"ನೂರು ಜನ್ಮಕೂ" ಸೀರಿಯಲ್‌ನಿಂದ ಹೊರಬಂದಿದ್ದೇಕೆ? ಕಾರಣ ತಿಳಿಸಿದ ನಟ ಧನುಷ್‌

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ "ನೂರು ಜನ್ಮಕೂ" ಧಾರಾವಾಹಿಯಲ್ಲಿ ಪ್ರಖ್ಯಾತ ನಟ ಧನುಷ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಪ್ರಾರಂಭದಲ್ಲಿ ಈ ಧಾರಾವಾಹಿಗೆ ಪ್ರೇಕ್ಷಕರಿಗೆ ಇಷ್ಟವೂ ಆಗಿತ್ತು. ಇದರಲ್ಲಿ ನಟ ಧನುಷ್‌ ಅವರ ಅಭಿನಯ ಕೂಡ ಚೆನ್ನಾಗಿತ್ತು. ಆದರೆ ಇದ್ದಕ್ಕಿದ್ದಂತೆ ಧನುಷ್‌ ಸೀರಿಯಲ್‌ನಿಂದ ಹೊರನಡೆದಿದ್ದರು. ಇದರಿಂದ ಪ್ರೇಕ್ಷಕರಿಗೆ ಬೇಸರವೂ ಉಂಟಾಗಿತ್ತು. ಆಗ ಸೀರಿಯಲ್‌ನಿಂದ ಹೊರನಡೆದಿದ್ದೇಕೆ ಎಂದು ಧನುಷ್‌ ಇತ್ತೀಚಿನ ಸಂದರ್ಶನದಲ್ಲಿ ಕಾರಣ ಬಹಿರಂಗಪಡಿಸಿದ್ದಾರೆ.

ನೂರು ಜನ್ಮಕೂ ಧಾರಾವಾಹಿಯು ಕೆಲವೇ ಸಮಯಕ್ಕೆ ನಿಂತು ಹೋಗಿದ್ದು ಅಚ್ಚರಿ ಮೂಡಿಸಿತ್ತು. ಇದರ ನಾಯಕನಾಗಿದ್ದ ಧನುಷ್‌ ಕೂಡ ಸೀರಿಯಲ್‌ನಿಂದ ಏಕಾಏಕಿ ಹೊರನಡೆದಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ನೂರು ಜನ್ಮಕೂ ಸೀರಿಯಲ್‌ ವೀಕೆಂಡ್‌ನಲ್ಲಿ ಮಾತ್ರ ಪ್ರಸಾರವಾಗಲು ಶುರುವಾಯ್ತು. ಆರಂಭದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರವಾಗುತ್ತಿತ್ತು. ನಂತರ ಶನಿವಾರ ಮತ್ತು ಭಾನುವಾರ ಮಾತ್ರ ಪ್ರಸಾರವಾಗುತ್ತಿತ್ತು. ಈ ವಿಚಾರವಾಗಿ ನಾನು ಕೂಡ ವಾಹಿನಿ ಬಳಿ ಮಾತನಾಡಿದೆ. ನನ್ನ ನಿರ್ಧಾರಕ್ಕೆ ಅವರು ಕೂಡ ಸರಿ ಎಂದರು. ನಂತರ ನಾನು ಅಲ್ಲಿಂದ ಹೊರನಡೆದೆ ಎಂದು ಧನುಷ್‌ ಹೇಳಿದ್ದಾರೆ.

Actor Dhanush Gowda Reveals Why He Quit Nooru Janmaku Serial

ಅಲ್ಲದೆ ಒಂದು ಹಿಟ್‌ ಸೀರಿಯಲ್‌ನಲ್ಲಿ ನಟಿಸಿದ್ದ ನಟನ ಮತ್ತೊಂದು ಸೀರಿಯಲ್‌ ಅನ್ನು ವಾರಾಂತ್ಯದಲ್ಲಿ ಮಾತ್ರ ಹಾಕುತ್ತಿದ್ದೇವೆ ಎಂಬ ಬೇಸರ ಚಾನಲ್‌ನವರಿಗೂ ಇತ್ತು. ಅವರು ಉದ್ದೇಶಪೂರ್ವಕವಾಗಿ ಈ ನಿರ್ಧಾರ ಮಾಡಿರಲಿಲ್ಲ. ಹೊಸ ಧಾರಾವಾಹಿಗಳು ಶುರುವಾಗಬೇಕಿದ್ದ ಕಾರಣ ಈ ಬದಲಾವಣೆ ಮಾಡಲೇಬೇಕಾಗಿತ್ತು. ಆರಂಭದಲ್ಲಿ ಇದಕ್ಕೆ ಒಪ್ಪಿ ಕೆಲ ತಿಂಗಳು ಸೀರಿಯಲ್‌ನಲ್ಲಿ ನಟಿಸಿದೆ. ನಂತರ ನನ್ನಿಂದ ಆಗಲಿಲ್ಲ, ಅದಕ್ಕೆ ಹೊರಬರುವ ನಿರ್ಧಾರ ಮಾಡಿದೆ ಎಂದಿದ್ದಾರೆ.

ಆರಂಭದಲ್ಲಿ ವಾರದ ದಿನಗಳಲ್ಲಿ ಈ ಸೀರಿಯಲ್‌ ಪ್ರಸಾರ ಕಾಣುತ್ತಿತ್ತು. ಕೆಲ ಸಮಯದ ಬಳಿಕ, ವಾಹಿನಿಯಿಂದ ಹೊಸ ಧಾರಾವಾಹಿಗಳನ್ನು ಆರಂಭಿಸಲು ನಿರ್ಧರಿಸಿದ ಹಿನ್ನೆಲೆ "ನೂರು ಜನ್ಮಕೂ" ಸೀರಿಯಲ್ ಅನ್ನು ವಾರಾಂತ್ಯಗಳಿಗೆ ಅಂದರೆ ಕೇವಲ ಶನಿವಾರ ಹಾಗೂ ಭಾನುವಾರಗಳಷ್ಟೇ ಪ್ರಸಾರ ಮಾಡಲಾಯಿತು. ಈ ಬದಲಾವಣೆಯಿಂದ ಧನುಷ್ ಅವರಿಗೆ ನಿರಾಸೆ ಉಂಟಾಯಿತು. ಅವರು ಚಾನೆಲ್ ಜೊತೆ ಚರ್ಚಿಸಿದರೂ ಸಹ, ಧಾರಾವಾಹಿ ನಿಲ್ಲಿಸುವ ಸೂಚನೆ ಸಿಕ್ಕಿತ್ತು. ಮತ್ತೆ ಧನುಷ್ ಅವರು ಎರಡು ಮೂರು ತಿಂಗಳು ನಟಿಸಿದರೂ, ಮುನ್ನಡೆಯುವುದು ಬೇಡ ಎಂದು ನಿರ್ಧರಿಸಿ ಹೊರನಡೆದರು. ಬಳಿಕ ಬಿಗ್‌ಬಾಸ್‌ ಖ್ಯಾತಿಯ ಸ್ನೇಹಿತ್ ಗೌಡ ಅವರ ಪಾತ್ರ ನಿರ್ವಹಿಸಿದ್ದರು.

ಹಾರರ್‌ ಕಥೆ

ನೂರು ಜನ್ಮಕೂ ಸೀರಿಯಲ್‌ ಹಾರರ್-ಥ್ರಿಲ್ಲರ್ ಪ್ರೇಮಕಥೆಯನ್ನು ಹೊಂದಿತ್ತು. ಇದರಲ್ಲಿ ಚಿರಂಜೀವಿ ಮತ್ತು ಮೈತ್ರಿಯ ನಡುವಿನ ಪ್ರೇಮ ಸಂಬಂಧ, ಸಾವಿನ ಬಳಿಕವೂ ಆತ್ಮವಾಗಿ ಬಂದು ಕಾಟ ನೀಡುವ ಕಥೆ ಚೆನ್ನಾಗಿತ್ತು. ಈ ಸೀರಿಯಲ್ ಚಿತ್ರೀಕರಣದ ವಿಶೇಷತೆ ಎಂದರೆ ಮಂತ್ರಾಲಯದ ಶ್ರೀಸುಬುಧೇಂದ್ರ ತೀರ್ಥರಿಂದ ಮುಖ್ಯಪಾತ್ರಗಳಿಗೆ ಆಶೀರ್ವಾದ ಪಡೆಯುವ ದೃಶ್ಯಗಳು ಕೂಡ ಗಮನಸೆಳೆದಿದ್ದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+