Mokshitha Pai: ಐಶ್ವರ್ಯ ಪೈ ಎನ್ನುವ ಹೆಸರು ಬದಲಿಸಿದ್ದೇಕೆ: ಕೊನೆಗೂ ಅಸಲಿ ವಿಚಾರ ಬಿಚ್ಚಿಟ್ಟ ಮೋಕ್ಷಿತಾ
ಬಿಗ್ ಬಾಸ್ ಕನ್ನಡ ಸೀಜನ್ 11ರ ಸ್ಪರ್ಧಿಯಾಗಿದ್ದ ಪಾರು ಧಾರಾವಾಹಿ ಖ್ಯಾತಿಯ ಮೋಕ್ಷಿತಾ ಪೈ ಈ ಸೀಜನ್ ಮಹಿಳಾ ವಿಜೇತೆ ಅಂತಾನೇ ಹೇಳಬಹುದು. ಟಾಪ್ ಐದು ಸ್ಪರ್ಧಿಗಳ ಪೈಕಿ ಮೋಕ್ಷಿತಾ ಪೈ ಒಬ್ಬರೇ ಮಹಿಳಾ ಸ್ಪರ್ಧಿಯಾಗಿದ್ದಾರೆ. ಇದಕ್ಕೆ ಕಾರಣವಾಗಿದ್ದು, ಮೋಕ್ಷಿತಾ ಅವರ ವ್ಯಕ್ತಿತ್ವ. ಯಾರನ್ನೂ ನೋಹಿಸದ, ಸರಳತೆಗೆ ಹೆಸರಾಗಿದ್ದ ಮೋಕ್ಷಿತಾ ವಿರುದ್ಧ ಅವರು ಬಿಗ್ ಬಾಸ್ ಮನೆಯೊಳಗಿದ್ದ ಸಂದರ್ಭದಲ್ಲಿ ಅಪಪ್ರಚಾರ ಕೇಳಿ ಬಂದಿತ್ತು.
ಮೋಕ್ಷಿತಾ ಪೈ ವಿರುದ್ಧ ಮಕ್ಕಳನ್ನು ಕಿಡ್ನಾಪ್ ಮಾಡಿರುವಂತಹ ಆರೋಪ ಕೇಳಿ ಬಂದಿತ್ತು. ಈ ಪ್ರಕರಣ ಬಹಳ ವರ್ಷಗಳ ಹಿಂದೆ ನಡೆದಿದ್ದು, ಮೋಕ್ಷಿತಾ ಬಿಗ್ ಬಾಸ್‌ಗೆ ಹೋಗುತ್ತಿದ್ದಂತೆ ಮತ್ತೆ ಪ್ರಕರಣದ ಕುರಿತು ಸುದ್ದಿಗಳನ್ನು ವೈರಲ್ ಮಾಡಲಾಗಿತ್ತು. ಇದ್ಯಾವುದಕ್ಕೂ ಡೋಂಟ್ ಕೇರ್ ಎನ್ನದ ಮೋಕ್ಷಿತಾ ಅಭಿಮಾನಿಗಳು ಅವರ ಪರ ನಿಂತು ಅವರನ್ನು ಫಿನಾಲೆವರೆಗೂ ಕರೆತಂದರು.

ಆ ಈ ಅಪಪ್ರಚಾರದ ಸಂದರ್ಭದಲ್ಲಿ ಮೋಕ್ಷಿತಾ ಪೈ ಎಂದೇ ಗುರುತಿಸಿಕೊಂಡಿದ್ದ ಇವರ ಮೊದಲ ಹೆಸರು ಐಶ್ವರ್ಯ ಪೈ ಎನ್ನುವುದು ಬಹಿರಂಗವಾಗಿತ್ತು. ಆದರೆ ಮೋಕ್ಷಿತಾ ಹೆಸರು ಬದಲಿಸಿಕೊಂಡಿದ್ದು ಯಾಕೆ ಎನ್ನುವ ಪ್ರಶ್ನೆಗೆ ಈವರೆಗೂ ಸೂಕ್ತವಾದ ಉತ್ತರ ಸಿಕ್ಕಿರಲಿಲ್ಲ. ಇದೀಗ ಸ್ವತಃ ಮೋಕ್ಷಿತಾ ಅವರೇ ಐಶ್ವರ್ಯ ಪೈ ಹೆಸರು ಬದಲಿಸಿದ ಅಸಲಿ ಕಾರಣವನ್ನು ಬಿಚ್ಚಿಟ್ಟಿದ್ದಾರೆ.
'ನಾನು ಹೆಸರು ಬದಲಿಸಿಕೊಂಡಿರುವುದು ಹೌದು. ಯಾಕೆಂದರೆ ನಮ್ಮ ಅಮ್ಮ ನನಗೆ ಸಂಖ್ಯಾಶಾಸ್ತ್ರದ ( Numerology) ಪ್ರಕಾರ ಹೆಸರು ಇಟ್ಟಿರಲಿಲ್ಲ. ನನ್ನ ಜನ್ಮ ದಿನಾಂಕ ಪ್ರಕಾರ ನನಗೆ ಟ ಹಾಗೂ ಮೊ ಅಕ್ಷರ ಬಂದಿರುತ್ತದೆ. ಅಮ್ಮನಿಗೆ ಟ ಅಕ್ಷರದಲ್ಲಿ ಹೆಸರಿಡಲು ಗೊತ್ತಾಗುವುದಿಲ್ಲ. ಹಾಗಾಗಿ ಐಶ್ವರ್ಯ ಎನ್ನುವ ಹೆಸರು ಇಟ್ಟಿದ್ದರು'.
'ನಾನು ಪಾರು ಮಾಡುವಾಗ ನ್ಯುಮರಾಲಜಿ ಕೇಳಿದೆವು. ಅವರು ನೀವು ಹೆಸರು ಬದಲಾಯಿಸಿದೆ ಒಳ್ಳೆಯದು. ಅದು ನಿಮಗೆ ಯಶಸ್ಸು ತಂದುಕೊಡುತ್ತದೆ ಅಂತಾ ಹೇಳಿದರು. ಆಗ ಟ ಅಕ್ಷರದಿಂದ ಹೆಸರು ಸಿಗಲಿಲ್ಲ. ಮೊ ಅಕ್ಷರದಿಂದ ಕೇಳಿದಾಗ ಅವರು ಮೋನಿಷಾ ಅಂತಾ ಕೊಟ್ಟಿದ್ದರು. ಆಗ ನಾನು ಮೋನಿಷಾ ಬೇಡ ಮೋಕ್ಷಿತಾ ಬದಲು ಅಂತಾ ಮಾಡಿಕೊಂಡೆವು'.

'ಇನ್ನು ಹೆಸರಿನಲ್ಲಿರುವ ಅಕ್ಷರಗಳನ್ನು ಎಣಿಸಿದಾಗ ಇಷ್ಟೇ ಅಕ್ಷರಗಳು ಬರಬೇಕು ಎಂದು ನ್ಯುಮರಾಲಜಿ ಅಲ್ಲಿ ಇರುತ್ತದೆ. ಮೋಕ್ಷಿತಾ ಹೆಸರಿಗೆ ಅಷ್ಟೇ ಬಂತು. ಅದಾದ ಮೇಲೆ ನನಗೆ ಮರು ನಾಮಕರಣ ಮಾಡಿದರು. ಮುಖ್ಯವಾಗಿ ಹೆಸರು ಬದಲು ಮಾಡಿದ್ದೇ ಇಂಡಸ್ಟ್ರಿಗಾಗಿ. ಮರು ನಾಮಕರಣ ಮಾಡಿದ ಮೇಲೆ ಈ ಹೆಸರು ನನಗೆ ತುಂಬಾ ಯಶಸ್ಸು ತಂದುಕೊಟ್ಟಿತು. ಪಾರು ಅವಕಾಶ ಬಂದ ಮೇಲೆನೇ ನಾನು ಹೆಸರು ಬದಲಿಸಿಕೊಂಡಿದ್ದು. ಈ ಕ್ಷೇತ್ರಕ್ಕೆ ಮೊದಲಿನ ಹೆಸರು ಆಗುತ್ತಾ ಅಂತಾ ನ್ಯುಮರಾಲಜಿ ಅವರನ್ನು ಕೇಳಿ ಬಳಿಕ ಹೆಸರು ಬದಲಿಸಿದ್ದು' ಎಂದು ಮೋಕ್ಷಿತಾ ಪೈ ಟಿವಿ ೯ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದರು.












Click it and Unblock the Notifications