮಾ ಅಥವಾ ಧಾರಾವಾಹಿ ರಂಗದಿಂದ ಬಂದವರಲ್ಲ. ಬಿಗ್‌ಬಾಸ್ ಮನೆಗೆ ಬಂದಾಗಲೇ ಇವರ ಮಾತು, ಕೇಶರಾಶಿ, ಗೊಂಬೆಯಂತಹ ಮೈಕಟ್ಟು ಕಂಡು ಜನ ಫಿದಾ ಆಗಿದ್ದು. ನಿವೇದಿತಾ ಗೌಡ ಯಾರು ಅನ್ನೋದನ್ನ ಜನ ಹುಡುಕಲು ಆರಂಭಿಸಿದ್ದು ಆಗಿನಿಂದಲೇ. ಹೀಗೆ ಬಿಗ್‌ಬಾಸ್ ಮನೆಯಲ್ಲಿ ಅದೆಷ್ಟು ಫೇಮಸ್ ಆಗಿದ್ದರು ಅಂದರೆ ನಿವೇದಿತಾ ಮಾತನಾಡುವ ರೀತಿಯಲ್ಲಿ ಮಾತನಾಡಿ ಜನ ರೀಲ್ಸ್ ಮಾಡಲು ಶುರು ಮಾಡಿದ್ದರು.
ನಿವೇದಿತಾ ಬಿಗ್‌ಬಾಸ್ ಮನೆಯಲ್ಲಿ ಗೊಂಬೆ ಅಂತಲೇ ಹೆಸರು ಮಾಡಿದ್ದರಿಂದ ಹೊರಗಡೆ ಬಂದ ಬಳಿಕವೂ ಅವರಿಗೆ ಸಿಕ್ಕಾಪಟ್ಟೆ ಜನ ಫ್ಯಾನ್ಸ್ ಇದ್ದರು. ಇನ್ನೂ ನಿವೇದಿತಾ ಜೊತೆಗೆ ಮತ್ತೋರ್ವ ಸ್ಪರ್ಧಿಯಾಗಿದ್ದ ಗಾಯಕ ಚಂದನ್ ಶೆಟ್ಟಿ ಹಾಡು ಹಾಡುವ ಮೂಲಕ ಫೇಮಸ್ ಆಗಿದ್ದರು. ಅತ್ತ ಚಂದನ್ ಹಾಡು ಹಾಡುತ್ತಿದ್ದರೆ ಇತ್ತ ನಿವೇದಿತಾ ಖುಷಿ ಪಡ್ತಾಯಿದ್ದರು. ಹೀಗೆ ಸ್ಪರ್ಧಿಗಳ ಸಂಖ್ಯೆ ಕಡಿಮೆಯಾಗುತ್ತಾ ಕೊನೆ ಕೊನೆಗೆ ಉಳಿದಿದ್ದ ನಿವೇದಿತಾ ಹಾಗೂ ಚಂದನ್ ಶೆಟ್ಟಿ ಇಬ್ಬರ ನಡುವೆ ಪ್ರೀತಿ ಎಂಬ ಸಸಿ ಚಿಗುರೊಡೆದಿತ್ತು.

ಬಿಗ್‌ಬಾಸ್ ಮನೆಯಲ್ಲಿ ಚಂದನ್ ಹಾಗೂ ನಿವೇದಿತಾ ಒಂದಾಗುತ್ತಾರೆ ಅನ್ನೋ ಮಾತುಗಳು ಕೇಳಿ ಬಂದಿದ್ದವು. ಅದಕ್ಕೆ ಪುಷ್ಠಿ ನೀಡುವಂತೆ ಚಂದನ್ ನಿವೇದಿತಾಗೆ ಮೈಸೂರಿನಲ್ಲಿ ಜನ ತುಂಬಿದ ವೇದಿಕೆಯಲ್ಲಿ ಪ್ರಪೋಸ್ ಮಾಡಿದರು. ಮೈಸೂರು ದಸರಾದಲ್ಲಿ ಈ ಜೋಡಿ ಪ್ರಪೋಸ್ ಮಾಡಿದ್ದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು.
ಆದರೆ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ನಿವೇದಿತಾ ಹಾಗೂ ಚಂದನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದಾದ ಬಳಿಕ ಏನಾಯ್ತು ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಮದುವೆಯಾಗಿ ಕೆಲವೇ ವರ್ಷದಲ್ಲಿ ಈ ಜೋಡಿ ವಿಚ್ಚೇದನ ಪಡೆದುಕೊಂಡಿದೆ. ವಿಚ್ಚೇದನ ಬಳಿಕ ನಿವೇದಿತಾ ಫುಲ್ ಫ್ರೀ ಆಗಿದ್ದಾರೆ. ಫ್ರೆಂಡ್ಸ್ ಜೊತೆ ಪ್ರವಾಸಕ್ಕೆ ಹೋಗುತ್ತಾ ಸುತ್ತಾಡಿಕೊಂಡು ರೀಲ್ಸ್ ಶೇರ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿದ್ದಾರೆ. ಅಲ್ಲದೆ ಬಾಯ್ಸ್ ವರ್ಸೆಸ್ ಗರ್ಲ್ಸ್ ರಿಯಾಲಿಟಿ ಶೋದಲ್ಲೂ ಭಾಗವಹಿಸುವ ನಿವೇದಿತಾ, ಮುದ್ದು ರಾಕ್ಷಸಿ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.
ಒಂದೆಡೆ ಸಿನಿಮಾ ಮೂಲಕನಾದರೂ ಚಂದನ್ ಹಾಗೂ ನಿವೇದಿತಾ ಮತ್ತೆ ಒಂದಾಗುತ್ತಾರೆ ಅನ್ನೋ ಊಹಾಪೋಹಗಳು ಕೇಳಿಬರುತ್ತಿವೆ. ಮತ್ತೊಂದೆಡೆ ಚಂದನ್ ಶೆಟ್ಟಿ ಎರಡನೇ ಮದುವೆ ಆಗಿಲಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿವೆ. ಇದರಲ್ಲಿ ಯಾವುದು ನಿಜವಾಗಲಿದೆ ಅನ್ನೋದನ್ನು ಕಾದು ನೋಡಬೇಕಿದೆ.












Click it and Unblock the Notifications