Keerthy Suresh: ನಟಿ ಕೀರ್ತಿ ಸುರೇಶ್ ಲಿಪ್‌ಲಾಕ್ ಫೋಟೋ ವೈರಲ್
ಬಹುಭಾಷಾ ನಟಿ ಕೀರ್ತಿ ಸುರೇಶ್ ಅವರು ತಮ್ಮ ಬಹುದಿನಗಳ ಸ್ನೇಹಿತನ ಜೊತೆಗೆ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಹಿಂದೂ ಸಂಪ್ರದಾಯದಂತೆ ಮೊದಲಿಗೆ ಮದುವೆ ಜರುಗಿತ್ತು. ಇಂದು ಕ್ರಿಶ್ಚಿಯನ್ ಪದ್ಧತಿಯಂತೆಯೂ ಅವರು ಮತ್ತೆ ವಿವಾಹವಾಗಿದ್ದಾರೆ. ಈ ವೇಳೆ ನೂತನ ದಂಪತಿ ಲಿಪ್‌ಲಾಕ್ ಮಾಡಿಕೊಂಡಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.
ಅದರಲ್ಲೂ ನಟಿ ಕೀರ್ತಿ ಸುರೇಶ್ ಅವರ ಮೊದಲ ಕಿಸ್ ಕಣ್ತುಂಬಿಕೊಂಡು ಪಡ್ಡೆ ಹುಡುಗರೆಲ್ಲ ನೋವು ತಿಂದಿದ್ದಾರೆ. ನಟಿ ಫ್ಯಾನ್ಸ್ ಅಂತೂ ನಿಮ್ಮಿಬ್ಬರ ಮೇಲೆ ಯಾವುದೇ ಕೆಟ್ಟ ದೃಷ್ಟಿ ಬೀಳದಿರಲಿ ಎಂದು ಈ ಫೋಟೋಗೆ ಕಾಮೆಂಟ್ ಮಾಡಿದ್ದಾರೆ. ಕೀರ್ತಿ ಸುರೇಶ್ ಅವರು ತಮ್ಮ ಗೆಳೆಯ ಆಂಟೋನಿ ತಟ್ಟಿಲ್ ಅವರನ್ನು ವಿವಾಹವಾಗಿದ್ದಾರೆ.

ಇದಕ್ಕೂ ಮೊದಲ ಡಿಸೆಂಬರ್ 12ರಂದು ಈ ದಂಪತಿಗಳು ಗೋವಾದಲ್ಲಿ ದಕ್ಷಿಣ ಭಾರತದ ಸಾಂಪ್ರದಾಯದಂತೆ ವಿವಾಹವಾಗಿದ್ದರು. ಇಂದು ಗೋವಾದಲ್ಲೇ ಮತ್ತೆ ಕ್ರಿಶ್ಚಿಯನ್ ಶೈಲಿಯಲ್ಲಿ ಇಬ್ಬರೂ ಬಿಳಿ ವಸ್ತ್ರದಲ್ಲಿ ಕಂಗೊಳಿಸಿದ್ದಾರೆ. ವಿವಾಹ ಸಮಾರಂಭದಲ್ಲಿ ಶ್ವೇತವರ್ಣದಲ್ಲಿ ದಂಪತಿಗಳು ಲಿಪ್‌ಲಾಕ್ ಮಾಡಿಕೊಂಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿವೆ.
ಕೀರ್ತಿ ಸುರೇಶ್ ಮತ್ತು ಆಂಟೋನಿ ತಟ್ಟಿಲ್ ಗೋವಾದಲ್ಲಿ ದಕ್ಷಿಣ ಭಾರತದ ಸಾಂಪ್ರದಾಯಿಕ ಮಾಡಿಕೊಂಡಿದ್ದ ವಿವಾಹ ಸಮಾರಂಭದ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಪ್ರಸಿದ್ಧ ಫ್ಯಾಷನ್ ಡಿಸೈನರ್ ಅನಿತಾ ಡೋಂಗ್ರೆ ವಿನ್ಯಾಸಗೊಳಿಸಿದ ವಸ್ತ್ರದಲ್ಲಿ ಕೀರ್ತಿ ಸುರೇಶ್ ಅವರು ಅಪ್ಪಟ ದಕ್ಷಿಣ ಭಾರತದ ವಧುವಿನಂತೆ ಕಂಗೊಳಿಸುತ್ತಿದ್ದರು.

ಬೆರಗುಗೊಳಿಸುವ ಆಭರಣಗಳೊಂದಿಗೆ ಜೋಡಿಸಲಾದ ಸಾಂಪ್ರದಾಯಿಕ ಹಳದಿ ಮತ್ತು ಹಸಿರು ಸೀರೆಯಿಂದ ಕೀರ್ತಿ ಅವರು ಮಿಂಚಿದ್ದರು. ಕೈಯಿಂದ ನೇಯ್ದಿದ್ದ ಅನಿತಾ ಡೋಂಗ್ರೆ ಸೀರೆಯು ಶ್ರೀಮಂತ ಹಸಿರು ಅಂಚುಗಳೊಂದಿಗೆ ಹಳದಿ ಹಾಗೂ ಚಿನ್ನದ ಝರಿ ದಾರದ ಕಸೂತಿಯಿಂದ ಸುಂದರವಾಗಿ ಮೂಡಿ ಬಂದಿತ್ತು.
ಕ್ರಿಶ್ಚಿಯನ್ ಶೈಲಿಯ ವಿವಾಹದ ಫೋಟೋಗಳು ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ದಂಪತಿ ಬಿಳಿ ಉಡುಪಿನಲ್ಲಿ ಅದ್ಭುತವಾಗಿ ಕಾಣುತ್ತಿದ್ದು, ಮಸ್ತ್ ಎಂಜಾಯ್ ಮಾಡಿದ್ದಾರೆ. ಈ ಸಮಾರಂಭವು ಕುಟುಂಬದ ಸದಸ್ಯರು ಮತ್ತು ಆಪ್ತ ಸ್ನೇಹಿತರ ಉಪಸ್ಥಿತಿಯ ನಡುವೆ ನಡೆದಿದೆ. ದಂಪತಿ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ. ಈ ಸಮಾರಂಭದ ಫೋಟೋಗಳು ಕೂಡ ವೈರಲ್ ಆಗಿವೆ.
ಆಂಟೋನಿ ತಟ್ಟಿಲ್ ಅವರು ದುಬೈ ಮತ್ತು ಕೇರಳದ ಕೊಚ್ಚಿ ಮೂಲದ ಉದ್ಯಮಿಯಾಗಿದ್ದಾರೆ. ಆಂಟೋನಿ ಪ್ರಸಿದ್ಧ ರೆಸಾರ್ಟ್‌ಗಳ ಸಮೂಹವನ್ನು ಹೊಂದಿದ್ದಾರೆ. ಕೀರ್ತಿ ಸುರೇಶ್ ಅವರ ತವರು ಚೆನ್ನೈನಲ್ಲೂ ಹಲವಾರು ವ್ಯವಹಾರಗಳನ್ನು ಆಂಟೋನಿ ಹೊಂದಿದ್ದಾರೆ.












Click it and Unblock the Notifications