ಹೀರೋಯಿನ್ ತುಟಿಯನ್ನ ರಕ್ತ ಬರುವಂತೆ ಕಚ್ಚಿದ ಸ್ಟಾರ್ ಹೀರೋ, ಆಗ ನಟಿ ಮಾಡಿದ್ದೇನು?

ಒಂದು ಕಾಲದಲ್ಲಿ ಸಿನಿಮಾಗಳನ್ನು ಕುಟುಂಬದೊಂದಿಗೆ ಕುಳಿತು ನೋಡಬಹುದಾಗಿತ್ತು. ಆದರೆ ಈಗ ಸಿನಿಮಾಗಳು ಕೂಡ ಟ್ರೆಂಡ್‌ಗೆ ತಕ್ಕಂತೆ ಬದಲಾಗಿವೆ. ಇಂದಿನ ಪೀಳಿಗೆಯ ಚಿತ್ರಗಳಲ್ಲಿ ರೊಮ್ಯಾಂಟಿಕ್‌ ದೃಶ್ಯಗಳ ಜೊತೆಗೆ ಕಾಮಭರಿತ ಸನ್ನಿವೇಶಗಳನ್ನು ಹೆಚ್ಚಾಗಿ ತುಂಬಲಾಗುತ್ತಿದೆ. ಇದರಿಂದ ಥಿಯೇಟರ್‌ಗಳಿಗೆ ಬರುವ ಕುಟುಂಬ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗುತ್ತಲೇ ಇದೆ. ಈ ಹಿಂದೆ ನಟರು ಕೂಡ ರೊಮ್ಯಾಂಟಿಕ್‌ ದೃಶ್ಯಗಳಲ್ಲಿ ನಟಿಸಲು ಹಿಂಜರಿಯುತ್ತಿದ್ದರು. ಆದರೆ ಈಗಿನ ನಟರು ಈ ರೀತಿಯ ದೃಶ್ಯಗಳಿಗೆ ಹೆಚ್ಚಿನ ಸಂಭಾವನೆ ಕೇಳುವುದು ಸಾಮಾನ್ಯವಾಗಿದೆ. ಆದರೆ ಈ ಹಿಂದೆ ಖ್ಯಾತ ನಟರೊಬ್ಬರು ಶೂಟಿಂಗ್‌ ವೇಳೆ ಖ್ಯಾತ ನಟಿ ತುಟಿಯನ್ನ ರಕ್ತ ಬರುವಂತೆ ಕಚ್ಚಿದ್ದರು ಎಂಬುದು ಚರ್ಚೆಗೆ ಬಂದಿದೆ.

ಇತ್ತೀಚೆಗೆ ಒಂದು ದೃಶ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಜೋರಾಗಿದೆ. ಒಬ್ಬ ಸ್ಟಾರ್ ಹೀರೋ ಶೂಟಿಂಗ್ ವೇಳೆ ಹೀರೋಯಿನ್‌ನ ತುಟಿಯನ್ನು ಕಚ್ಚಿದ್ದು, ನಿರ್ದೇಶಕ "ಕಟ್" ಎಂದು ಹೇಳಿದರೂ ಕಂಟ್ರೋಲ್‌ ತಪ್ಪಿ ಆ ನಟ ಮುದ್ದಿಡುತ್ತಲೇ ಇದ್ದರು ಎಂದು ತಿಳಿದುಬಂದಿದೆ. ಆ ಹೀರೋ ಯಾರೋ ಅಲ್ಲ, ಬಾಲಿವುಡ್‌ ನಟ ವಿನೋದ್ ಖನ್ನಾ (Vinod Khanna).

actor-vinod-khanna-bit-madhuri-dixit-lip-during-dayavan-shoot-controversy-revisited

ಇನ್ನು ಆ ಹೀರೋಯಿನ್ ಕೂಡ ಬೇರೆ ಯಾರೂ ಅಲ್ಲ, ಪಡ್ಡೆ ಹುಡುಗರ ನಿದ್ದೆ ಕದಿಯುವ ಮಾಧುರಿ ದೀಕ್ಷಿತ್ (Madhuri Dixit). ʼದಯಾವಾನ್ʼ ಸಿನಿಮಾದ ರೊಮ್ಯಾಂಟಿಕ್‌ ಸೀನ್‌ ಶೂಟಿಂಗ್‌ ವೇಳೆ ಈ ಘಟನೆ ನಡೆದಿತ್ತು ಎನ್ನಲಾಗಿದೆ. ನಟ ವಿನೋದ್ ಖನ್ನಾ ಅವರು ತಮ್ಮ ಪಾತ್ರದಲ್ಲಿ ಎಷ್ಟು ಲೀನವಾಗಿದ್ದರು ಎಂದರೆ ನಿರ್ದೇಶಕರು ಕಟ್, ಕಟ್‌ ಎಂದರೂ ಕೂಡ ನಟ ತಮ್ಮ ರೊಮ್ಯಾನ್ಸ್‌ ನಿಲ್ಲಿಸಲೇ ಇಲ್ಲವಂತೆ. ಮಾಧುರಿ ದೀಕ್ಷಿತ್ ತುಟಿಯನ್ನು ಗಟ್ಟಿಯಾಗಿ ಕಚ್ಚಿದ ಪರಿಣಾಮ ಅವರ ತುಟಿಯಿಂದ ರಕ್ತ ಸುರಿದಿತ್ತು. ಈ ಘಟನೆಯಿಂದ ಸೆಟ್‌ನಲ್ಲಿದ್ದ ಎಲ್ಲರೂ ಶಾಕ್ ಆಗಿದ್ದರು. ವಿನೋದ್‌ ಅವರ ವರ್ತನೆ ಹಾಗೂ ತುಟಿಯ ನೋವು ಸಹಿಸಲಾರದೆ ಮಾಧುರಿ ದೀಕ್ಷಿತ್ ಅಳುತ್ತಾ ಸೆಟ್‌ನಿಂದ ಹೊರಟುಹೋಗಿದ್ದರಂತೆ.

ವಿವಾದಕ್ಕೆ ಗುರಿಯಾಗಿದ್ದ ದೃಶ್ಯ

ಈ ಘಟನೆ ಬಳಿಕ ನಿರ್ದೇಶಕ ಫಿರೋಜ್ ಖಾನ್ ಮತ್ತು ನಟ ವಿನೋದ್ ಖನ್ನಾ ಇಬ್ಬರೂ ಮಾಧುರಿಗೆ ಕ್ಷಮೆ ಕೇಳಿದ್ದರು. ಆ ಘಟನೆ ಮರೆತು ನಟಿ ಶೂಟಿಂಗ್‌ ಪೂರ್ಣಗೊಳಿಸಿದ್ದರು. ಆದರೆ ಸಿನಿಮಾ ಬಿಡುಗಡೆಯಾದ ನಂತರ ಆ ರೊಮ್ಯಾಂಟಿಕ್‌ ಸೀನ್‌ ಬಗ್ಗೆ ಹಲವಾರು ವಿವಾದಗಳು ಸೃಷ್ಟಿಯಾಗಿತ್ತು. ಆಗ ಮಾಧುರಿ ದೀಕ್ಷಿತ್ ಅವರೇ ಖುದ್ದಾಗಿ ಸಿನಿಮಾ ನಿರ್ದೇಶಕರನ್ನು ಭೇಟಿಯಾಗಿ ಆ ದೃಶ್ಯವನ್ನು ತೆಗೆಯುವಂತೆ ಕೇಳಿಕೊಂಡಿದ್ದರು. ಆದರೆ ಫಿರೋಜ್ ಖಾನ್ ಈ ದೃಶ್ಯವೇ ಸಿನಿಮಾಗೆ ಹೃದಯ, ಪ್ರೇಕ್ಷಕರು ಇದಕ್ಕಾಗಿ ಬರುತ್ತಾರೆ ಎಂದು ಹೇಳಿ ಅದನ್ನು ತೆಗೆಯಲು ನಿರಾಕರಿಸಿದ್ದರು. ಆ ದೃಶ್ಯವನ್ನು ಸಿನಿಮಾದಲ್ಲಿ ಉಳಿಸಿಕೊಳ್ಳಲು ನಟ ಹಾಗೂ ನಿರ್ದೇಶಕರು ಸುಮಾರು 1 ಕೋಟಿ ರೂಪಾಯಿ ಹೆಚ್ಚುವರಿ ಖರ್ಚು ಮಾಡಿದ್ದರು ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+