Milana Nagaraj: 'ಅವತ್ತೇ ಅದರ ಮೇಲಿದ್ದ ಆಸೆ ಸತ್ತೋಯ್ತು': ಕೃಷ್ಣ ಮೇಲೆ ಮಿಲನಾ ಬಿಗ್‌ ಕಂಪ್ಲೇಂಟ್

ನಟ ಅನೀಶ್ ತೇಜೇಶ್ವರ್ ಹಾಗೂ ಮಿಲನಾ ನಾಗರಾಜ್‌ ನಟನೆಯ ಆರಾಮ್ ಅರವಿಂದ ಸ್ವಾಮಿ ಸಿನಿಮಾ ಇದೇ ತಿಂಗಳು ಅಂದರೆ ನವೆಂಬರ್‌ 22ಕ್ಕೆ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಆರಾಮ್ ಅರವಿಂದ ಸ್ವಾಮಿ ಚಿತ್ರತಂಡ ಸಿನಿಮಾ ಪ್ರೊಮೋಷನ್‌ನಲ್ಲಿ ಬ್ಯೂಸಿಯಾಗಿದ್ದು, ಕನ್ನಡ ಸಿನಿಮಾವನ್ನು ಚಿತ್ರಮಂದಿರಗಳಿಗೆ ಬಂದು ನೋಡಿ ಎಂದು ಸಿನಿ ಪ್ರಿಯರಲ್ಲಿ ಮನವಿ ಮಾಡಿದ್ದಾರೆ.

ಸದ್ಯ ಆರಾಮ್ ಅರವಿಂದ ಸ್ವಾಮಿ ಚಿತ್ರದ ಪ್ರೊಮೋಷನ್‌ನಲ್ಲಿರುವ ಮಿಲನಾ ನಾಗರಾಜ್‌, ಸಂದರ್ಶನವೊಂದರಲ್ಲಿ ಡಾರ್ಲಿಂಗ್‌ ಕೃಷ್ಣ ಅವರಿಗೆ ಬರೆದ ಪತ್ರಗಳ ಬಗ್ಗೆ ಮಾತನಾಡಿದ್ದಾರೆ. ಮೊದಲ ಬಾರಿಗೆ ಯಾರಿಗಾದರೂ ಪ್ರೀತಿಯಿಂದ ಪತ್ರ ಬರೆದ ಬಗ್ಗೆ ಮಾತನಾಡಿದ ನಟಿ ಮಿಲನಾ ನಾಗರಾಜ್‌, 'ಡಾರ್ಲಿಂಗ್‌ ಕೃಷ್ಣ ಅವರಿಗೆ ಲೆಟರ್‌ ಬರೆದಿದ್ದೇನೆ. ಅದು..ಇದು ಬರೆದು ಕೊಟ್ಟಿದ್ದೇನೆ. ಕಾರ್ಡ್‌ಗಳನ್ನು ಕೊಡುವುದು, ಪತ್ರ ಬರೆಯುವುದು ಈ ಎಲ್ಲಾವೂ ನನಗೆ ತುಂಬಾ ಆಸಕ್ತಿ ಇತ್ತು. ಆದರೆ ಕೃಷ್ಣ ಅದನ್ನು ತುಂಬಾ ಖುಷಿಯಿಂದ ತೆಗೆದುಕೊಳ್ಳುವುದಿಲ್ಲ ಅಂತಾ ತಿಳಿದ ಮೇಲೆ ಬಿಟ್ಟುಬಿಟ್ಟೆ' ಎಂದರು.

Actress Milana Nagaraj Has Spoken About How Actor Darling Krishna Neglected The Letters She Gave

'ನಾನು ಬರೆಯುವ ಪತ್ರಗಳಿಗೆ ಅಷ್ಟು ಬೆಲೆ ಇದ್ದಿದ್ದರೆ ಬಹುಶಃ ಅದನ್ನು ಮುಂದುವರಿಸುತ್ತಿದ್ದೆ. ಲೆಟರ್‌ಗಳನ್ನು ಕೊಟ್ಟಾಗ ಸುಮ್ಮನೆ ತೆಗೆದುಕೊಳ್ಳುತ್ತಿದ್ದರು. ಅದಕ್ಕಿಂತ ಕೆಟ್ಟದಾಗಿರುವುದು ಏನೆಂದರೆ ಯಾವಾಗಲೋ ತುಂಬಾ ಪ್ರೀತಿಯಿಂದ, ಭಾವನೆಗಳಿಂದ ಕೊಟ್ಟಿರುತ್ತೇನೆ. ಇತ್ತೀಚಿಗೆ ಮನೆಯ ಡ್ರಾಯರ್‌ ಕ್ಲೀನ್‌ ಮಾಡುವಾಗ ಇದು ಇರಲಾ..? ಇಲ್ಲ ಎಸೆದು ಬಿಡಲಾ ಅಂದರು.

ನನಗೆ ಅಯ್ಯೋ ಅನಿಸೋಯ್ತು. ಅವತ್ತೇ ಅದರ ಮೇಲಿದ್ದ ಆಸೆ ಸತ್ತೋಯ್ತು. ಅಷ್ಟೇ ಅಲ್ಲ ಅದಕ್ಕೆ ವಿವರಣೆ ಕೂಡ ಕೊಡುತ್ತಾರೆ. ನೀನೆ ಜೊತೆಯಲ್ಲಿ ಇರುವೆಯಲ್ಲಾ..ಈ ಲೆಟೆರ್‌ಗಳೆಲ್ಲಾ ಯಾಕೆ ಎನ್ನುತ್ತಾರೆ. ಹೀಗಾಗಿ ಅವತ್ತೇ ಕಾರ್ಡ್‌, ಲೆಟೆರ್‌ ಎಲ್ಲವನ್ನೂ ಬಿಟ್ಟುಬಿಟ್ಟೆ' ಎಂದು ನಟಿ ಮಿಲನಾ ನಾಗರಾಜ್‌ ಹೇಳಿದ್ದಾರೆ.

Actress Milana Nagaraj Has Spoken About How Actor Darling Krishna Neglected The Letters She Gave

ಮೊದಲ ಬಾರಿ ಪರಿ ನೋಡಿದ ಬಗ್ಗೆ ಮಿಲನಾ ಹೇಳಿದ್ದೇನು..?

ಇನ್ನು ತಮ್ಮ ಮಗಳು ಪರಿಯನ್ನು ನೋಡಿದಾಗ ಅಥವಾ ಎತ್ತಿಕೊಂಡಾಗ ಏನು ಅನಿಸಿತು ಎನ್ನುವುದರ ಬಗ್ಗೆ ಮಾತನಾಡಿದ ಮಿಲನಾ ನಾಗರಾಜ್‌, ನನ್ನ ಮಗುವನ್ನು ಮೊದಲ ಬಾರಿ ನಾನು ನೋಡಿದಾಗ ಇದು ನನ್ನದೇನಾ..? ಅನಿಸಿತು. ಮಗು ತುಂಬಾ ಗುಂಡು ಗುಂಡಾಗಿ, ತುಂಬಾ ಬೆಳಗ್ಗೆ ಇತ್ತು. ನಾನು ಕೃಷ್ಣ ಇಬ್ಬರೂ ಸಣ್ಣಗೆ ಇರುವುದಲ್ಲಾ ಹಾಗಾಗಿ ಇದು ನನ್ನದೇನಾ ಮಗು ಅನಿಸಿತು. ನನ್ನ ಪಾಪುನಾ ಎನ್ನುವುದೇ ನನ್ನ ನಿಜವಾದ ಮೊದಲ ರಿಯ್ಯಾಕ್ಷನ್‌ ಆಗಿತ್ತು ಎಂದು ಮೆಟ್ರೋಸಾಗ ಸಂದರ್ಶನದಲ್ಲಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+