Dhruva Sarja: ನಾನು ದರ್ಶನ್ ಸರ್ ಪರ ನಿಲ್ಲುತ್ತೇನೆ ಎಂದ ಧ್ರುವ ಸರ್ಜಾ
ಬೆಂಗಳೂರು, ಜುಲೈ 31: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ನಟ ದರ್ಶನ್ ಅವರ ಕುರಿತು ಹೈಕೋರ್ಟ್ ನೀಡಿದ್ದ ಜಾಮೀನಿನ ಬಗ್ಗೆ ಸುಪ್ರೀಂ ಕೋರ್ಟ್ ಅಸಮಧಾನವನ್ನು ಹೊರ ಹಾಕಿತ್ತು. ಇದರ ಬೆನ್ನಲ್ಲೇ ನಟಿ ರಮ್ಯಾ ಅದನ್ನು ಬೆಂಬಲಿಸಿ ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ನಟಿ ರಮ್ಯಾ ಅವರ ವಿರುದ್ಧ ನಟ ದರ್ಶನ್ ಫ್ಯಾನ್ಸ್ ಕೆಟ್ಟ ಸಂದೇಶವನ್ನು ಕಳುಹಿಸಿದ್ದು, ದರ್ಶನ್ ಫ್ಯಾನ್ಸ್ ವಿರುದ್ಧ ನಟಿ ರಮ್ಯಾ ದೂರು ನೀಡುವ ಮೂಲಕ ತಿರುಗೇಟು ಕೊಟ್ಟಿದ್ದಾರೆ. ಇದರ ನಡುವೆ ದರ್ಶನ್ ಫ್ಯಾನ್ಸ್ ಮತ್ತು ಬಿಗ್ ಬಾಸ್ ಪ್ರಥಮ್ ನಡುವಿನ ಜನಗ ವಿಚಾರ ಹೆಚ್ಚು ಸದ್ದು ಮಾಡುತ್ತಿದ್ದು, ಈ ಬಗ್ಗೆ ನಟ ಧ್ರುವ ಸರ್ಜಾ ಅವರು ಮಾತನಾಡಿದ್ದಾರೆ.
ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಮತ್ತು ನಟ ದರ್ಶನ್ ಫ್ಯಾನ್ಸ್ ನಡುವಿನ ಜಟಾಪಟಿ ಒಂದು ಕಡೆಯಾದ್ರೆ ಇತ್ತ ಪ್ರಥಮ್ ಮತ್ತು ದರ್ಶನ್ ಫ್ಯಾನ್ಸ್ ಮಧ್ಯೆ ವರ್ಷಗಳ ಕಾಲದಿಂದಲೂ ಈ ವಾಗ್ಯುದ್ಧ, ಸೋಷಿಯಲ್ ಮೀಡಿಯಾ ವಾರ್ ನಡೆಯುತ್ತಲೇ ಇದೆ. ಇದೀಗ ಈ ವಿಷಯಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಜೊತೆಗೆ ನಟ ಧ್ರುವ ಸರ್ಜಾ ಮಾತನಾಡಿದ್ದು, ನಾನು ದರ್ಶನ್ ಸರ್ ಪರವಾಗಿ ನಿಲ್ಲುತ್ತೇನೆ ಎಂದು ಹೇಳಿದ್ದಾರೆ.

ನಟಿ ರಮ್ಯಾ ಅವರಿಗೆ ಒಪ್ಪಿನಿಯನ್ ಹೇಳುವ ಅವಕಾಶವಿದೆ. ಅವರಿಗೆ ಹಾಕಿದ ಮೆಸೇಜ್ ತಪ್ಪು. ನಮಗೆ ತುಂಬಾ ಬೇಸರವಾಗಿದೆ. ನಾನು ದರ್ಶನ್ ಸರ್ ಪರ ನಿಲ್ಲುತ್ತೇನೆ. ಅಲ್ಲದೇ ಪ್ರಥಮ್‌ಗೆ ಡ್ರಾಗನ್ ತೋರಿಸಿದ್ದರು ನಿಜ ಆದರೆ, ಪ್ರಥಮ್ ಸರ್‌ದು ತಪ್ಪು ಇದೆ ಅನ್ಸುತ್ತೆ ಎಂದು ನಟ ಧ್ರುವಾ ಸರ್ಜಾ ಅವರು ಹೇಳಿದ್ದಾರೆ.
ಇನ್ನೂ ಲಾಯರ್ ಜಗದೀಶ್ ಕಂಪ್ಲೇಂಟ್ ಕೊಡು ಅಂದ್ರು ಪ್ರಥಮ್ ಕೊಡಲಿಲ್ಲ. ಎಲ್ಲೋ ಒಂದು ಕಡೆ ನಟ ಪ್ರಥಮ್ ತಪ್ಪಿದೆ ಅಂತ ಅನ್ನಿಸ್ತಿದೆ. ಪ್ರಥಮ್‌ಗೆ ಮಾತಿನ ಮೇಲೆ ಹಿಡಿತವಿಲ್ಲ. ಎಲ್ಲರೂ ಅವರಿಗೆ ಅವರದ್ದೇ ಆಗಿರೋ ಸ್ವಾಭಿಮಾನವಿರುತ್ತದೆ. ಯಾರು ಪರ್ಸನಲ್ ವಿಷಯನು ಮಾತಾಡುವ ಹಕ್ಕು ಇಲ್ಲ. ತುಂಬ ಪರ್ಸನಲ್ ಆಗಿ ಮಾತನಾಡಿದ್ದಾರೆ ಎಲ್ಲರಿಗೂ ಬೇಸರವಾಗುತ್ತೆ. ಇದು ಮಾತಾಡಲು ಸರಿಯಾದ ಸಮಯವಲ್ಲ. ಯಾವುದೋ ವಿಷಯಕ್ಕೆ ಯಾರನ್ನೋ ಕರೆದುಕೊಂಡು ಬರೋದು ತಪ್ಪು. ಪ್ರಥಮ್ ಅವರಿಗೆ ಇದು ಒಳ್ಳೆಯ ಬೆಳವಣಿಗೆಯಲ್ಲ ಇದರಲ್ಲಿ ದರ್ಶನ್ ಸರ್ ಅವರ ತಪ್ಪಿಲ್ಲ ಎಂದು ಧ್ರುವ ಸರ್ಜಾ ಅವರು ತಿಳಿಸಿದ್ದಾರೆ.
ಪ್ರಥಮ್ ವಿಚಾರದಲ್ಲಿ ನಾನು ದರ್ಶನ್ ಸರ್ ಪರವಾಗಿ ನಿಲ್ಲುತ್ತೇನೆ. ಐ ಸ್ಟ್ಯಾಂಡ್ ವಿತ್ ದರ್ಶನ್ ಸರ್ . ಚಿಟುಕೆ ಹೊಡೆದು ವಿಗ್ ಬಗ್ಗೆ ಮಾತಾಡೋದು ಸರಿ ಇಲ್ಲ. ಪ್ರಥಮ್ ಮಾತಾಡೋದು ಸರಿ ಇಲ್ಲ. ಅವರಿಗೆ ಯಾರಾದ್ರೂ ಚಾಕು ತೋರಿಸಿದ್ರೆ ದೂರು ಕೊಡಬೇಕು. ದರ್ಶನ್ ಸರ್ ಬಗ್ಗೆ ಮಾತಾಡೋದು ಸರಿಯಲ್ಲ. ಏನ್ ಪ್ರೂವ್ ಮಾಡೋಕೆ ಹೋಗ್ತಿದ್ದಾರೆ ಗೊತ್ತಾಗ್ತಿಲ್ಲ ಎಂದು ಧ್ರುವ ಸರ್ಜಾ ಅವರು ಬೇಸರ ವ್ಯಕ್ತಪಡಿಸಿದರು.
ಪ್ರಥಮ್‌ಗೆ ಬೇಜಾರಾಗಿದೆ ಆದರೆ ಎಲ್ಲಾದಕ್ಕೂ ಲಿಮಿಟ್ ಇರುತ್ತೆ. ಈ ವಿಷಯದಿಂದ ಎಲ್ಲರಿಗೂ ಬೇಸರವಾಗುತ್ತೆ. ಶಿವಣ್ಣ, ಸುದೀಪ್, ಪುನೀತ್ ಯಾರಿಗೆ ಆದರೂ ಬೇಜಾರ್ ಆಗುತ್ತೆ. ಪ್ರಥಮ್ ಮೊದಲು ನೀವು ಸರಿಯಾಗಿ, ಆಮೇಲೆ ಮಾತನಾಡಿ . ಏನೇನಾಗಿದೆ ಅದೆಲ್ಲ ಆಗಬಾರದಿತ್ತು. ಅದು ಆಗಿದೆ. ಸಿನಿಮಾ ಇಂಡಸ್ಟ್ರಿ ಬಿಟ್ಟುಬಿಡುತ್ತೇನೆ ಅದೆಲ್ಲ ಒಳ್ಳೆಯ ಗುಣವಲ್ಲ. ಪೋಲಿಸ್‌ಗೆ ಬಯ್ಯುವಂತ ಕೆಲಸ ನೀವು ಮಾಡಬಾರದಿತ್ತು. ಪ್ರಥಮ್ ಎಲ್ಲ ಆಕ್ಟರ್ ಕೂಡ ಒಂದೇ ಎಂದು ಧ್ರುವ ಸರ್ಜಾ ತಿಳಿಸಿದರು.












Click it and Unblock the Notifications