ಎಷ್ಟು ಕ್ಯೂಟ್ ಇದ್ದಾಳೆ ನೋಡಿ ನಟಿ ಹರ್ಷಿಕಾ ಪೂಣಚ್ಚ ಮಗಳು: ಹೆಸರೇನು ಗೊತ್ತೇ?
ಕನ್ನಡ ಚಿತ್ರರಂಗದ ಮುದ್ದಾದ ಜೋಡಿ ನಟಿ ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಪೊನ್ನಣ್ಣ ಮನೆಯಲ್ಲಿ ಪುತ್ರಿಯ ನಾಮಕರಣದ ಸಂಭ್ರಮ ಮನೆ ಮಾಡಿದೆ. ಕಳೆದ ವರ್ಷ ಅಂದರೆ 2024ರ ಅಕ್ಟೋಬರ್ ತಿಂಗಳಲ್ಲಿ ಮೊದಲ ನವರಾತ್ರಿಯ ದಿನ, ನಟಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ತಮ್ಮ ಚೊಚ್ಚಲ ಮಗುವನ್ನು ಸ್ವಾಗತಿಸಿಕೊಂಡಿದ್ದರು.
ಇದೀಗ ತಮ್ಮ ಮುದ್ದಾದ ಕಂದನಿಗೆ ನಾಮಕರಣ ಮಾಡಲು ಮುಂದಾಗಿರುವ ದಂಪತಿ, ಇಂದು (ಮೇ 3) ಶನಿವಾರದಂದು ತಮ್ಮ ಪುತ್ರಿಯ ನಾಮಕರಣ ಸಮಾರಂಭವನ್ನು ಕೊಡವ ಸಂಪ್ರದಾಯದಂತೆ ಕೊಡಗಿನ ವಿರಾಜಪೇಟೆಯಲ್ಲಿ ಹಮ್ಮಿಕೊಂಡಿದ್ದಾರೆ. ಈ ಸಂಭ್ರಮಕ್ಕೆ ತಮ್ಮ ಅಭಿಮಾನಿಗಳನ್ನು ಕೂಡ ಆಹ್ವಾನಿಸಿದ್ದಾರೆ. ಈಗಾಗಲೇ ಹರ್ಷಿಕಾ ಹಾಗೂ ಭುವನ್ ಮಗಳ ಫೋಟೋ ಹಂಚಿಕೊಳ್ಳುವ ಮೂಲಕ ತಮ್ಮ ಜೀವನದ ಅಮೂಲ್ಯವಾದ ರತ್ನಕ್ಕೆ ಇಟ್ಟ ಹೆಸರನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

ನಟಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ತಮ್ಮ ಮಗಳಿಗೆ ತ್ರಿದೇವಿ ಪೊನ್ನಕ್ಕ ಎಂದು ಹೆಸರನ್ನು ಇಟ್ಟಿದ್ದಾರೆ. ಹಿಂದೂ ಧರ್ಮದ ಪ್ರಕಾರ ತ್ರಿದೇವಿ ಎನ್ನುವ ಹೆಸರು ನಾವು ಆರಾಧಿಸುವ ಮೂರು ಪ್ರಮುಖ ದೇವತೆಗಳ ನಾಮ ಸ್ಮರಣೆಯನ್ನು ಸೂಚಿಸುತ್ತದೆ. ತ್ರಿದೇವಿ ಅಂದರೆ ಸರಸ್ವತಿ, ಲಕ್ಷ್ಮೀ ಮತ್ತು ಪಾರ್ವತಿ ಮೂರು ದೇವತೆಗಳನ್ನೊಳಗೊಂಡ ಹೆಸರಾಗಿದೆ. ಈ ಹೆಸರು ಜ್ಞಾನ, ಸಂಪತ್ತು, ಸಮೃದ್ಧಿ ಮತ್ತು ಶಕ್ತಿ ಹಾಗೂ ಪ್ರೀತಿಯನ್ನು ಪ್ರತಿನಿಧಿಸುತ್ತದೆ. ಹೀಗಾಗಿ ತಮ್ಮ ಮಗಳು ಸಕಲ ಸಮೃದ್ಧಳಾಗಿರಲಿ ಎಂದು ತಾರಾ ಜೋಡಿ ಮಗಳಿಗೆ ತ್ರೀದೇವಿ ಎಂದು ಹೆಸರಿಟ್ಟಿದ್ದಾರೆ.
ಇನ್ನು ಹರ್ಷಿಕಾ ಹಾಗೂ ಭುವನ್ ಮಗಳಿಗೆ ದೇವಿಯ ಹೆಸರನ್ನೇ ಯಾಕೆ ಆಯ್ಕೆ ಮಾಡಿಕೊಂಡರು ಎನ್ನುವುದಕ್ಕೆ ಕಾರಣ ಇಲ್ಲಿದೆ. ಕಳೆದ ವರ್ಷ ಅಕ್ಟೋಬರ್ ತಿಂಗಳು ನವರಾತ್ರಿಯ ಮೊದಲ ದಿನವೇ ಹರ್ಷಿಕಾ ಪೂಣಚ್ಚ ಹೆಣ್ಣು ಮಗುವಿಗೆ ಜನ್ಮ ನೀಡಿದರು. ವಿಶೇಷವಾದ ನವರಾತ್ರಿಯ ದಿನ ಜನಿಸಿದ ಮಗಳಿಗೆ ದೇವಿಯ ನಾಮದಲ್ಲೇ ಹೆಸರಿಡಬೇಕು ಎಂದು ನಿರ್ಧರಿಸಿ ತ್ರಿದೇವಿ ಪೊನಕ್ಕ ಎಂದು ಹೆಸರಿಟ್ಟಿದ್ದಾರೆ.
ಇನ್ನು ತ್ರಿದೇವಿ ದೇವಿಯರ ಹೆಸರಾದರೆ ಪೊನ್ನಕ್ಕ ಎನ್ನುವ ಹೆಸರಿನ ಅರ್ಥ ಹಾಗೂ ವಿವರಣೆಯನ್ನು ಕೂಡ ತಾರಾ ಜೋಡಿ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಪೊನ್ನಕ್ಕ ಎನ್ನುವುದು ಮಗುವಿನ ತಂದೆ ತಾಯಿಯ ಹೆಸರಿನ ಸಂಯೋಜನೆಯಾಗಿದೆ. ಭುವನ್ ಪೊನ್ನಣ್ಣ ಹಾಗೂ ಹರ್ಷಿಕಾ ಹೆಸರನ್ನು ಜೋಡಿಸಿ ಪೊನ್ನಕ್ಕ ಎನ್ನುವ ಹೆಸರು ಇಡಲಾಗಿದ್ದು, ಇಂದು ಅಧೀಕೃತವಾಗಿ ನಾಮಕರಣ ಶಾಸ್ತ್ರ ನಡೆಯಲಿದೆ.
ಇನ್ನು 2023ರ ಆಗಸ್ಟ್ 24ರಂದು ನಟಿ ನಟಿ ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಪೊನ್ನಣ್ಣ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕೊಡಗಿನ ವಿರಾಜಪೇಟೆಯ ಅಮ್ಮತ್ತಿಯಲ್ಲಿ ಹರ್ಷಿಕಾ ಮತ್ತು ಭುವನ್ ಕೊಡವ ಶೈಲಿಯಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು.












Click it and Unblock the Notifications