ತಾಯಾದ ಮಿಲನಾ ನಾಗರಾಜ್: Boy Or Girl ಯಾರ ಗೆಸ್ ಸರಿಯಾಯ್ತು ಗೊತ್ತಾ?
ಬೆಂಗಳೂರು, ಸೆಪ್ಟೆಂಬರ್ 05: ಕನ್ನಡ ಚಿತ್ರರಂಗದ ಮುದ್ದಾದ ಜೋಡಿ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ತಂದೆ-ತಾಯಾದ ಖುಷಿಯಲ್ಲಿದ್ದಾರೆ. ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಕುಟುಂಬಕ್ಕೆ ಹೊಸ ಸದಸ್ಯನ ಆಗಮನವಾಗಿದೆ. ಈ ಖುಷಿ ಸುದ್ದಿಯನ್ನು ಡಾರ್ಲಿಂಗ್ ಕೃಷ್ಣ ಅವರು ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಆಪ್ತರು ಹಾಗೂ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಈ ವರ್ಷದ ಮಹಾಶಿವರಾತ್ರಿ ಅಂದರೆ ಮಾರ್ಚ್ 08ರಂದು ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸಿಹಿ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಆಗಾಗ ಬೇಬಿ ಬಂಪ್ ಫೋಟೋಗಳನ್ನು ಶೇರ್ ಮಾಡುತ್ತಿದ್ದ ಈ ಜೋಡಿ, ಇತ್ತೀಚಿಗಷ್ಟೆ ಹುಡುಗ ಅಥವಾ ಹುಡುಗಿ ಯಾವ ಮಗು ಇರಬಹುದು ಎಂದು ಹೊಸ ಫೋಟೋ ಕೂಡ ಹಂಚಿಕೊಂಡಿದ್ದರು. ಚಿತ್ರರಂಗದ ನಟಿಯರು ಸೇರಿದಂತೆ ಅನೇಕರು ಪ್ರತಿಕ್ರಿಯಿಸಿ ಶುಭಹಾರೈಸಿದ್ದರು.

ಇದೀಗ ಡಾರ್ಲಿಂಗ್ ಕೃಷ್ಣ ನಿರೀಕ್ಷೆಯಂತೆ ಮುದ್ದಾದ ಮಗಳು ಜನಿಸಿದ್ದಾರೆ. ಹೌದು ಮಿಲನಾ ನಾಗರಾಜ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗಳು ಹುಟ್ಟಿದ ಖುಷಿಯನ್ನು ಡಾರ್ಲಿಂಗ್ ಕೃಷ್ಣ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹೆಣ್ಣು ಮಗು ಜನಿಸಿದೆ. ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.
ತಾಯಾಗುವ ಈ ಪಯಣದಲ್ಲಿ ನೀವು ಮಾಡಿರುವ ತ್ಯಾಗ, ಅನುಭವಿಸಿದ ನೋವು, ತೋರಿದ ಧೈರ್ಯಕ್ಕಾಗಿ ನನಗೆ ನಿಮ್ಮ ಮೇಲೆ ಹೆಮ್ಮೆ ಇದೆ ಎಂದು ಮಿಲನಾ ನಾಗರಾಜ್‌ಗೆ ಅಭಿನಂದಿಸಿರುವ ಕೃಷ್ಣ, ಈ ಒಂದು ಪಯಣದ ನಂತರ ಹೆಣ್ಣು ಮಕ್ಕಳ ಮೇಲಿದ್ದ ನನ್ನ ಗೌರವ ಇನ್ನಷ್ಟು ಹೆಚ್ಚಾಗಿದೆ. ನಾನೀಗ ಹೆಣ್ಣು ಮಗುವಿನ ತಂದೆ ಎಂದು ಡಾರ್ಲಿಂಗ್ ಕೃಷ್ಣ ಖುಷಿ ಹಂಚಿಕೊಂಡಿದ್ದಾರೆ.

ಹೆಣ್ಣು ಮಗುವಿನ ತಂದೆ-ತಾಯಾದ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್‌ಗೆ ಆಪ್ತರು ಸೇರಿದಂತೆ ಅಭಿಮಾನಿಗಳು ಶುಭಾಶಯ ತಿಳಿಸಿದ್ದು, ಆದಷ್ಟು ಬೇಗ ಮಗುವಿನ ಮುದ್ದಾದ ಮುಖ ತೋರಿಸಿ ಎಂದು ಮನವಿ ಮಾಡಿದ್ದಾರೆ. ಇನ್ನು ಲವ್ ಮಾಕ್ಟೇಲ್ ಚಿತ್ರದ ಮೂಲಕ ಜೋಡಿ ಎಂದರೆ ಹೀಗಿರಬೇಕು ಎನ್ನುವುದನ್ನು ತೋರಿಸಿಕೊಟ್ಟಿದ್ದ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಜೋಡಿ ರೀಲ್ ಮಾತ್ರವಲ್ಲದೇ, ರಿಯಲ್ ಆಗಿ ಕೂಟ ಹಾಗೇ ಇದ್ದು, ಅಭಿಮಾನಿಗಳ ಮೆಚ್ಚಿನ ಸ್ಯಾಂಡಲ್‌ವುಡ್ ಕಪಲ್ ಆಗಿದ್ದಾರೆ.












Click it and Unblock the Notifications