ಬೇಡ ಬೇಡ ಅಂದ್ರೂ ದರ್ಶನ್ ನನ್ನ ಕಾಲಿನಿಂದ ಒದ್ದಿಸಿಕೊಂಡ್ರು..! ಎಂದ ಖ್ಯಾತ ನಟ
ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿಯಾಗಿರುವ ನಟ ದರ್ಶನ್ ತೂಗುದೀಪ ಅವರು ಸದ್ಯ ಮಧ್ಯಂತರ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದಾರೆ. ಮತ್ತೊಂದೆಡೆ ದರ್ಶನ್ ಅವರು ನಟಿಸಿದ್ದ ನವಗ್ರಹ ಸಿನಿಮಾ ನವೆಂಬರ್ 8ರಂದು ರೀರಿಲೀಸ್ ಆಗಲಿದೆ. ಜಗ್ಗು ಗ್ಯಾಂಗ್ ಮತ್ತೆ ಒಂದಾಗಿದ್ದು, ಈ ಸಿನಿಮಾದಲ್ಲಿ ನಟಿಸಿದ್ದ ಮರಿ ಟೈಗರ್ ವಿನೋದ್ ಪ್ರಭಾಕರ್ ಅವರು ದರ್ಶನ್ ಅವರೊಂದಿಗಿನ ಒಡನಾಟದ ಬಗ್ಗೆ ಮಾತನಾಡಿದ್ದಾರೆ.
ಇನ್ನು ನವಗ್ರಹ ಸಿನಿಮಾದಲ್ಲಿ ದರ್ಶನ್ ಸ್ನೇಹಿತನ ಪಾತ್ರದಲ್ಲಿ ವಿನೋದ್ ಪ್ರಭಾಕರ್ ಕೂಡ ನಟಿಸಿದ್ದರು. ಈ ಸಿನಿಮಾದಲ್ಲಿ ದರ್ಶನ್ ಹಾಗೂ ವಿನೋದ್ ಅವರ ನಡುವೆ ಕ್ಲೈಮ್ಯಾಕ್ಸ್‌ನಲ್ಲಿ ಭರ್ಜರಿ ಫೈಟ್ ಸೀನ್ ಕೂಡ ಇತ್ತು. ಈ ದೃಶ್ಯದ ಶೂಟಿಂಗ್ ವೇಳೆ ನಡೆದಿದ್ದ ಘಟನೆಯೊಂದನ್ನು ವಿನೋದ್ ಪ್ರಭಾಕರ್ ನೆನೆದಿದ್ದಾರೆ.

ದರ್ಶನ್ ಜೊತೆಗಿನ ಫೈಟ್ ಸೀನ್ ಶೂಟಿಂಗ್ ಮಾಡುವಾಗ ವಿನೋದ್ ಅವರು ದರ್ಶನ್ ಅವರ ಎದೆಗೆ ಕಾಲಿನಿಂದ ಒದೆಯುವ ಸೀನ್ ಇತ್ತು. ಇದಕ್ಕೆ ನಾನು ಒಪ್ಪಿರಲಿಲ್ಲ. ದರ್ಶನ್ ಅವರಿಗೆ ಕಾಲಿನಿಂದ ಒದೆಯುವ ಸೀನ್ ನನಗೂ ಇಷ್ಟವಿರಲಿಲ್ಲ. ಮೊದಲಿಗೆ ನನಗೆ ಈ ಸೀನ್ ಬೇಸರ ತರಿಸಿದ್ದು ನಿಜ ಎಂದು ವಿನೋದ್ ಹೇಳಿಕೊಂಡಿದ್ದಾರೆ.
ಈ ವೇಳೆ ದರ್ಶನ್ ಅವರೇ ಖುದ್ದಾಗಿ ತನ್ನ ಎದೆಗೆ ಕಾಲಿನಿಂದ ಒದೆಯುವಂತೆ ಕೇಳಿಕೊಂಡಿದ್ದರು. ಅದಕ್ಕೂ ನಾನು ಒಪ್ಪಲಿಲ್ಲ. ಕೊನೆಗೆ ಅವರೇ ನನ್ನ ಕಾಲನ್ನು ಹಿಡಿದು ತಮ್ಮ ಎದೆಗೆ ಒದ್ದಿಸಿಕೊಂಡರು ಎಂದು ವಿನೋದ್ ಪ್ರಭಾಕರ್ ಇತ್ತೀಚಿನ ವಿಡಿಯೋವೊಂದರಲ್ಲಿ ರಿವೀಲ್ ಮಾಡಿದ್ದಾರೆ.

ಬಾಸ್ ಇದೆಲ್ಲ ಬೇಡ ಎಂದು ಎಷ್ಟು ಕೇಳಿದ್ರೂ ದರ್ಶನ್ ಒಪ್ಪಲೇ ಇಲ್ಲ. ನೀವು ಸುಮ್ಮನೆ ಕಾಲನ್ನು ಫ್ರೀಬಿಡಿ..ಎಂದು ಹೇಳಿದರು. ಕೊನೆಗೆ ಅವರೇ ನನ್ನ ಕಾಲನ್ನು ಎಳೆದುಕೊಂಡು ಅವರ ಎದೆಗೆ ಒದ್ದಿಸಿಕೊಂಡ್ರು. ನನ್ನ ಪ್ರಕಾರ ಅವರ ಮಟ್ಟಕ್ಕೆ ಬೆಳೆದಿದ್ದ ಯಾರೂ ಕೂಡ ಅಂತಹ ದೃಶ್ಯವನ್ನು ಒಪ್ಪುತ್ತಿರಲಿಲ್ಲ ಎಂದೂ ವಿನೋದ್ ಅವರು ಹೇಳಿದ್ದಾರೆ.
ದರ್ಶನ್ನೇ ವಿಲನ್ ಕ್ಯಾರೆಕ್ಟರ್ ಒಪ್ಪಿಕೊಂಡ: ನವಗ್ರಹ ಸಿನಿಮಾದಲ್ಲಿ ದರ್ಶನ್ ಅವರು ವಿಲನ್ ಪಾತ್ರವನ್ನೇ ಮಾಡಿ ಗಮನ ಸೆಳೆದಿದ್ದರು. ಇದಕ್ಕೆ ಕಾರಣ ಏನೆಂದು ಈ ಸಿನಿಮಾ ಡೈರೆಕ್ಟರ್ ಹಾಗೂ ದರ್ಶನ್ ಅವರ ಸಹೋದರ ದಿನಕರ್ ತೂಗುದೀಪ ರಿವೀಲ್ ಮಾಡಿದ್ದಾರೆ.

ದರ್ಶನ್‌ಗೆ ಮೊದಲಿನಿಂದಲೂ ನೆಗೆಟಿವ್ ಕ್ಯಾರೆಕ್ಟರ್ ಮಾಡಬೇಕು ಎನ್ನುವ ಆಸೆಯಿತ್ತು. ನಮ್ಮ ತಂದೆಯವರು ವಿಲನ್ ಆಗಿ ನಟಿಸಿದರೂ ಅವಾರ್ಡ್ ಬಂದಿರಲಿಲ್ಲ. ಹಾಗಾಗಿ ದರ್ಶನ್ ವಿಲನ್ ಪಾತ್ರಕ್ಕೆ ಅವಾರ್ಡ್ ತಗೋಬೇಕು ಎನ್ನುವ ಆಸೆ ಇತ್ತು. ಅದನ್ನು ತಂದೆ ತೂಗುದೀಪ ಶ್ರೀನಿವಾಸ್ ಅವರಿಗೆ ಡೆಡಿಕೇಟ್ ಮಾಡಬೇಕು ಎಂದುಕೊಂಡಿದ್ದ ಎಂದು ದಿನಕರ್ ಹೇಳಿದ್ದಾರೆ.
ಅಲ್ಲದೆ ಈ ಪಾತ್ರವನ್ನೂ ಇನ್ನೂ ಕೆಟ್ಟದಾಗಿ ನಿರ್ವಹಿಸುವಂತೆ ದರ್ಶನ್ ಕೇಳಿಕೊಂಡಿದ್ದ. ಜನ ನನ್ನ ನೋಡಿ ಚೆನ್ನಾಗಿ ಬೈದುಕೊಳ್ಳಬೇಕು ಆ ರೀತಿ ಪಾತ್ರ ರೆಡಿ ಮಾಡು ಎಂದಿದ್ದ. ಆದರೆ, ನಾನು ಹೀರೋ ಹಾಗೂ ವಿಲನ್ ಪಾತ್ರವನ್ನು ಬ್ಯಾಲೆನ್ಸ್ ಮಾಡಿದೆ ಎಂದು ದಿನಕರ್ ಅವರು ತಮ್ಮ ನವಗ್ರಹ ಟೀಂ ಜೊತೆಗೆ ವಿಚಾರ ಹಂಚಿಕೊಂಡಿದ್ದಾರೆ.












Click it and Unblock the Notifications