Rishab Shetty: ರಿಷಬ್ ಶೆಟ್ಟಿಗೆ ಉಲ್ಟಾ ಹೊಡೆದ ಫ್ಯಾನ್ಸ್: ಸಿನಿಮಾ ಕೈ ಬಿಡುವಂತೆ ಒತ್ತಾಯ
ಸ್ಯಾಂಡಲ್‌ವುಡ್‌ನ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಗೆ ಕಾಂತಾರ-೧ ಚಿತ್ರದ ಬಳಿಕ ಅದೃಷ್ಟ ಸಂಪೂರ್ಣ ಬದಲಾಗಿದೆ. ಕಾಂತಾರ-೧ ಚಿತ್ರದ ಹಿಟ್ ಬಳಿಕ ರಿಷಬ್ ಶೆಟ್ಟಿಗೆ ಕಾಂತಾರ ಪ್ರೀಕ್ವೇಲ್ ಕೂಡ ಮಾಡುತ್ತಿದ್ದು, ಮುಂದಿನ ವರ್ಷ ಚಿತ್ರ ತೆರೆ ಕಾಣಲಿದೆ. ಇದರ ಜೊತೆ ಜೊತೆಗೆ ರಿಷಬ್ ಶೆಟ್ಟಿ ಇತರ ಭಾಷೆಯ ಸಿನಿಮಾಗಳಲ್ಲೂ ನಟಿಸುತ್ತಿದ್ದು, ಕೆಲವು ಆಯ್ದ ಪಾತ್ರಗಳನ್ನಷ್ಟೇ ಮಾಡುತ್ತಿದ್ದಾರೆ.
ಇತ್ತೀಚಿಗಷ್ಟೇ ರಿಷಬ್ ಶೆಟ್ಟಿ ಅಭಿನಯದ ತೆಲುಗಿನ ಜೈ ಹನುಮಾನ್ ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿತ್ತು. ಈ ಪೋಸ್ಟರ್ ನೋಡಿದ ಫ್ಯಾನ್ಸ್ ಫುಲ್ ಥ್ರಿಲ್ ಆಗಿದ್ದು, ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ಇದರ ಬೆನ್ನಲ್ಲೇ ರಿಷಬ್ ಶೆಟ್ಟಿ ಅಭಿನಯದ ಮತ್ತೊಂದು ಸಿನಿಮಾ ಘೋಷಣೆಯಾಗಿದೆ.

ಟಾಲಿವುಡ್ ಬಳಿಕ ಇದೀಗ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಬಾಲಿವುಡ್ನ ಬಿಗ್ ಬಜೆಟ್ ಸಿನಿಮಾ ಛತ್ರಪತಿ ಶಿವಾಜಿ ಮಹಾರಾಜ್ ಕುರಿತಾದ ಈ ಬಯೋಪಿಕ್‌ನಲ್ಲಿ ನಟಿಸಲಿದ್ದಾರೆ. ಖ್ಯಾತ ನಿರ್ದೇಶಕ ಸಂದೀಪ್ ಸಿಂಗ್ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಛತ್ರಪತಿ ಶಿವಾಜಿ ಮಹಾರಾಜ್ ಪಾತ್ರದಲ್ಲಿ ನಟಿಸಲಿದ್ದಾರೆ. ಖಡ್ಗ ಹಿಡಿದು ಛತ್ರಪತಿ ಶಿವಾಜಿ ಮಹಾರಾಜ್ ಲುಕ್‌ನಲ್ಲಿ ರಿಷಬ್ ಶೆಟ್ಟಿ ಕಾಣಿಸಿಕೊಂಡಿರುವ ಪೋಸ್ಟರ್ ಸಖತ್ ವೈರಲ್ ಆಗುತ್ತಿದೆ.
ರಿಷಬ್ ಶೆಟ್ಟಿಯ ಈ ಹೊಸ ಸಿನಿಮಾಗೆ ಕೆಲವು ಅಭಿಮಾನಿಗಳು ಜೈಕಾರ ಹಾಕುತ್ತಿದ್ದರೆ, ಬಹುತೇಕರು ಸಿನಿಮಾ ಕೈ ಬಿಡುವಂತೆ ಒತ್ತಡ ಹೇರುತ್ತಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ರಿಷಬ್ ಶೆಟ್ಟಿ ಪೋಸ್ಟ್‌ಗೆ ಕಮೆಂಟ್ ಮಾಡಿರುವ ಅಭಿಮಾನಿಗಳು, ನಮ್ಮ ಹೆಮ್ಮೆ ಕನ್ನಡತಿ ಬೆಳವಾಡಿ ಮಲ್ಲಮ್ಮನಿಗೆ ಕ್ಷಮೆ ಯಾಚಿಸಿದ ದೃಶ್ಯ ಇರಬೇಕು ನಿಮ್ಮ ಚಿತ್ರದಲ್ಲಿ ರಿಷಬ್ ಶೆಟ್ಟಿ ಅವರೇ ಇಲ್ಲವಾದಲ್ಲಿ ನಿಮ್ಮ ಚಿತ್ರಕ್ಕೆ ನನ್ನದೊಂದು ಧಿಕ್ಕಾರ, ಕರುನಾಡ ಲೂಟಿ ಹೊಡೆದ, ತಾಯಿ ಬೆಳವಾಡಿ ಮಲ್ಲಮ್ಮ ಕಾಲಿಗೆ ಬಿದ್ದು ಶರಣಾದ ಶಿವಾಜಿಯ ಸಿನಿಮಾ ಮಾಡಲು ಯಾವ ಆಧಾರದ ಮೇಲೆ ಒಪ್ಪಿ ಸಹಿ ಮಾಡುದ್ರಾ ಶೆಟ್ರೇ..?,

'ಇದೇ ಶಿವಾಜಿ ಹೆಸರು ಹೇಳಿಕೊಂಡು ಕನ್ನಡ ಬಾವುಟ ಸುಟ್ಟಾಗ ಕರ್ನಾಟಕ ಜನರ ಮೇಲೆ ದಾಳಿ ಮಾಡಿದಾಗ, ಕಣ್ಣಲ್ಲಿ ಏನು ಇಟ್ಟುಕೊಂಡಿದ್ದೀರಿ. ದುಡ್ಡು ಎಲ್ಲವನ್ನೂ ಬದಲಾಯಿಸುತ್ತಾ ಹೋಗುತ್ತೆ ಅನ್ನೋದಕ್ಕೆ ನೀನೇ ಸಾಕ್ಷಿ . ಕನ್ನಡಿಗರು ನಿಮ್ಮ ಸಿನಿಮಾ ನೋಡುವುದನ್ನು ನಿಲ್ಲಿಸುತ್ತಾರೆ. ನಮ್ಮ ಕನ್ನಡದ ನಟ ಕನ್ನಡ ನಾಡಿನ ರಾಜರನ್ನು ಬಿಟ್ಟು, ಕನ್ನಡ ನಾಡಿನ ಮೇಲೆ ಲೂಟಿ, ದಾಳಿ ಮಾಡಿದ ರಾಜನ ಪಾತ್ರ ಮಾಡುತ್ತಿದ್ದಾರೆ ಅಂದರೆ ನಮ್ಮೆಲ್ಲರ ದೊಡ್ಡ ದುರಂತವೇ ಸರಿ ಎಂದೆಲ್ಲಾ ಕಮೆಂಟ್ ಮಾಡುತ್ತಿರುವ ಜನರು ರಿಷಬ್ ಶೆಟ್ಟಿ ಅವರೇ ಈಗಲೇ ಈ ಸಿನಿಮಾವನ್ನು ಕೈ ಬಿಟ್ಟು, ದಕ್ಷಿಣ ಪಥೇಶ್ವರ ಇಮ್ಮಡಿ ಪುಲಿಕೇಶಿ ಅವರ ಸಿನಿಮಾ ಮಾಡಿ' ಎಂದು ಒಂದೇ ಸಮನೇ ಒತ್ತಾಯಿಸುತ್ತಿದ್ದಾರೆ. ಅಭಿಮಾನಿಗಳ ಈ ಒತ್ತಾಯಕ್ಕೆ ರಿಷಬ್ ಶೆಟ್ಟಿ ಹೇಗೆ ಪ್ರತಿಕ್ರಿಯಿಸುತ್ತಾರೆ ಕಾದು ನೋಡಬೇಕಿದೆ.












Click it and Unblock the Notifications