Actor Ganesh: ವಿದೇಶಗಳಲ್ಲೂ ಸದ್ದು ಮಾಡ್ತಿದೆ ಕನ್ನಡ ಸಿನಿಮಾ "ಕೃಷ್ಣಂ ಪ್ರಣಯ ಸಖಿ" ಹಾಡು-ವಿಡಿಯೋ ಭಾರೀ ವೈರಲ್‌

ಕನ್ನಡ ಸಿನಿಮಾದ ಹಾಡುಗಳು ಬರೀ ದೇಶದ ಅಲ್ಲದೆ, ವಿದೇಶಗಳಲ್ಲೂ ಸದ್ದು ಮಾಡಿರುವ ಉದಾಹರಣೆಗಳಿಗೆ. ಆದರೆ ಇದೀಗ ಗೋಲ್ಡನ್‌ ಸ್ಟಾರ್‌ ನಟನೆಯ ಕೃಷ್ಣಂ ಪ್ರಣಯ ಸಖಿ ಸಿನಿಮಾದ ಹಾಡೊಂದನ್ನು ಜಸ್ಕರಣ್‌ ಎಂಬ ಪಂಜಾಬಿ ಸಿಂಗರ್‌ ಕನ್ನಡದಲ್ಲಿ ಅತ್ಯದ್ಭುತವಾಗಿ ಹಾಡಿದ್ದು, ಇದೀಗ ಇದು ಕೂಡ ವಿದೇಶದಲ್ಲಿ ಭಾರೀ ಸದ್ದು ಮಾಡುತ್ತಿದೆ. ಅಲ್ಲದೆ ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟಿಸಿರುವ ಸಿನಿಮಾಗಳಲ್ಲಿನ ಸಾಂಗ್‌ಗಳಂತೂ ಒಂದಕ್ಕಿಂತ ಒಂದು ಚೆನ್ನಾಗಿಯೇ ಇರುತ್ತವೆ. ಹಾಗೆಯೇ ಇದೀಗ ಇತ್ತೀಚೆಗಷ್ಟೇ ತೆರೆಕಂಡ ಇವರ ಸಿನಿಮಾದ ಹಾಡೊಂದು ಇಡೀ ದೇಶ ಅಲ್ಲದೆ, ವಿದೇಶಗಳಲ್ಲೂ ಭಾರೀ ಸದ್ದು ಮಾಡುತ್ತಿದೆ.

Actor Ganesh Kannada Film Krishnam Pranaya Sakhi s this song is Trending Internationally video viral

ಗೋಲ್ಡನ್‌ ಗಣೇಶ್ ನಟನೆಯ ಕೃಷ್ಣಂ ಪ್ರಣಯ ಸಖಿ ಆಗಸ್ಟ್ 15, 2024 ಅಂದರೆ ಸ್ವಾತಂತ್ರ್ಯ ದಿನಾಚರಣೆಯಂದೇ ಬಿಡುಗಡೆಯಾಗಿತ್ತು. ಇನ್ನೂ ಈ ಸಿಮನಾ ರಿಲೀಸ್‌ ಆಗುವುದಕ್ಕೂ ಮುನ್ನವೇ ಇದರಲ್ಲಿನ "ಜೇನ ಧನಿಯೋಳೆ, ಮೀನ ಕಣ್ಣೋಳೆ, ಸೊಬಗೇ ಮೈತುಂಬಿದೆ. ಹಂಸ ನೆಲೆಯೋಳೆ ಎದೆಗೆ ಇಳಿದೋಳೆ, ಜೀವ ಜಲ್‌ ಎಂದಿದೆ. ಬೇರೆ ದಾರಿ ಇಲ್ಲದೆ, ನನಗಿನ್ನೂ ನೀನು ಸಿಕ್ಕಾಗಿದೆ," ಎನ್ನುವ ಹಾಡು ಭಾರೀ ವೈರಲ್‌ ಆಗಿತ್ತು.

ಇನ್ನೂ ಈ ಹಾಡಿಗೆ ಚಿಕ್ಕಮಕ್ಕಳಿಂದ ಹಿಡಿದೂ ಹಿರಿಯರವರೆಗೂ ರೀಲ್ಸ್ ಮಾಡುತ್ತಿದ್ದು, ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿತ್ತಿದೆ. ಅಷ್ಟೇ ಅಲ್ಲದೆ, ವಿದೇಶದಲ್ಲೂ ಕೂಡ ಈ ಹಾಡಿಗೆ ರೀಲ್ಸ್‌ ಮಾಡುತ್ತಿದ್ದಾರೆ. ಅಷ್ಟರ ಮಟ್ಟಿಗೆ ಜಸ್ಕರಣ್‌ ಸಿಂಗ್‌ ಹಾಡಿರುವ ಈ ಸಾಂಗ್‌ ಭಾರೀ ಫೇಮಸ್‌ ಆಗಿದೆ. ವಿದೇಶದಲ್ಲೊಬ್ಬ ವ್ಯಕ್ತಿಯೊಬ್ಬರು ಈ ಹಾಡಿಗೆ ರೀಲ್ಸ್‌ ಮಾಡಿದ್ದು, ಈ ವಿಡಿಯೋ sstv_media ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಇದೀಗ ಎಲ್ಲಿ ನೋಡಿದರೂ ಕಿರಿಯರಿಂದ ಹಿಡಿದು, ಶಾಲಾ ಮಕ್ಕಳು, ಹಿರಿಯರು ಕೂಡ ಸಾಂಗ್ ಬಂತೆಂದರೆ ಸಾಕಿ ಕಿವಿಗಳನ್ನು ನೆಟ್ಟಗೆ ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ಈ ಹಾಡನ್ನು ಥಿಯೇಟರ್‌ನಲ್ಲಿ ಕೇಳಿದರೆ ಕಿವಿಗೆ ಮತ್ತಷ್ಟು ಇಂಪು ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಅಲ್ಲದೆ, ಈ ಸಿನಿಮಾದ ಬಿಡುಗಡೆ ಬಳಿಕ ನಟ ಗಣೇಶ್‌ ಅವರು ದೊಡ್ಡ ಮಟ್ಟದ ಗೆಲುವು ಕಂಡಿದ್ದಾರೆ. ಈ ಸಿನಿಮಾಗೆ ಎಲ್ಲ ಕಡೆಗಳಿಂದ ಮೆಚ್ಚುಗೆಗಳ ಸರಮಾಲೆಯೇ ಹರಿದುಬರುತ್ತಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಈ ಸಿನಿಮಾ ಯಶಸ್ಸು ಕಾಣುವುದಲ್ಲಿ ಯಾವುದೇ ಅನುಮಾನವಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+