Kiriti: ಮೊದಲ ಸಿನಿಮಾದಲ್ಲೇ ವಿವಾದಕ್ಕೆ ಗುರಿಯಾದ ನಟ ಕಿರೀಟಿ: ಕನ್ನಡಿಗರ ಆಕ್ರೋಶ, ಇಲ್ಲಿದೆ ವೈರಲ್ ವಿಡಿಯೋ!
Actor Kiriti: ಉದಯೋನ್ಮುಖ ನಟ ಹಾಗೂ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗಿರುವ ನಟ ಕಿರೀಟಿ ಅವರು, ತಮಗೆ ತಿಳಿಯದೆ ವಿವಾದವೊಂದಕ್ಕೆ ಗುರಿಯಾಗಿದ್ದಾರೆ. ಜೂನಿಯರ್ ಸಿನಿಮಾದ ಮೂಲಕ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗಿರುವ ನಟ ಕಿರೀಟಿ ಅವರು ತಮ್ಮ ಜೂನಿಯರ್ ಸಿನಿಮಾದ ಸಾಹಸ ದೃಶ್ಯಗಳು ಹಾಗೂ ಅಭಿನಯದಿಂದ ಫೇಮಸ್ ಆಗಿದ್ದಾರೆ. ಆದರೆ, ಅವರು ಕನ್ನಡ ನಟರು ಹಾಗೂ ತೆಲುಗು ನಟರ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ತೆಲುಗಿನ ಆ ನಟನ ರೀತಿ ಕನ್ನಡದಲ್ಲಿ ಯಾವ ನಟರಿಂದಲೂ ಅಭಿನಯ ಮಾಡಲು ಸಾಧ್ಯವಿಲ್ಲ ಅಥವಾ ಕನ್ನಡದಲ್ಲಿ ಆ ನಟನ ಒಂದು ಸಿನಿಮಾ ಮಾಡುವವರು ಯಾರು ಇಲ್ಲ ಎಂದು ಜೂನಿಯರ್ ಸಿನಿಮಾದ ನಟ ಕಿರೀಟಿ ಅವರು ಹೇಳಿರುವುದು ಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿದೆ.
ಸಿನಿಮಾ ರಂಗಕ್ಕೆ ಹೊಸಬರಾದರೂ ನಟ ಕಿರೀಟಿ ಅವರು ಅಭಿನಯ ಹಾಗೂ ಮಾತಿನ ವಿಚಾರದಲ್ಲಿ ಅಳೆದು ತೂಗಿ ಮಾತನಾಡುವುದೇ ಹೆಚ್ಚು. ನಯ - ವಿನಯ ಮತ್ತು ಸಿನಿಮಾದ ಸಾಹಸ ದೃಶ್ಯ ಹಾಗೂ ಡ್ಯಾನ್ಸ್‌ಗೆ ಈಗಾಗಲೇ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಈ ರೀತಿ ಇರುವಾಗಲೇ ನಟ ಕಿರೀಟಿ ಅವರು ತೆಲುಗು ಭಾಷೆಯಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿರುವ ಮಾತು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಕನ್ನಡದಲ್ಲಿ ಅಷ್ಟೊಂದು ಸ್ಟಾರ್ ನಟರು ಇದ್ದಾರೆ. ಇಷ್ಟೊಂದು ನಟರು ಇರುವಾಗ ಯಾರೂ ಇಲ್ಲ. ಈ ಪಾತ್ರವನ್ನು ತೆಲುಗಿನ ನಟ ಮಾತ್ರ ಮಾಡುವುದಕ್ಕೆ ಸಾಧ್ಯ ಎಂದು ಹೇಳಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಕಿರೀಟಿ ಅವರು ಸಿನಿಮಾ ರಂಗಕ್ಕೆ ಹೊಸಬರಾದರೂ, ಅವರ ಅಭಿನಯಕ್ಕೆ ಕನ್ನಡಿಗರು ಭೇಷ್ ಎಂದಿದ್ದಾರೆ. ಮೊದಲ ಸಿನಿಮಾದಲ್ಲೇ ಈ ರೀತಿಯ ಪ್ರದರ್ಶನ ನೀಡುತ್ತಿರುವುದು ಮುಂದಿನ ದಿನಗಳಲ್ಲಿ ಕನ್ನಡಕ್ಕೆ ಭರವಸೆಯ ನಟ ಸಿಕ್ಕಿದ್ದಾನೆ ಎಂದೇ ಹೇಳಲಾಗುತ್ತಿದೆ. ಆದರೆ, ಅವರು ತೆಲುಗು ಭಾಷೆಯಲ್ಲಿ ಕೊಟ್ಟಿರುವ ಸಂದರ್ಶನವೊಂದು ಭಾರೀ ವೈರಲ್ ಮತ್ತು ಚರ್ಚೆಗೆ ಕಾರಣವಾಗಿದೆ. ಕನ್ನಡದಲ್ಲಿ ಆಂಕರ್ ಅನುಶ್ರೀ ರೀತಿಯೇ ತೆಲುಗು ಭಾಷೆಯಲ್ಲಿ ಸುಮಾ ಅವರು ಸಹ ಫೇಮಸ್ ಆಂಕರ್. ಕಳೆದ 25 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಅವರು ತೆಲುಗು ಭಾಷೆಯ ಕಿರುತೆರೆ ಹಾಗೂ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಸಂದರ್ಶನವನ್ನು ಲಕ್ಷಾಂತರ ಜನ ನೋಡುವುದು ಇದೆ. ಅಂತಹ ಪ್ರಮುಖ ಸಂದರ್ಶನದಲ್ಲಿ ಕಿರೀಟಿ ಅವರು ಮಾತನಾಡಿರುವುದು ಭಾರೀ ಚರ್ಚೆಯನ್ನ ಹುಟ್ಟು ಹಾಕಿದೆ.
ನಟ ಕಿರೀಟಿ ಹೇಳಿದ್ದೇನು ?
ಆಂಕರ್ ಸುಮಾ ಅವರು ಸಂದರ್ಶನವೊಂದರಲ್ಲಿ "ನಾನು ತೆಲುಗು ಭಾಷೆಯ ಸಿನಿಮಾ ಹೇಳುತ್ತೇನೆ ಅದಕ್ಕೆ ಕನ್ನಡದಲ್ಲಿ ಯಾವ ನಟ ಆ ಸಿನಿಮಾ ಮಾಡಬಹುದು ಎಂದು ನೀವು ಹೇಳಬೇಕು ಎಂದು ಆಯ್ಕೆ ಕೊಟ್ಟಿದ್ದಾರೆ. ವಿವಿಧ ತೆಲುಗು ನಟರ ಬಗ್ಗೆ ಅವರು ಮಾತನಾಡಿದ್ದಾರೆ. ಆದರೆ, ಮಹೇಶ್ ಬಾಬು ಅವರ "ಬ್ಯೂಸಿನೆಸ್ ಮ್ಯಾನ್" ಮೂವಿಯನ್ನು ಕನ್ನಡದಲ್ಲಿ ಯಾವ ನಟ ಮಾಡಬಹುದು ಅಂತಾ ಸುಮಾ ಅವರು ಕೇಳಿದ್ದು, ಇದಕ್ಕೆ ಕಿರೀಟಿ ಅವರು, "ರಿಪ್ಲೈಸ್ ಮಾಡಲು ಸಾಧ್ಯವಿಲ್ಲ. ಆ ರೀತಿಯ ನಟನೆ ಅವರಿಂದ ಮಾತ್ರ ಸಾಧ್ಯ. ಆ ರೀತಿಯ ನಟನೆ ಕಷ್ಟ " ಎಂದು ಅಭಿಪ್ರಾಯಪಟ್ಟಿದ್ದಾರೆ. ಇದು ಭಾರೀ ಚರ್ಚೆಗೆ ಕಾರಣವಾಗಿದೆ.
ಈ ಸಂಭಾಷಣೆಯನ್ನು ನಟ ಮಹೇಶ್ ಬಾಬು ಅವರ ಫ್ಯಾನ್ಸ್ ಪೇಜ್‌ಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಕನ್ನಡದಲ್ಲಿ ಸ್ಟಾರ್ ನಟರು ಇದ್ದಾರೆ. ಸುದೀಪ್, ದರ್ಶನ್, ಯಶ್ ಅಥವಾ ಇನ್ಯಾವ ನಟರೂ ಕಿರೀಟಿ ಅವರಿಗೆ ಕಾಣಿಸಲಿಲ್ಲವೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ.












Click it and Unblock the Notifications