Shiva Rajkumar: ಸಾವನ್ನೇ ಗೆದ್ದು ಬಂದ ರಿಯಲ್ ಹೀರೋ- ಮನಬಿಚ್ಚಿ ಮಾತನಾಡಿದ ಶಿವಣ್ಣ
ಕ್ಯಾನ್ಸರ್ ಒಂದು ಗಂಭೀರ ಕಾಯಿಲೆ. ಈ ಕಾಯಿಲೆ ಯಾರಿಗೂ ಕೂಡ ಬರಬಾರದು. ಒಂದು ವೇಳೆ ಕಾಯಿಲೆ ಬಂದರೆ ಜೀವನ ಪೂರ್ತಿ ನರಕ. ವಿಶೇಷವಾಗಿ ಕ್ಯಾನ್ಸರ್ ಮೂರು ಅಥವಾ ನಾಲ್ಕನೇ ಹಂತಕ್ಕೆ ಹೋದರೆ ಪ್ರಾಣ ಉಳಿಸಿಕೊಳ್ಳುವುದು ತುಂಬಾನೇ ಕಷ್ಟ. ಹೀಗಿರುವಾಗ ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅವರು ಇಂತಹ ಗಂಭೀರ ಕಾಯಿಲೆಯ ವಿರುದ್ಧ ಹೋರಾಡಿ ಗೆದ್ದು ಬಂದಿದ್ದಾರೆ. ತಮಗೆ ಕ್ಯಾನ್ಸರ್ ಇದೆ ಎಂದು ಗೊತ್ತಾದಾಗ ಶಿವರಾಜಕುಮಾರ್‌ಗೆ ಅನಿಸಿದ್ದು ಏನು? ಆ ಸಂದರ್ಭವನ್ನು ಅವರು ಜಯಿಸಿದ್ದು ಹೇಗೆ?
ಸಂದರ್ಶನವೊಂದರಲ್ಲಿ ಮಾತನಾಡಿದ ಡಾ. ಶಿವರಾಜಕುಮಾರ್ ಅವರು ತಾವು ಹೇಗೆ ಕ್ಯಾನ್ಸರ್ ವಿರುದ್ಧ ಹೋರಾಡಿದರು. ಆ ಕ್ಷಣ ಹೇಗಿತ್ತು. ಅವರು ಚಿಕಿತ್ಸೆಗೆ ಒಳಗಾದ ಸಂದರ್ಭವನ್ನು ಮನ ಬಿಚ್ಚಿ ಹಂಚಿಕೊಂಡಿದ್ದಾರೆ. ಸಾಮಾನ್ಯವಾಗಿ ಕ್ಯಾನ್ಸರ್ ದೇಹದಲ್ಲಿ ಇರುವುದು ಗೊತ್ತಾಗುವುದಿಲ್ಲ. ಆದರೆ ಶಿವಣ್ಣ ಅವರು ಇದನ್ನು ಗುರುತಿಸಿದ್ದರು. ಅದೃಷ್ಟವಶಾತ್ ಆ ದಿನ ಪತ್ನ ಗೀತಾ ಕೂಡ ಶಿವರಾಜಕುಮಾರ್ ಅವರೊಂದಿಗೆ ಇದ್ದರಂತೆ.

ಹೌದು.. ಶೂಟಿಂಗ್ ಹೋದಾಗ ಶಿವಣ್ಣ ಮೂತ್ರ ತುಂಬಾ ಕೆಂಪಾಗಿರುವುದನ್ನು ಗಮನಿಸಿದ್ದಾರೆ. ಅದನ್ನು ತಮ್ಮ ಪತ್ನಿ ಗೀತಾ ಕೂಡ ಗಮನಿಸಿದ್ದಾರೆ. ಇದನ್ನು ಗಂಭೀರವಾಗಿ ತೆಗೆದುಕೊಂಡು ವೈದ್ಯರ ಬಳಿ ಹೋಗಿ ಪರೀಕ್ಷೆಗಳನ್ನು ಮಾಡಿದ್ದಾರೆ. ಆಗಲೇ ಶಿವಣ್ಣ ಅವರಿಗೆ ಮಾರಕ ಕ್ಯಾನ್ಸರ್ ಇರುವುದು ಗೊತ್ತಾಗಿದೆ. ಅದೃಷ್ಟವಶಾತ್ ಕ್ಯಾನ್ಸರ್ ತುಂಬಾ ಮೈಲ್ಡ್ ಆಗಿ ಇತ್ತು. ಅದಕ್ಕೆ ಚಿಕಿತ್ಸೆ ಕೂಡ ಇದೆ ಅನ್ನೋದನ್ನು ಕೇಳಿ ಕುಟುಂಬಸ್ಥರು ಶಿವಣ್ಣ ಅವರಿಗೆ ಯಾವ ವಿಷಯವನ್ನೂ ಹೇಳಿರಲಿಲ್ಲ.
ಕ್ಯಾನ್ಸರ್ ಇರುವುದು ಕೇಳಿ ಶಿವಣ್ಣ ಫಸ್ಟ್ ರಿಯಾಕ್ಷನ್
ಕ್ಯಾನ್ಸರ್ ದೇಹದಲ್ಲಿ ಹರಡುವುದನ್ನು ತಡೆಯಲು ವೈದ್ಯರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು ಎಂದು ಸಲಹೆ ನೀಡಿದ್ದರು. ಆಗ ಗೀತಾ ಅವರು ಶಿವಣ್ಣ ಅವರಿಗೆ ಈ ವಿಚಾರ ಹೇಳಿದ್ದರಂತೆ. ಇದನ್ನ ಕೇಳಿದ ಶಿವಣ್ಣ ಒಂದು ಕ್ಷಣ ಮಾತೇ ನಿಲ್ಲಿಸಿದ್ದರಂತೆ. ಮನೆಯಲ್ಲ ಓಡಾಡಿ ನೋಡಿದ್ದರಂತೆ, ಮಕ್ಕಳನ್ನು, ಕುಟುಂಬಸ್ಥರು, ಆಪ್ತರನ್ನು ನೋಡಿ ಕಣ್ಣೀರು ಹಾಕಿದ್ದರಂತೆ ಶಿವಣ್ಣ.

ಕ್ಯಾನ್ಸರ್ ಬಗ್ಗೆ ಮುಚ್ಚಿಡಲು ಬಯಸದ ಶಿವಣ್ಣ
ಆದರೆ ಶಿವಣ್ಣ ಮಾತ್ರ ಯಾರ ಬಳಿಯೂ ತಮಗೆ ಇಂತಹ ಕಾಯಿಲೆ ಇದೆ ಎಂದು ಹೇಳಿಕೊಳ್ಳಲು ಹಿಂಜರಿಯಲಿಲ್ಲ. ಎಲ್ಲರ ಬಳಿ ಧೈರ್ಯವಾಗಿ ಕ್ಯಾನ್ಸರ್ ಇದೆ ಚಿಕಿತ್ಸೆಗೆ ಒಳಗಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಆದರೆ ಈ ವಿಚಾರವನ್ನು ಯಾರೂ ಕೂಡ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ಮಾಧ್ಯಮದವರೂ ಕೂಡ ಇಂತಹ ಕಾಯಿಲೆ ನನಗೆ ಇದೆ ಅನ್ನೋದನ್ನು ಹೇಳುವ ಮನಸ್ಸು ಮಾಡಿಲ್ಲ. ಶಿವಣ್ಣ ಅವರಿಗೆ ಎಲ್ಲರೂ ಕೂಡ ತುಂಬಾ ಪ್ರೀತಿ ತೋರಿಸಿದ್ದಾರೆ. ಅವರಿಗಾಗಿ ಪೂಜೆ ಮಾಡಿದ್ದಾರೆ. ಪತ್ನಿಯ ಧೈರ್ಯ, ಎಲ್ಲರ ಪೂಜಾ ಫಲವೇ ಇಂದು ಶಿವಣ್ಣ ಜೀವಂತವಾಗಿ ನಿಮ್ಮ ಮುಂದೆ ಕುಳಿತಿರುವುದು ಎಂದು ಶಿವಣ್ಣ ಮನ ಬಿಚ್ಚಿ ಮಾತನಾಡಿದ್ದಾರೆ.

ಶಿವಣ್ಣ ಶಸ್ತ್ರಚಿಕಿತ್ಸೆ ವೇಳೆ ಪತ್ನಿ ಗೀತಾ ಧೈರ್ಯ ತೋರಿದ್ದು ಹೇಗೆ?
ಶಿವಣ್ಣ ಅವರು ಶಸ್ತ್ರಚಿಕಿತ್ಸೆಗೆ ಒಳಗಾದಾಗ ಪತ್ನಿ ಗೀತಾ ಐದು ಗಂಟೆ ಜೀವವನ್ನೇ ಕೈಯಲ್ಲಿ ಹಿಡಿದುಕೊಂಡು ಆ ದೇವರ ಮೇಲೆ ಭಾರ ಹಾಕಿ ಕುಳಿತಿದ್ದರಂತೆ. ಶಿವಣ್ಣ ಅವರು ಮೊಲಿನಂತೆ ಆರೋಗ್ಯವಾಗಿ ಹೊರ ಬರಲಿ ಅನ್ನೋ ಪ್ರಾರ್ಥನೆ ಮಾಡುತ್ತಾ ಆಶ್ಪತ್ರೆಯಲ್ಲಿ ದೇವರನ್ನು ನೆನೆದು ಕುಳಿತಿದ್ದರಂತೆ ಗೀತಾ ಶಿವರಾಜ್ ಕುಮಾರ್.
'ಶಸ್ತ್ರಚಿಕಿತ್ಸೆಯ ದಿನ ಎಲ್ಲರೂ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸುವ ವೀಡಿಯೋವನ್ನು ನನ್ನೊಂದಿಗೆ ಹಂಚಿಕೊಂಡಿದ್ದರು. ವೈದ್ಯರು ಕೂಡ ನಮಗೆ ಧೈರ್ಯ ತುಂಬಿದ್ದರು. ಹೀಗಾಗಿ ನಾನು ಪಾಸಿಟಿವ್ ಆಗಿ ಯೋಚನೆ ಮಾಡುತ್ತಿದ್ದೆ' ಎಂದು ಗೀತಾ ಸಂದರ್ಶನದ ವೇಳೆ ಹೇಳಿಕೊಂಡಿದ್ದಾರೆ.
ಕ್ಯಾನ್ಸರ್ ಬಂದಾಗ ಹೆದರಬಾರದು- ಶಿವಣ್ಣ
ಕ್ಯಾನ್ಸರ್ ಇರುವುದು ಕೇಳಿದಾಗ ಎಲ್ಲರಿಗೂ ಭಯ ಆಗುತ್ತದೆ. ಅದು ಸಹಕ. ಮನುಷ್ಯನ ಸಹಜ ಗುಣ ಅದು. ಆದರೆ ಮುಂದೆ ಏನು ಮಾಡಬೇಕು ಅನ್ನೋದನ್ನು ಯೋಚಿಸಬೇಕು. ಸಮಸ್ಯೆಗೆ ಪರಿಹಾರ ಹುಡುಕಬೇಕು. ಸಮಸ್ಯೆಯಿಂದ ಹೊರ ಬರಲು ಪ್ರಯತ್ನ ಮಾಡಬೇಕು. ನಾವು ಅಷ್ಟೆ ಪ್ರಯತ್ನ ಮಾಡಿದೆವು. ಉಳಿದ್ದೆಲ್ಲಾ ಆ ದೇವರ ಮೇಲೆ ಭಾರ ಹಾಕಿದ್ವಿ. ಆ ದೇವರ ಕೃಪೆಯಿಂದ, ಕನ್ನಡ ಅಭಿಮಾನಿ ದೇವರುಗಳ ಆಶೀರ್ವಾದ, ಕುಟುಂಬಸ್ಥರ ಪ್ರೀತಿ, ಆಪ್ತರು ನೀಡಿದ ಧೈರ್ಯದಿಂದ ಇಂದು ಶಿವಣ್ಣ ನಿಮ್ಮ ಮುಂದೆ ಕುಳಿತಿದ್ದಾನೆ ಎಂದು ಶಿವರಾಜಕುಮಾರ್ ಹೇಳಿದರು.
ಒಟ್ಟಿನಲ್ಲಿ ಕ್ಯಾನ್ಸರ್ ನಂತಹ ಮಾರಕ ಕಾಯಿಲೆ ವಿರುದ್ಧ ಹೋರಾಡಿ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ತುಂಬಾ ಲವಲವಿಕೆಯಿಂದ ಇದ್ದಾರೆ. ಮತ್ತೆ ಹೊಸ ಜೀವನ ಶುರು ಮಾಡಿದ್ದಾರೆ. ಕ್ಯಾನ್ಸರ್ ಕಾಯಿಲೆ ಬಂದಾಗ ಒಬ್ಬ ರೋಗಿ ಹೇಗೆ ವರ್ತಿಸಬೇಕು, ಏನನ್ನು ಯೋಚನೆ ಮಾಡಬೇಕು, ಸಮಸ್ಯೆಗೆ ಹೇಗೆ ಪರಿಹಾರ ಕಂಡುಕೊಳ್ಳಬೇಕು ಅನ್ನೋದಕ್ಕೆ ಶಿವಣ್ಣ ಅವರು ಸಾಕ್ಷಿ. ಜೊತೆಗೆ ಇಂತಹ ಸಂದರ್ಭದಲ್ಲಿ ಕುಟುಂಬಸ್ಥರು ಭಯ ಪಡದೆ ರೋಗಿಗೆ ಭಯಪಡಿಸದೆ ಹೇಗೆ ವರ್ತಿಸಬೇಕು ಅನ್ನೋದಕ್ಕೆ ಶಿವರಾಜಕುಮಾರ್ ಅವರ ಪತ್ನಿ ಗೀತಾ ಕೂಡ ಮಾದರಿಯಾಗಿದ್ದಾರೆ.












Click it and Unblock the Notifications