Upendra's Film Re-Release: ಬಹುಕೋಟಿ ಗಳಿಸಿದ್ದ ಸಿನಿಮಾ ಮೇ. 17ಕ್ಕೆ ಮರು ಬಿಡುಗಡೆ
ಬೆಂಗಳೂರು, ಮೇ 12: ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಯಾವ ಸ್ಟಾರ್ ನಟರ ಹೊಸ ಸಿನಿಮಾಗಳು ಥಿಯೇಟರ್‌ಗೆ ಲಗ್ಗೆ ಇಟ್ಟಿಲ್ಲ. ಇದರ ಮಧ್ಯೆ ಐಪಿಎಲ್ ಮತ್ತು ಲೋಕಸಭಾ ಚುನಾವಣೆ ಕಾರಣದಿಂದ ಜನರು ಥಿಯೇಟರ್ ಕಡೆ ಮುಖ ಮಾಡಿಲ್ಲ. ಮೊನ್ನೆಯಷ್ಟೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Puneeth Rajkumar) ಅವರ ಎರಡು ಸಿನಿಮಾಗಳು ಮರು ಬಿಡುಗಡೆ ಆದವು. ಇದೀಗ ರಿಯಲ್ ಸ್ಟಾರ್ ಉಪೇಂದ್ರ (Actro Upendra) ಅವರ ಸಿನಿಮಾಗೂ ರೀ-ರಿಲೀಸ್ ಭಾಗ್ಯ ಸಿಕ್ಕಿದೆ.
ಹೌದು, ಜಾಕಿ ಸಿನಿಮಾ ಮರು ಬಿಡುಗಡೆ ಬಳಿಕ ಅಪ್ಪು ಅವರ 'ಅಂಜನಿಪುತ್ರ' ಹಾಗೂ 'ಪವರ್' ನಿನಿಮಾಗಳು ಮತ್ತೆ ಕರ್ನಾಟಕ ರಾಜ್ಯಾದ್ಯಂತ ತೆರೆ ಕಂಡವು. ಆದರೆ ಈ ಸಿನಿಮಾಗಳ ಮರು ಪ್ರದರ್ಶನಕ್ಕೆ ಸ್ವತಃ ಅಪ್ಪು ಅಭಿಮಾನಿಗಳೇ ಬೇಸರ ವ್ಯಕ್ತಪಡಿಸಿದರು.

ಏಕೆಂದರೆ, ಅಪ್ಪು ಅವರ ಎರಡು ಸಿನಿಮಾಗಳನ್ನು ಒಂದೇ ದಿನ ರೀ-ರಿಲೀಸ್ ಮಾಡಿರುವುದು ಸರಿಯಲ್ಲ. ಜಾಕಿ ರೀತಿಯಲ್ಲಿ ಅದ್ಧೂರಿಯಾಗಿ ಸಿನಿಮಾ ಸ್ವಾಗತಿಸಲು ಅಪ್ಪು ಅಭಿಮಾನಿಗಳು ಪ್ಲಾನ್ ಮಾಡಿದ್ದರು. ಆದರೆ ಒಂದೇ ದಿನ ಎರಡು ಸಿನಿಮಾ ರಿ-ರೀಲಿಸ್ ಮಾಡಿದ್ದು ಸರಿಯಲ್ಲ ಎಂದು ನಿರ್ಮಾಪಕರ ಮೇಲೆ ಅಭಿಮಾನಿಗಳು ಬೇಸರ ಹೊರ ಹಾಕಿದ್ದಾರೆ.
ಕಳೆದ ಮೇ 10ರಂದು ನಟಿ ರಶ್ಮಿಕಾ ಮಂದಣ್ಣ -ಪುನೀತ್ ರಾಜ್ ಕುಮಾರ್ ನಟನೆಯ 'ಅಂಜನಿಪುತ್ರ' ಹಾಗೂ ಬಹುಬಾಷಾ ನಟಿ ತ್ರಿಶಾ ಮತ್ತು ಅಪ್ಪು ಅವರ ನಟಿಸಿರುವ ಪವರ್ ಸಿನಿಮಾ ಒಂದೇ ದಿನ ಮರು ಬಿಡುಗಡೆ ಆಗಿವೆ.

ಮೇ 17ರಂದು ಉಪೇಂದ್ರ ಅವರ A ಸಿನಿಮಾ ತೆರೆಗೆ
ಇದರ ಬೆನ್ನಲ್ಲೆ ರಿಯಲ್ ಸ್ಟಾರ್, ನಿರ್ದೇಶಕ ಉಪೇಂದ್ರ ಅವರು ಸಿನಿಮಾವೊಂದು ಮತ್ತೆ ಅಭಿಮಾನಿಗಳ ಮುಂದೆ ಬರಲಿದೆ. ಹೌದು, ಉಪೇಂದ್ರ ಅವರ ನಟಿಸಿ ನಿರ್ದೇಶಿಸಿರುವ 'A' ಸಿನಿಮಾವನ್ನು ಇದೇ ಮೇ 17 ರಂದು ಮರು ಬಿಡುಗಡೆ ಆಗಲಿದೆ ಎಂದು ತಿಳಿದು ಬಂದಿದೆ.
ಹೌದು UI ಸಿನಿಮಾ ತಯಾರಿಯಲ್ಲಿರುವ ಉಪೇಂದ್ರ ಅವರು ಸದಾ ತಮ್ಮ ನಿರ್ದೇಶನದ ಸಿನಿಮಾಗಳ ಮೂಲಕ ಹೊಸ ಕಥೆ, ಸಂಭಾಷಣೆ ಮೂಲಕವೇ ಜನರ ತಲೆಗೆ ಕೈ ಹಾಕುತ್ತಾರೆ. ಅಂದು 1998ರಲ್ಲಿ ಬಿಡುಗಡೆ ಮಾಡಿದ್ದ 'ಎ' ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು. ಅಂದಿನ ಕಾಲದಲ್ಲಿಯೇ 20 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಸುಮಾರು ಒಂದೂವರೆ ಕೋಟಿ ಹಣದಲ್ಲಿ 'ಎ' ಸಿನಿಮಾ ಸಿದ್ಧವಾಗಿತ್ತು.
ಹೊಸ ಸಿನಿಮಾದ ತಯಾರಿ ಮಧ್ಯೆ ಉಪೇಂದ್ರ ಅವರು 'ಎ' ಸಿನಿಮಾವನ್ನು ಮತ್ತೆ ತೆರೆಗೆ ತರಲಿದ್ದಾರೆ. ಈ ಸಿನಿಮಾ ಮುಂದಿನ ಮೇ 17ರಂದು ಶುಕ್ರವಾರ ಮರು ಬಿಡುಗಡೆ ಆಗಲಿದ್ದು, ಅವರ ಅಭಿಮಾನಿಗಳು ಸ್ವಾಗತಿಸಲು ಸಜ್ಜಾಗಿದ್ದಾರೆ.












Click it and Unblock the Notifications