Actress Jyothi Rai: ನಟಿ 'ಜ್ಯೋತಿ ರೈ'ಗೆ ಬಿಗ್ ಬಾಸ್ ಆಫರ್, ಅವರು ಹೇಳಿದ್ದೇನು?
ಬೆಂಗಳೂರು, ಆಗಸ್ಟ್ 09: 'ಕನ್ನಡ ಬಿಗ್ ಬಾಸ್' ಸೀಸನ್ 10 (Big Boss Kannada) ಯಶ್ವಿಯಾಗಿದ್ದ ಪೂರ್ಣಗೊಂಡಿದ್ದು, ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 11 ಯಾವಾಗ ಶುರುವಾಗಲಿದೆ. ಯಾರೆಲ್ಲ ಸ್ಪರ್ಧಿಗಳು ಈ ಭಾರಿ ದೊಡ್ಮನೆಗೆ ತೆರಳಲಿದ್ದಾರೆ ಎಂಬುದು ಕೂತುಹಲ ಮೂಡಿಸಿದೆ. ಈ ಮಧ್ಯೆ ತನ್ನನ್ನು ಬಿಗ್ ಬಾಸ್ ತಂಡ ಆಹ್ವಾನಿಸಿತ್ತು ಎಂದು ಸ್ವತಃ ನಟಿ ಜ್ಯೋತಿ ರೈ ಅವರು ಹೇಳಿಕೊಂಡಿದ್ದಾರೆ. ಈ ಕುರಿತು ಅವರು ಬರೆದುಕೊಂಡು ಇನ್‌ಸ್ಟಾಗ್ರಾಂ ಸ್ಟೋರಿ ಶೇರ್ ಮಾಡಿಕೊಂಡಿದ್ದಾರೆ.
ಈ ಬಾರಿಯು ಬಿಗ್ ಬಾಸ್ ತಂಡ ಸಾಮಾಜಿಕ ಜಾಲತಾಣದಲ್ಲಿ ಜನಪ್ರೀಯತೆ ಇರುವವರನ್ನು ತಡಕಾಡುತ್ತಿದೆ. ಈ ವೇಳೆ ತಂಡವು ನಟಿ ಜ್ಯೋತಿ ರೈ ಅವರನ್ನು ಸಂಪರ್ಕಿಸಿದೆ. ಕನ್ನಡ ಬಿಗ್ ಸದರಿ ಆವೃತ್ತಿಗೆ ಬರುವಂತೆ ಆಫರ್ ನೀಡಿತ್ತು ಎಂದು ಸ್ವತಃ ನಟಿ ಮಾಹಿತಿ ನೀಡಿದ್ದಾರೆ.

ಕನ್ನಡದ ಧಾರವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಟಿ ಜ್ಯೋತಿ ರೈ ಅವರು ತೆಲುಗು ಧಾರವಾಹಿ, ಸಿನಿಮಾಗಳಲ್ಲಿ ಬ್ಯೂಸಿ ಇದ್ದಾರೆ. ತಮ್ಮ ನೈಜ ನಟನೆ, ಸೌಂದರ್ಯದಿಂದ ಅವರೇ ಫೇಮಸ್. ಈ ಕಾರಣದಿಂದಲೇ ಅವರಿಗೆ ಬಿಸ್ ಬಾಸ್ ಆಫರ್ ನೀಡಿತ್ತು. ಆದರೆ ಇದನ್ನು ನಟಿ ಜ್ಯೋತಿ ರೈ ಗೌರವದಿಂದಲೇ ತಿರಸ್ಕರಿಸಿರುವುದಾಗಿ ತಿಳಿಸಿದ್ದಾರೆ.
ಬಿಗ್ ಬಾಸ್ ಆಫರ್ ಜ್ಯೋತಿ ರೈ ಬಿಟ್ಟಿದ್ದೇಕೆ?
ಬಿಗ್ ಬಾಸ್ ಕುರಿತು ತಮ್ಮ ಸ್ಟೋರಿ ಸ್ಟೇಟರ್‌ನಲ್ಲಿ ನಟಿ, ಕನ್ನಡದಲ್ಲಿ ಆರಂಭವಾಗಲಿರುವ ಬಿಗ್ ಬಾಸ್ ನಲ್ಲಿ ಸ್ಪರ್ಧಿಸುವ ಸಾಧ್ಯತೆಗಳು ಕುರಿತು ಅನೇಕ ಕೇಳುತ್ತಿದ್ದಾರೆ. ನನಗೆ ಬಿಗ್ ಬಾಸ್ ಆಫರ್ ಬಂದದ್ದು ನಿಜ. ಆದರೆ ಅದನ್ನು ನಾನು ಗೌರವದಿಂದಲೇ ತಿರಸ್ಕರಿಸಿದ್ದೇನೆ. ಏಕೆಂದರೆ ಈ ಮೊದಲೇ ಒಪ್ಪಿಕೊಂಡಿರುವ ಕೆಲಸಗಳು ಇವೆ. ಅವುಗಳನ್ನು ಮುಗಿಸಿಕೊಡುವ ಜವಾಬ್ದಾರಿ ನನ್ನ ಮೇಲಿದೆ. ಹೀಗಾಗಿ ಆಫರ್ ತಿರಸ್ಕರಿಸಬೇಕಾಯಿತು. ಈ ಅವಕಾಶ ಹಾಗೂ ನನ್ನ ಅಭಿಮಾನಿಗಳ ಬೆಂಬಲಕ್ಕೆ ನಾನು ಚಿರಋಣಿ' ಎಂದು ಅವರು ಬರೆದುಕೊಂಡಿದ್ದಾರೆ.
ಬಿಗ್ ಬಾಸ್ ಶೋ ಯಾವಾಗ ಆರಂಭವಾಗಲಿದೆ?
ಬಿಗ್ ಬಾಸ್ ಹತ್ತು ಸೀಸನ್‌ಗಳು ಯಶಸ್ವಿಯಾಗಿ ಪೂರ್ಣಗೊಂಡಿರುವೆ. ಎಲ್ಲರಿಗೂ ಗೊತ್ತಿರುವಂತೆ ನಟ ಕಿಚ್ಚ ಸುದೀಪ್ ಅವರು ಶೋ ಅನ್ನು ನಿರೂಪಣೆ ಮಾಡಿದ್ದರು. ಅವರ ಸ್ಟೈಲ್, ಮಾತುಗಳು, ಶೋ ನಡೆಸಿಕೊಡುವ ರೀತಿ, ಸ್ಪರ್ಧಾಳುಗಳನ್ನು ನಡೆಸಿಕೊಳ್ಳುವ ರೀತಿ ಎಲ್ಲರಿಗೂ ಇಷ್ಟವಾಗುತ್ತದೆ. ಇದೀಗ ಬಿಗ್ ಬಾಸ್ ಶೋ 11 ಆವೃತ್ತಿಯು ಅಕ್ಟೋಬರ್ 3 ವಾರ ಶುರುವಾಗುವ ಸಾಧ್ಯತೆ ಇದೆ.
ಈಗಾಗಲೇ ಸೂಕ್ತ ತಯಾರಿ ನಡೆಸಿರುವ ಬಿಗ್ ಬಾಸ್ ತಂಡವು ಜನಪ್ರಿಯತೆ ಇರುವ ವ್ಯಕ್ತಿಯಗಳು, ಸೆಲೆಬ್ರೆಟಿಗಳನ್ನು ಹುಡುಕುತ್ತಿದೆ. ಒಬ್ಬೊಬ್ಬರಾಗೇ ಫೈನಲ್ ಆಗುತ್ತಿದ್ದಂತೆ ಅಧಿಕೃತ ಮಾಹಿತಿ ಹೋರ ಬೀಳಲಿದೆ.












Click it and Unblock the Notifications