Chaithra Achar:'ಮೂರು ಜನ ಇದ್ದೀವಿ ಜೊತೆಲಿ ಟ್ರಿಪ್‌ಗೆ ಬಾ ಅಂದಿದ್ದರು': ಚೈತ್ರಾ ಆಚಾರ್ ಹೇಳಿದ ಕಥೆ ಯಾರದ್ದು?
ಬೆಂಗಳೂರು, ಸೆಪ್ಟೆಂಬರ್ 19: ಲೈಂಗಿಕ ದೌರ್ಜನ್ಯ ಸೇರಿದಂತೆ ಕನ್ನಡ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸುವಂತೆ ನಟಿಯರು ಆಗ್ರಹಿಸುತ್ತಿದ್ದಾರೆ. ಈ ಬಗ್ಗೆ ನಟಿ ಚೈತ್ರಾ ಆಚಾರ್ ಮಾತನಾಡಿದ್ದು, ಕನ್ನಡ ಚಿತ್ರರಂಗದಲ್ಲಿ ಸಮಿತಿ ಯಾಕೆ ಮುಖ್ಯ ಎನ್ನುವುದರ ಬಗ್ಗೆ ವಿವರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನನಗೆ ಲೈಂಗಿಕ ದೌರ್ಜನ್ಯದಂತಹ ಯಾವ ಅನುಭವ ಆಗಿಲ್ಲ. ಆದರೆ ಕೇಳಿದ್ದೇನೆ. ನನ್ನ ಜೊತೆ ನಟನೆ ಮಾಡಿದವರು ಹೇಳಿರುವುದನ್ನು ಕೇಳಿದ್ದೇನೆ. ಶೂಟಿಂಗ್ ಸಮಯದಲ್ಲಿ ಸಿಕ್ಕ ವಿರಾಮದಲ್ಲಿ ಕುಳಿತುಕೊಂಡಿದ್ದಾಗ ಅವರ ಅನುಭವ ಹೇಳುವಾಗ ಕೇಳಿದ್ದೇನೆ. ನನಗೆ ಈಗಲೂ ನೆನಪಿದೆ. ನನ್ನ ಎರಡನೇ ಸಿನಿಮಾ ಸಯಮದಲ್ಲಿ ಕೇಳಿದ್ದೆ. ಅವಾಗೆಲ್ಲಾ ಕುತೂಹಲ ಜಾಸ್ತಿ. ನಿಮಗೇನು ಅನಿಸಿತು ಅಂತಾ ಕೇಳಿದೆ. ಆಗ ಆ ಹುಡುಗಿ ತನಗಾದ ಅನುಭವ ಹೇಳಿಕೊಂಡಳು ಪಾಪ' ಎಂದರು.

'ಆಕೆ ಜೂನಿಯರ್ ಆರ್ಕಿಸ್ಟ್. ಅವಳು ಒಂದು ಪಾತ್ರ ಮಾಡುತ್ತಿದ್ದಳು. ಎಷ್ಟೋ ವರ್ಷ ಆದ ಮೇಲೆ ಮತ್ತೆ ಆಡಿಷನ್ ಕೊಟ್ಟು ಈ ಸಿನಿಮಾಕ್ಕೆ ಬಂದಿದ್ದು ಅಂತಾ ಅವಳು ಅವಳ ಕಥೆ ಹೇಳಿದಳು. ಅದಕ್ಕೆ ನಾನು ಯಾಕೆ ನಿಲ್ಲಿಸಿದರಿ ಅಂತಾ ಕೇಳಿದಾಗ, ಅವರು ಹೇಳಿದರು ಈ ಹಿಂದೆ ಒಂದು ಆಡಿಶನ್‌ಗೆ ಹೋಗಿದ್ದೆ. ಆಡಿಶನ್ ಆದ ಮೇಲೆ ಮೊದಲ ಸುತ್ತಿನಲ್ಲಿ ಆಯ್ಕೆ ಆಗಿದ್ದರಂತೆ'.
'ಅದಾದ ಮೇಲೆ ಪ್ರತ್ಯೇಕವಾಗಿ ಒಂದು ಕೋಣೆಗೆ ಕರೆದುಕೊಂಡು ಹೋಗಿ ನಾನು, ನಮ್ಮ ಸಿನಿಮಾಟೋಗ್ರಾಫರ್ ಹಾಗೂ ನಮ್ಮ ನಿರ್ಮಾಪಕರು ಟ್ರಿಪ್ ಹೋಗುತ್ತಿದ್ದೇವೆ. ನಮ್ಮ ಜೊತೆ ಬಂದು ಬಿಡು ಆಗ ನಿನ್ನನ್ನೇ ಹಿರೋಯಿನ್ ಮಾಡುತ್ತೇನೆ ಈ ಸಿನಿಮಾಗೆ ಅಂದ್ರಂತೆ. ಅವತ್ತು ಭಯ ಆಗಿ ಹೋದವಳು ಮತ್ತೆ ಓದು ಮುಗಿಸಿ ವಾಪಸ್ ಬರಲಿಲ್ಲ. ಯಾಕೆಂದರೆ ನಟನೆ ಮೇಲೆ ಇಂಟ್ರಸ್ಟ್ ಕಡಿಮೆ ಆಯ್ತು. ಜೊತೆಗೆ ಭಯ ಶುರುವಾಯ್ತು ಅವಳಿಗೆ' ಎಂದು ಚೈತ್ರಾ ಆಚಾರ್ ಹೇಳಿದ್ದಾರೆ.

ಇನ್ನು 'ಅವಳಿಗೆ ಸಮಯದಲ್ಲಿ ಏನು ಮಾಡಬೇಕು, ಯಾರ ಬಳಿ ಹೇಳಿಕೊಳ್ಳಬೇಕು ಎನ್ನುವುದು ಗೊತ್ತಾಗಲಿಲ್ಲ. ಆ ಸಮಯದಲ್ಲಿ ಧೈರ್ಯವಾಗಿ ಮಾತನಾಡಲು ಅವಳಿಗೆ ಗೊತ್ತಿಲ್ಲದೇ ಇರಬಹುದು. ಅಥವಾ ಮಾತನಾಡಿದರೆ ಏನಾಗುತ್ತದೆಯೋ ಎನ್ನುವ ಭಯ ಅವಳಿಗೆ ಇರಬಹುದು. ಅದರಲ್ಲಿ ನಷ್ಟ ಆಗಿದ್ದು ಏನೆಂದರೆ ಅಷ್ಟು ವರ್ಷ ಅವಳು ಅವಳ ಕನಸುಗಳನ್ನು ನನಸು ಮಾಡಿಕೊಳ್ಳಲು ಟ್ರೈ ಮಾಡಲಿಲ್ಲ' ಎಂದರು.
'ಇದನ್ನು ಕೇಳಿದಾಗ ಏನು ಅನಿಸುತ್ತದೆ ಅಂದರೆ ಇಂತಹ ಸಮಯದಲ್ಲಿ ಯಾರಾದರೂ ಬೆಂಬಲಕ್ಕೆ ಇದ್ದರೆ ಒಳ್ಳೆಯದು ಅನಿಸುತ್ತದೆ. ಹುಡುಗನಿಗಾಗಿ ಹುಡುಗಿಗಾಗಲೇ ನಿಮ್ಮ ಕ್ಷೇತ್ರದಲ್ಲಿ ಅಸಮಾನತೆ ಇದ್ದರೆ, ದೌರ್ಜನ್ಯ ಆಗುತ್ತಿದ್ದರೆ, ಏನಾದರೂ ತೊಂದರೆ ಆಗುತ್ತಿದ್ದರೆ, ಅದನ್ನು ಹೇಳಿಕೊಳ್ಳಲು, ತೋಡಿಕೊಳ್ಳಲು, ಅವರೇ ಸಂಬಳ ಕೊಟ್ಟು ಇಟ್ಟುಕೊಂಡಿರುತ್ತಾರೆ. ನಮಗೆ ಕಾರ್ಪೋರೇಟಿವ್ ಸ್ಟಿಸ್ಟಮ್ ಬೇಡ. ಅದಕ್ಕಾಗಿಯೇ ನಾವು ಕಲಾವಿದರಾಗಿರುವುದು. ಹಾಗಂತ ನಿಯಮ ನೀತಿ ಇರಬಾರದು ಅಂತಿಲ್ಲ. ಆ ನೀತಿ ಬರಲಿ ಅಂತಾ ಈ ರೀತಿ ಕಮಿಟಿ ಮಾಡಿ ಎಂದು ಆಗ್ರಹಿಸಿರುವುದು ಎಂದು ಹೇಳಿದರು.












Click it and Unblock the Notifications