ಸ್ಟಾರ್ ಹೋಟೆಲ್‌ಗೆ ಕರೆಸಿ ನನ್ನ ಶರ್ಟ್ ಒಳಗೆ ಕೈ ಹಾಕಿದ: ಖ್ಯಾತ ನಟಿಗೆ ಕಾಸ್ಟಿಂಗ್ ಕೌಚ್ ಅನುಭವ
ಸಿನಿಮಾರಂಗದಲ್ಲಿ ನಟಿಯರು ಎದುರಿಸಿದ ಕಾಸ್ಟಿಂಗ್ ಕೌಚ್ ಅನುಭವಗಳು ತಡವಾಗಿ ಬೆಳಕಿಗೆ ಬರುತ್ತಲೇ ಇವೆ. ಸಿನಿಮಾ ಅವಕಾಶಕ್ಕಾಗಿ ಹೋದಾಗ ಅನೇಕರು ಹೆಣ್ಣುಮಕ್ಕಳನ್ನು ಕೆಟ್ಟದಾಗಿ ಬಳಸಿಕೊಳ್ಳುವುದರ ಬಗ್ಗೆ ಈಗಾಗಲೇ ಅನೇಕ ನಟಿಯರು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಕೆಲವರು ಕಾಸ್ಟಿಂಗ್ ಕೌಚ್ ಮಾಡಿದವರ ಹೆಸರನ್ನೂ ನೇರವಾಗಿ ರಿವೀಲ್ ಮಾಡಿದ್ದರೆ, ಇನ್ನೂ ಕೆಲವರು ಹೆಸರು ಹೇಳದೆ ಆದ ಘಟನೆಯನ್ನು ಮಾತ್ರವೇ ವಿವರಿಸಿದ್ದಾರೆ. ಇದೀಗ ಮತ್ತೊಬ್ಬ ಖ್ಯಾತ ನಟಿಗೆ ಕಾಸ್ಟಿಂಗ್ ಕೌಚ್ ಅನುಭವವಾಗಿದೆ. 40 ವರ್ಷ ವಯಸ್ಸಿನ ನಿರ್ದೇಶಕ ತನ್ನೊಂದಿಗೆ ಹೇಗೆಲ್ಲ ಕೆಟ್ಟದಾಗಿ ನಡೆದುಕೊಂಡ ಎಂದು ಹೇಳಿದ್ದಾರೆ.
ಥ್ಯಾಂಕ್ ಯು ಫಾರ್ ಕಮಿಂಗ್ ಮತ್ತು ಡಬಲ್ ಎಕ್ಸ್‌ಎಲ್ ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ ಹಾಗೂ ಇನ್‌ಸ್ಟಾಗ್ರಾಂ ಇನ್‌ಫ್ಲುಯೆನ್ಸರ್ ಡಾಲಿ ಸಿಂಗ್ (Dolly Singh) ಇತ್ತೀಚೆಗೆ ತಮ್ಮ ವೃತ್ತಿಜೀವನದ ಆರಂಭದಲ್ಲಿ ಎದುರಿಸಿದ ಭಯಾನಕ ಅನುಭವದ ಬಗ್ಗೆ ಮಾತನಾಡಿದ್ದಾರೆ. ನಿರ್ದೇಶಕರೊಬ್ಬರು ಭೇಟಿಯ ನೆಪದಲ್ಲಿ ತಮ್ಮನ್ನು ಫೈವ್ ಸ್ಟಾರ್ ಹೋಟೆಲ್‌ಗೆ ಕರೆದುಕೊಂಡು ಹೋದರು. ಆಗ ಆತ ತನ್ನೊಂದಿಗೆ ಹೇಗೆ ನಡೆದುಕೊಂಡ ಎಂಬುದನ್ನು ಡಾಲಿ ವಿವರಿಸಿದ್ದಾರೆ.

ʼಒಮ್ಮೆ ನಾನು ದೆಹಲಿಯಲ್ಲಿ ಆಗಷ್ಟೇ ನಟನೆಯಲ್ಲಿ ತೊಡಗಿಸಿಕೊಂಡಿದ್ದೆ. ಆಗ ನಾನು ನಿರ್ದೇಶಕರೊಬ್ಬರನ್ನು ಭೇಟಿಯಾದೆ. ಅವರು ಮೊದಲು ಫೋನ್ ಕರೆಗಳ ಮೂಲಕ ನನ್ನೊಂದಿಗೆ ಬಹಳಷ್ಟು ಮಾತನಾಡುತ್ತಿದ್ದರು. ಅದು ತುಂಬಾ ವಿಚಿತ್ರವಾಗಿತ್ತು. ನಾವು ಹೊಸಬರಾದಾಗ ಮಾತನಾಡದಿದ್ದರೆ, ಅವರು ನಿಮಗೆ ಕೆಲಸದಲ್ಲಿ ಆಸಕ್ತಿ ಇಲ್ಲ ಎಂದು ಭಾವಿಸಬಹುದು ಎಂದುಕೊಳ್ಳುತ್ತೀರಿ. ಒಬ್ಬ ಮಹಿಳೆಯಾಗಿ, ಒಬ್ಬ ಪುರುಷ ನಿಮಗೆ ಏನನ್ನಾದರೂ ನೀಡಿದಾಗ ಅದು ಗೊಂದಲಮಯವಾಗಿರುತ್ತದೆʼ ಎಂದಿದ್ದಾರೆ.
ʼತುಟಿಗಳಿಗೆ ಕಿಸ್ ಮಾಡಿದʼ
ʼಅವರು ನನಗೆ ಕರೆ ಮಾಡುತ್ತಿದ್ದರು, ಅವರು ಏನು ವ್ಯವಸ್ಥೆ ಮಾಡಬಹುದು, ಆಡಿಷನ್‌ಗಳ ಬಗ್ಗೆ ಮಾತನಾಡುತ್ತಿದ್ದರು. ನಂತರ ನಾಳೆ ಈ ಹೋಟೆಲ್‌ಗೆ ಬನ್ನಿ, ನಾನು ನಿಮ್ಮನ್ನು ನಿರ್ಮಾಪಕರಿಗೆ ಪರಿಚಯಿಸುತ್ತೇನೆ ಎಂದರು. ಆತ ನನ್ನನ್ನು ಒಂದು ದೊಡ್ಡ ಫೈವ್‌ಸ್ಟಾರ್ ಹೋಟೆಲ್‌ಗೆ ಕರೆದೊಯ್ದನು. ನಾನು ರೆಸ್ಟೋರೆಂಟ್‌ನಲ್ಲಿ ಕುಳಿತೆ. ನಿರ್ಮಾಪಕ ಬಂದು ನಮ್ಮೊಂದಿಗೆ ಕುಳಿತನು. ನಾನು ಮದ್ಯ ಸೇವನೆ ಮಾಡುವುದಿಲ್ಲ. ಆದ್ದರಿಂದ ಅವನು ಕುಡಿಯುತ್ತಿರುವಾಗ ನಾನು ಅಲ್ಲಿಯೇ ಕುಳಿತಿದ್ದೆ. ನಂತರ, ನಾವು ಕಾರಿನಲ್ಲಿ ಕುಳಿತಿದ್ದೆವು. ಅವನು ಇದ್ದಕ್ಕಿದ್ದಂತೆ ನನ್ನ ತುಟಿಗಳಿಗೆ ಕಿಸ್ ಮಾಡಿದ. ಜೊತೆಗೆ ಅವನು ನನ್ನ ಶರ್ಟ್ ಒಳಗೆ ಕೈಹಾಕಿದ. ನನಗೆ ಆಗ ಏನು ಮಾಡಬೇಕೆಂದು ತಿಳಿಯಲಿಲ್ಲ. ಆಗ ನನಗೆ ವಯಸ್ಸು 19 ಅಷ್ಟೇ, ಆತನ ವಯಸ್ಸು 35-40 ವರ್ಷ ಇರಬಹುದುʼ ಎಂದಿದ್ದಾರೆ.
ʼಆಗ ನನಗೆ ಏನೂ ಹೇಳಲು ಸಾಧ್ಯವಾಗಲಿಲ್ಲ. ನನಗೆ ಮಾತನಾಡಲು, ಅಲ್ಲಿಂದ ತಪ್ಪಿಸಿಕೊಳ್ಳಲು ಸಹ ಸಾಧ್ಯವಾಗಲಿಲ್ಲ. ನಾನು ಅಲ್ಲಿಯೇ ಕುಳಿತು ನನ್ನನ್ನು ಮೆಟ್ರೋ ನಿಲ್ದಾಣದಲ್ಲಿ ಬಿಡುವಂತೆ ಕೇಳಿದೆ. ಬೇರೆ ಇನ್ನೇನೂ ಆಗುವುದಿಲ್ಲ ಎಂದು ಭಾವಿಸಿದೆ. ಅದೃಷ್ಟವಶಾತ್ ಆ ದಿನ ಅಂತದ್ದೇನು ಕೆಟ್ಟದು ನಡೆಯಲಿಲ್ಲ. ಆದರೆ ಅದು ತುಂಬಾ ಅನಿರೀಕ್ಷಿತ ಎಂದು ನೆನೆದಿದ್ದಾರೆ. ಇಂತಹ ಇನ್ನೂ ಅನೇಕ ಘಟನೆಗಳು ನಡೆದಿವೆ. ಕೆಲಸ ಮಾಡುವಾಗ ಮಹಿಳೆಯರು ಸುರಕ್ಷಿತವಾಗಿರುವುದು ಎಷ್ಟು ಕಷ್ಟ ಎಂದು ಡಾಲಿ ಸಿಂಗ್ ಹೇಳಿದ್ದಾರೆ. ಒಬ್ಬ ಮಹಿಳೆಯಾಗಿ ನನ್ನ ಅಂತಿಮ ಗುರಿ ಈ ಜಗತ್ತಿನಲ್ಲಿ ಸುರಕ್ಷಿತವಾಗಿರುವುದು. ಆದ್ದರಿಂದ ಅಂತಹ ಸಂದರ್ಭಗಳ ಬಗ್ಗೆ ತಾನು ಚಿಂತಿಸಬೇಕಾಗಿಲ್ಲʼ ಎಂದು ಹೇಳಿದ್ದಾರೆ.












Click it and Unblock the Notifications