ಮಾಜಿ ಪ್ರೇಯಸಿಯಿಂದ ದೂರು: ಕೈ ಮುಗಿದು ಕಣ್ಣೀರಿಟ್ಟ ನಟ ವರುಣ್ ಆರಾಧ್ಯ

ಬೆಂಗಳೂರು, ಸೆಪ್ಟೆಂಬರ್‌ 13: ಬೃಂದಾವನ ಧಾರಾವಾಹಿ ಖ್ಯಾತಿಯ ನಟ ವರುಣ್ ಆರಾಧ್ಯ ತಮ್ಮ ಮಾಜಿ ಪ್ರೇಯಸಿಯ ಫೋಟೋ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಮಾಜಿ ಪ್ರೇಯಸಿ ವರ್ಷ ಕಾವೇರಿ ದೂರು ಕೊಟ್ಟಿದ್ದು, ಎಫ್‌ಐಆರ್‌ ಕೂಡ ದಾಖಲಾಗಿದೆ. ಈ ಸುದ್ದಿ ಸಖತ್‌ ವೈರಲ್‌ ಆಗುತ್ತಿದ್ದು, ಈ ಬಗ್ಗೆ ಸ್ವತಃ ವರುಣ್ ಸ್ಪಷ್ಟನೆ ನೀಡಿದ್ದಾರೆ.

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಬಗ್ಗೆ ವಿಡಿಯೋ ಮಾಡಿರುವ ವರುಣ್ ಕೈ ಮುಗಿದು ಕಣ್ಣೀರಿಟ್ಟಿದ್ದಾರೆ. ನೀವು ಸುದ್ದಿಗಳಲ್ಲಿ ನೋಡುತ್ತಿದ್ದೀರಾ ಬೃಂದಾವನ ಸೀರಿಯಲ್‌ ನಾಯಕ ವರುಣ್ ಆರಾಧ್ಯ ಒಬ್ರು ಮೇಲೆ ಕೊಲೆ ಬೆದರಿಕೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ ಸದ್ಯ ಪೊಲೀಸ್ ಅರೆಸ್ಟ್ ಮಾಡಿದ್ದಾರೆ ಜೈಲಿನಲ್ಲಿ ಇದ್ದಾನೆ ಎಂದು ಎಲ್ಲೆಡೆ ಹರಿದಾಡುತ್ತಿದೆ. ಯಾಕೆ? ನಾನು ನಮ್ಮ ಮನೆಯಲ್ಲಿ ಇದ್ದೀನಿ ಆ ವ್ಯಕ್ತಿ ಅವರ ಮನೆಯಲ್ಲಿ ಇದ್ದಾರೆ.

Actor Varun Aradya Give Clarification About Varsha Kaveri Complaint

ನಮ್ಮಿಬ್ಬರ ನಡುವೆ ಏನಾಗಿದೆ ಎಂದು ಕೇಳಿಕೊಂಡು ಸುದ್ದಿ ಮಾಡಿ ಯಾಕೆ ಸುಳ್ಳು ಸುದ್ದಿ ಹಾಕುತ್ತಿದ್ದೀರಾ? ನಿನ್ನೆ ಆ ವ್ಯಕ್ತಿ ಪೊಲೀಸ್ ಠಾಣೆಯಲ್ಲಿ ಒಂದು ಮನವಿ ಮಾಡಿದ್ದಾರೆ. ಏನೆಂದರೆ 2018ರಂದು ನಾವಿಬ್ಬರು ಕ್ಲೋಸ್ ಆಗಿದ್ದಾಗ ಮಾಡಿದ್ದ ಫೋಟೋ ಮತ್ತು ವಿಡಿಯೋಗಳನ್ನು ಡಿಲೀಟ್ ಮಾಡಲು ಮನವಿ ಮಾಡಿದ್ದರು. ನಾನು ಬ್ಯುಸಿ ಇದ್ದ ಕಾರಣ ಪ್ರತಿಯೊಂದನ್ನು ಡಿಲೀಟ್ ಮಾಡಿರಲಿಲ್ಲ.

ಅಲ್ಲದೆ ನಮ್ಮ ಫ್ಯಾನ್ ಪೇಜ್‌ಗಳು ಅದನ್ನು ಪದೇ ಪದೇ ಪೋಸ್ಟ್ ಮಾಡುತ್ತಿರುವ ಕಾರಣ ಮನವಿ ಮಾಡಿದ್ದರು. ಇದರಿಂದ ಅವರು ಮದುವೆ ಆದರೆ ಸಮಸ್ಯೆ ಆಗುತ್ತದೆ ಅಥವಾ ಮುಂದೆ ನಾನು ಮದುವೆ ಆಗುವ ಸಮಯ ಬಂದಾಗ ತೊಂದರೆ ಆಗುತ್ತದೆ ಎಂದು ಈ ನಿರ್ಧಾರ ತೆಗೆದುಕೊಂಡಿರುವುದು. ಠಾಣೆಯಲ್ಲಿ ಇಬ್ಬರು ಪರಸ್ಪರ ಮಾತನಾಡಿಕೊಂಡು ಪೊಲೀಸರ ಮುಂದೆನೇ ಡಿಲೀಟ್ ಮಾಡಿದ್ದೇವೆ ಎಂದು ಸ್ಪಷ್ಟನೆ ನೀಡಿದರು.

Actor Varun Aradya Give Clarification About Varsha Kaveri Complaint

'ನನ್ನ ಅಮ್ಮ ಅಕ್ಕ ಸಿಕ್ಕಾಪಟ್ಟೆ ನೊಂದಿದ್ದಾರೆ. ಏನೂ ತಪ್ಪು ಮಾಡಿಲ್ಲ ಅಂದರೂ ಪದೇ ಪದೇ ಸುಮ್ಮನೆ ನನ್ನ ಮೇಲೆ ಸುಳ್ಳು ಆರೋಪ ಬರುತ್ತಿದೆ. ಸುಳ್ಳು ಹೇಳಿಕೆಗಳನ್ನು ಕೊಡುತ್ತಿದ್ದಾರೆ. ನಾನು ಬೆಳೆಯಬೇಕು ಅಂತಾ ತುಂಬಾ ಪ್ರಯತ್ನ ಪಡುತ್ತಿದ್ದೇನೆ. ಆದರೆ ಯಾರೂ ಬೆಳೆಯಲು ಬಿಡುತ್ತಿಲ್ಲ. ಎಲ್ಲರೂ ನನ್ನ ಒಳ್ಳೆತನವನ್ನು ಮಿಸ್‌ ಯೂಸ್‌ ಮಾಡಿಕೊಳ್ಳುತ್ತಿದ್ದಾರೆ' ಎಂದು ವರುಣ್‌ ಕಣ್ಣೀರು ಹಾಕಿದ್ದಾರೆ.

'ನಮ್ಮ ಮನೆಯಲ್ಲಿ ಅಮ್ಮ ಅಕ್ಕ ಮತ್ತು ಹುಡುಗಿ ಎಲ್ಲಾರೂ ಇದ್ದಾರೆ. ನಾನು ಯಾಕೆ ಬೇರೆ ಅವರ ಮನೆ ಹೆಣ್ಣುಮಗಳ ಜೊತೆ ಆ ರೀತಿ ವರ್ತಿಸಲಿ. ಅವರನ್ನು ಯಾಕೆ ಕೊಲೆ ಮಾಡುತ್ತೇನೆ ಅಂತಾ ಹೇಳಲಿ. ಒಬ್ಬ ಮನುಷ್ಯ ಎಷ್ಟು ಅಂತಾ ನೆಗೆಟಿವ್‌ ತೆಗೆದುಕೊಳ್ಳು ಸಾಧ್ಯ. ನಾನು ಅಳಲ್ಲ, ನಾನು ಧೈರ್ಯ ಅಂತಾ ನಾನು ಅಂದುಕೊಳ್ಳುತ್ತೇನೆ. ಆದರೆ ಮನೆಯವರೆಲ್ಲಾ ನೊಂದಾಗ ಕೈ ಕಾಲುಗಳು ನಡುಗಿ ಹೋಗುತ್ತದೆ.

ಕೈ ಮುಗಿದು ಕೇಳಿಕೊಳ್ಳುತ್ತೀನಿ ಜೀವನದಲ್ಲಿ ಇನ್ನು ಸಾಧನೆ ಮಾಡಬೇಕು ಅನ್ನೋದು ಮಾತ್ರ ನನ್ನ ತಲೆಯಲ್ಲಿದೆ. ಏನೋ ಹೊಂದಾಣಿಕೆ ಇಲ್ಲದೇ ನಾವು ಬ್ರೇಕಪ್ ಮಾಡಿಕೊಂಡಿದ್ದೇವೆ. ಬೇರೆ..ಬೇರೆ ಜೀವನ ನಡೆಸುತ್ತಿದ್ದೇವೆ. ಅವರು ಹೇಳಿದ್ದು ತುಂಬಾ ಹಳೆಯ ವಿಡಿಯೋ ಸಾವಿರಾರು ವಿಡಿಯೋಗಳಲ್ಲಿ ಹುಡುಕಿ ಹೋಗಿ ಡಿಲೀಟ್‌ ಮಾಡುವಷ್ಟು ಸಮಯ ಇರಲಿಲ್ಲ. ಅದಕ್ಕೆ ಅವರು ದೂರು ಕೊಟ್ಟಿದ್ದರು. ಅದಕ್ಕಾಗಿ ಅವರು ದೂರು ಕೊಟ್ಟಿದ್ದರು ಈಗ ಳೆಯ ವಿಡಿಯೋ ಮತ್ತು ಫೋಟೋಗಳನ್ನು ಡಿಲೀಟ್ ಮಾಡಲಾಗಿದೆ. ಹೀಗಾಗಿ ದಯವಿಟ್ಟು ಕೈ ಮುಗಿದು ಕೇಳಿಕೊಳ್ಳುತ್ತೇನೆ. ಈ ವಿಚಾರವನ್ನು ಇಲ್ಲಿಗೆ ಬಿಟ್ಟು ಬಿಡಿ ಎಂದು ವರುಣ್‌ ಮನವಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+