ಮೂರು ಮದುವೆ, ಒಂದೇ ವರ್ಷಕ್ಕೆ ಮೂರನೇ ಪತಿಗೂ ಖ್ಯಾತ ನಟಿ ಡಿವೋರ್ಸ್
ಸಿನಿಮಾರಂಗದಲ್ಲಿ ಸೆಲೆಬ್ರಿಟಿಗಳ ಡಿವೋರ್ಸ್ ಪ್ರಕರಣಗಳು ಕಾಮನ್ ಆಗೋಗಿವೆ. ಹತ್ತಾರು ವರ್ಷ ಸುಖಕರ ಜೀವನ ನಡೆಸಿದ ಜೋಡಿಗಳು ಇದ್ದಕ್ಕಿದ್ದಂತೆ ತಮ್ಮ ಸಂಬಂಧ ಕಡಿದುಕೊಳ್ಳುತ್ತಿವೆ. ಕೆಲವರು ಮದುವೆಯಾದ ಕೆಲವೇ ತಿಂಗಳಿಗೆ ಡಿವೋರ್ಸ್ ಪಡೆಯುವ ಮೂಲಕ ಅಚ್ಚರಿಯೂ ಮೂಡಿಸಿದ್ದಾರೆ. ಆದರೆ ಖ್ಯಾತ ನಟಿಯೊಬ್ಬರು ಒಂದಲ್ಲ, ಎರಡಲ್ಲ, ಬರೋಬ್ಬರಿ ಮೂರು ಮದುವೆಯಾಗಿ, ಈಗ ಮೂರನೇ ಪತಿಗೂ ಡಿವೋರ್ಸ್ ಕೊಟ್ಟಿದ್ದಾರೆ. ಈ ವಿಚಾರವನ್ನು ಅವರೇ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಘೋಷಣೆ ಕೂಡ ಮಾಡಿದ್ದಾರೆ.
ಕನ್ನಡ ಸೇರಿದಂತೆ ಎಲ್ಲ ಚಿತ್ರರಂಗಗಳಲ್ಲಿ ಮೊದಲಿನಿಂದಲೂ ಸೆಲೆಬ್ರಿಟಿಗಳ ಡಿವೋರ್ಸ್ ಪ್ರಕರಣಗಳು ಕಣ್ಣ ಮುಂದಿವೆ. ಕೆಲವರು ಶಾಕಿಂಗ್ ಕಾರಣಗಳನ್ನು ನೀಡಿ ಡಿವೋರ್ಸ್ ಕೊಟ್ಟಿರುವುದೂ ಇದೆ. ಬಳಿಕ ಮತ್ತೊಂದು ಮದುವೆಯೂ ಆಗಿದ್ದುಂಟು. ಆದರೆ ಈ ನಟಿ ಮೂವರನ್ನು ಮದುವೆಯಾಗಿಲ್ಲದೆ, ಈಗ ಮೂರನೇ ಪತಿಗೂ ಡಿವೋರ್ಸ್ ಕೊಟ್ಟಿದ್ದಾರೆ. ಅದು ಬೇರೆ ಯಾರೂ ಅಲ್ಲ, ಮಲಯಾಳಂ ಚಿತ್ರರಂಗದ ಖ್ಯಾತ ನಟಿ ಮೀರಾ ವಾಸುದೇವನ್ (Meera Vasudevan).

ಹೌದು, 43 ವರ್ಷದ ನಟಿ ಮೀರಾ ವಾಸುದೇವನ್ ತಮ್ಮ ಮೂರನೇ ಮದುವೆ ವಿಚ್ಛೇದನದಲ್ಲಿ ಕೊನೆಗೊಂಡಿದೆ ಎಂದು ಘೋಷಣೆ ಮಾಡಿದ್ದಾರೆ. ತನ್ಮಾತ್ರ, ಒರುವನ್, ವೈರಂ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಮೀರಾ ಏಪ್ರಿಲ್ 2024ರಲ್ಲಿ ಛಾಯಾಗ್ರಾಹಕ ವಿಪಿನ್ ಪುತಿಯಂಕಂ ಅವರನ್ನು ಮೂರನೇ ಮದುವೆಯಾಗಿದ್ದರು. ಕಳೆದ ಆಗಸ್ಟ್‌ನಿಂದಲೇ ಇಬ್ಬರೂ ದೂರವಾಗಿದ್ದೇವೆ ಎಂದು ಮೀರಾ ಖಚಿತಪಡಿಸಿದ್ದಾರೆ.
ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ಮೀರಾ, "ನಾನು, ನಟಿ ಮೀರಾ ವಾಸುದೇವನ್, ಆಗಸ್ಟ್ 2025ರಿಂದ ನಾನು ಈಗ ಒಂಟಿಯಾಗಿದ್ದೇನೆ ಎಂದು ಅಧಿಕೃತವಾಗಿ ಘೋಷಿಸುತ್ತೇನೆ. ನಾನು ನನ್ನ ಜೀವನದ ಅತ್ಯಂತ ಅದ್ಭುತ ಮತ್ತು ಶಾಂತಿಯುತ ಹಂತದಲ್ಲಿದ್ದೇನೆ" ಎಂದು ತಮ್ಮ ಡಿವೋರ್ಸ್ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಅಲ್ಲದೆ ವಿಪಿನ್ ಪುತಿಯಂಕಂ ಅವರೊಂದಿಗಿನ ಮದುವೆ ಫೋಟೋಗಳನ್ನು ಕೂಡ ಅವರು ಡಿಲೀಟ್ ಮಾಡಿದ್ದಾರೆ.
ಮೀರಾ ವಾಸುದೇವನ್ ಅವರು ಮೊದಲಿಗೆ ಛಾಯಾಗ್ರಾಹಕ ಅಶೋಕ್ ಕುಮಾರ್ ಅವರ ಪುತ್ರ ವಿಶಾಲ್ ಅಗರ್ವಾಲ್ ಅವರನ್ನು 2005ರಲ್ಲಿ ಮದುವೆಯಾಗಿದ್ದರು. ಬಳಿಕ 2010ರಲ್ಲಿ ವಿಚ್ಛೇದನ ಪಡೆದಿದ್ದರು. ಎರಡು ವರ್ಷಗಳ ಬಳಿಕ ನಟ ಜಾನ್ ಕೊಕ್ಕೆನ್ ಅವರೊಂದಿಗೆ ಮೀರಾ ಎರಡನೇ ಮದುವೆಯಾದರು. ಇವರಿಗೆ ಒಬ್ಬ ಪುತ್ರ ಕೂಡ ಇದ್ದು, 2016ರಲ್ಲಿ ದೂರವಾಗಿದ್ದರು. ಬಳಿಕ ಮೀರಾ ವಾಸುದೇವನ್ ಮತ್ತು ವಿಪಿನ್ ಪುತಿಯಂಕಂ ಅವರ ಕುಟುಂಬವಿಳಕ್ಕು ಧಾರಾವಾಹಿಯ ಸೆಟ್‌ಗಳಲ್ಲಿ ಭೇಟಿಯಾಗಿದ್ದರು. ನಂತರ ಅವರು ಕಳೆದ ವರ್ಷ ಕೊಯಮತ್ತೂರಿನಲ್ಲಿ ವಿವಾಹವಾಗಿ ಒಂದೇ ವರ್ಷಕ್ಕೆ ಡಿವೋರ್ಸ್ ಪಡೆದಿದ್ದಾರೆ.












Click it and Unblock the Notifications