ನಿಜ ಜೀವನದಲ್ಲೂ ಪ್ರೀತಿಸಿ ಮೋಸ ಹೋದೆ ಅಮೃತಧಾರೆ ಮಲ್ಲಿ - ನಟಿ ಅನ್ವಿತಾ ಸಾಗರ್!
Anvitha Sagar: ಸಿನಿಮಾ ನಟಿಯರು & ಸೀರಿಯಲ್ ನಟಿಯರು ತೆರೆಯ ಮೇಲೆ ಕಾಣಿಸಿಕೊಳ್ಳುವುದುಕ್ಕೂ ಪರ್ಸನಲ್ ಲೈಫ್‌ಗೂ ಸಾಕಷ್ಟು ವ್ಯತ್ಯಾಸಗಳು ಇರುತ್ತೆ. ನಟರೂ ಸಹ ಇದರಿಂದ ಹೊರತಲ್ಲ. ವೈಯಕ್ತಿಕ ಜೀವನವೇ ಬೇರೆ ಚಿತ್ರರಂಗ ಮತ್ತು ಕಿರುತೆರೆಯೇ ಬೇರೆ. ಆದರೆ, ನಟಿ ಅನ್ವಿತಾ ಸಾಗರ್ ಅವರು ನನ್ನ ಜೀವನ ಹಾಗೂ ತೆರೆಮೇಲಿನ ಪಾತ್ರ ಎರಡೂ ಒಂದೇ ಆಗೋಗಿದೆ. ನಾನು ವೈಯಕ್ತಿಕ ಜೀವನದಲ್ಲಿಯೂ ತುಂಬಾ ನೋವು ಅನುಭವಿಸಿದ್ದೇನೆ. ಲವ್‌ಲೈಫ್ ಹಾಗೂ ಬ್ರೇಕ್ ಅಪ್‌ನ ಬಗ್ಗೆ ಅನ್ವಿತಾ ಅವರು ಮಾತನಾಡಿದ್ದಾರೆ. ಅನ್ವಿತಾ ಸಾಗರ್ ಕನ್ನಡ ಗಟ್ಟಿಮೇಳ ಸೀರಿಯಲ್‌ನ ಮೂಲಕ ಮನೆ ಮಾತಾಗಿದ್ದರು. ಇದೀಗ ಅಮೃತಧಾರೆ ಸೀರಿಯಲ್‌ನಲ್ಲಿ ಮಲ್ಲಿಯಾಗಿ ಮಿಂಚಿದ್ದಾರೆ. ಮಲ್ಲಿ ಪಾತ್ರಕ್ಕೆ ಸಂಕಷ್ಟ ಮತ್ತು ನೋವು ಜಾಸ್ತಿ. ನನ್ನ ನಿಜ ಜೀವನದಲ್ಲೂ ಇದೇ ಕಥೆ ಅಂತ ಅವರು ಹೇಳಿಕೊಂಡಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಈಗ ರೋಚಕ ತಿರುವನ್ನು ಪಡೆದುಕೊಂಡಿದೆ. ಮಲ್ಲಿ ಈಗ ಸೀರಿಯಲ್‌ನಲ್ಲಿ ಕೋಟ್ಯಾಧಿಪತಿ & ಅಪಾರ ಆಸ್ತಿಯ ಒಡೆತಿ. ಆದರೆ ನೋವುಗಳಿಂದಲೇ ಕುಸಿದಿರುವ ಪಾತ್ರ ಮಲ್ಲಿಯದ್ದು. ಆ ಪಾತ್ರದಷ್ಟೇ ನೋವನ್ನು ನಾನು ನನ್ನ ನಿಜ ಜೀವನದಲ್ಲೂ ಅನುಭವಿಸಿದ್ದೇನೆ ಎಂದು ಅನ್ವಿತಾ ಸಾಗರ್ ಅವರು ಹೇಳಿಕೊಂಡಿದ್ದಾರೆ. ಎಫ್ಡಿಎಫ್ಎಸ್ ಯುಟ್ಯೂಬ್ ಚಾನೆಲ್ ನಡೆಸಿರುವ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. ವೈಯಕ್ತಿಕ ಜೀವನ ಹಾಗೂ ಲವ್ ಬ್ರೇಕ್ ಅಪ್‌ನ ಬಗ್ಗೆ ಮೌನ ಮುರಿದಿದ್ದಾರೆ.

ನನ್ನ ನಿಜ ಜೀವನದಲ್ಲೂ ಮಲ್ಲಿಯ ರೀತಿಯಲ್ಲೇ ಇದ್ದೀನಿ. ನಾನೂ ಲವ್ ಮಾಡಿದ್ದೆ. ಆದರೆ ಈಗ ಎಲ್ಲಾ ಹೋಗಿದೆ. ಈಗ ಸಂತೋಷವೂ ಹೌದೋ ಅಲ್ವೋ ಗೊತ್ತಿಲ್ಲ. ಒಟ್ಟಿನಲ್ಲಿ ಲೈಫ್ ಹೋಗ್ತಿದೆ ಅಷ್ಟೇ. ನಾನು ಲವ್ ಮಾಡುತ್ತಿದ್ದ ಹುಡುಗನಿಂದ ದೊಡ್ಡದ್ದೇನು ನಾನು ನಿರೀಕ್ಷೆ ಮಾಡಿರಲಿಲ್ಲ. ಅವನು ಹೆಚ್ಚು ದುಡ್ಡು ಮಾಡಬೇಕು ಇಲ್ಲ ತುಂಬಾ ಒಳ್ಳೊಳ್ಳೆ ಜಾಗಗಳಿಗೆ ಕರೆದುಕೊಂಡು ಹೋಗಬೇಕು ಅಥವಾ ಇಂಟರ್ನ್ಯಾಷನಲ್ ಟೂರ್ ಮಾಡಬೇಕು ಅಂತೇನು ನಾನು ಆಸೆಪಟ್ಟಿರಲಿಲ್ಲ. ರಸ್ತೆ ಬದಿಯ ತಳ್ಳುವ ಗಾಡಿಯಲ್ಲಿ ಏನು ಕೊಡಿಸಿದರೂ ಸಾಕು. ಅಷ್ಟೊಂದು ಸಿಂಪಲ್ ಆಗಿರುವುದಕ್ಕೆ ಆಸೆಪಡುವವಳು ನಾನು. ಆದರೆ, ನನ್ನ ಜೀವನದಲ್ಲಿ ನಡೆದಿದ್ದೆಲ್ಲವೂ ಮೋಸವೇ. ತುಂಬಾ ಅನ್ಯಾಯ ಆಗಿದೆ ಅಂತ ನೋವಿನಿಂದಲೇ ಹೇಳಿಕೊಂಡಿದ್ದಾರೆ ಅನ್ವಿತಾ ಸಾಗರ್.
ನಾನು ಪ್ರೀತಿಸಿದವರಿಂದ ನಿರೀಕ್ಷೆ ಮಾಡಿದ್ದರಲ್ಲಿ ಸ್ವಲ್ಪಾದರೂ ಸಿಗದೇ ಇದ್ದಾಗ ತುಂಬಾ ಹರ್ಟ್ ಆಗುತ್ತದೆ. ನನಗೂ ಅದೇ ತರ ಆಗಿದೆ. ನಮ್ಮ ಜೀವನದ ಭಾಗವಾಗಿರುವವರು ನನಗೇ ಮೊದಲ ಆದ್ಯತೆ ಕೊಡಬೇಕು. ಬೇರೆ ಫ್ರೆಂಡ್ಸ್ ಬರುವುದು ಬೇಡ ಅಂತೇನೂ ಅನ್ನಲ್ಲ. ಆದರೆ ನನಗೆ ಪ್ರಿಫರೆನ್ಸ್ ಇರ್ಬೇಕು. ಅದು ಬಿಟ್ಟು ನನ್ನನ್ನು ನೆಗ್ಲೆಕ್ಟ್ ಮಾಡಿದರೆ, ಮನಸ್ಸಿಗೆ ತುಂಬಾ ನೋವಾಗುತ್ತದೆ. ನನ್ನ ಲೈಫ್ನಲ್ಲಿಯೂ ಅದೇ ಆಗಿದೆ ಎಂದಿದ್ದಾರೆ.
ರೋಚಕ ತಿರುವು: ಇನ್ನು ಅಮೃತಧಾರೆ ಸೀರಿಯಲ್ ದಿನಕ್ಕೊಂದು ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಹಳ್ಳಿಯಿಂದ ಬಂದ ಮುಗ್ದ ಹುಡುಗಿಯಾಗಿದ್ದ ಮಲ್ಲಿ ಅವರ ಪಾತ್ರಕ್ಕೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಬದಲಾಗಿದೆ. ಮಲ್ಲಿ ಈಗ ಸೀರಿಯಲ್‌ನಲ್ಲಿ ಕೋಟ್ಯಾಧಿಪತಿ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಈ ಸೀರಿಯಲ್ ಯಾವ ರೀತಿ ತಿರುವು ಪಡೆದುಕೊಳ್ಳಲಿದೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಇದೆ. ಪತಿ ಜೈದೇವ್ ಆಸ್ತಿಯ ಆಸೆಗಾಗಿ ಮತ್ತೆ ಮಲ್ಲಿಯ ಬಳಿ ಬರುವ ಸಾಧ್ಯತೆ ಇದೆ ಅಂತಲೇ ಪ್ರೇಕ್ಷಕರು ನಿರೀಕ್ಷಿಸುತ್ತಿದ್ದಾರೆ.
ಕೋಟ್ಯಾಧಿಪತಿ ಆಗಿರುವ ಮಲ್ಲಿ ಉದ್ಯಮಿಯಾಗಿ ಬದಲಾಗಲಿದ್ದಾರೆಯೇ ಅಥವಾ ಜೈದೇವ್ ಇವರ ಬಳಿ ಮತ್ತೆ ಬರುವಂತೆ ಕತೆ ಸಾಗಲಿದೆಯೇ ಎಂದು ಪ್ರೇಕ್ಷಕರು ಎದುರು ನೋಡುತ್ತಿದ್ದಾರೆ.












Click it and Unblock the Notifications