Darshan- Vijayalakshmi: ದರ್ಶನ್‌ಗಾಗಿ ಹೋರಾಟ... ಅತ್ತಿಗೆಯಿಂದ ದೇವತೆ ಪಟ್ಟಕ್ಕೇರಿದ ವಿಜಯಲಕ್ಷ್ಮಿ ದರ್ಶನ್!
ಬೆಂಗಳೂರು, ಜೂನ್. 21: ನಟ ದರ್ಶನ್ ತೂಗುದೀಪ ಗಂಭೀರ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿರುವ ಅವರ ಮೇಲೆ ಕೊಲೆ ಮಾಡಿಸಿರುವ ಮತ್ತು ಅದರಲ್ಲಿ ಭಾಗಿಯಾಗಿರುವ ಆರೋಪಗಳಿವೆ. ಅವರ ಜೊತೆಯಲ್ಲಿ ಆಪ್ತೆ ಸ್ನೇಹಿತೆ ಪವಿತ್ರಾ ಗೌಡ ಸೇರಿ 19 ಮಂದಿ ಮೇಲೆ ವಿಚಾರಣೆ ನಡೆಯುತ್ತಿದೆ. ಈ ಸಮಯದಲ್ಲಿ ನಟನ ಕೈ ಹಿಡಿದಿರುವುದು ಆತನ ಪತ್ನಿ ವಿಜಯಲಕ್ಷ್ಮಿ.
ಹೌದು... ಇಷ್ಟು ದಿನ ಗಂಡನ ಪರವಾಗಿ ಏನು ಮಾತಾಡದೆ, ವಿರುದ್ಧವೂ ಮಾತಾಡದೇ ಸುಮ್ಮನೆ ಇದ್ದ ದರ್ಶನ್ ಪತ್ನಿ ವಿಜಯಲಕ್ಷ್ಮಿ ಈಗ ಗಂಡನಿಗಾಗಿ ಕಾನುನು ಸಮರಕ್ಕೆ ಮುಂದಾಗಿದ್ದಾರೆ. ಗಂಡನನ್ನು ಜೈಲಿನಿಂದ ಬಿಡಿಸಿಕೊಳ್ಳಲು ಅನೇಕ ಪ್ರಸಿದ್ಧ ವಕೀಲರ ಮನೆಯ ಕದ ತಟ್ಟುತ್ತಿದ್ದಾರೆ. ವೈಯಕ್ತಿಕ ಸಮಸ್ಯೆಗಳನ್ನು ದಾಟಿ ಪತಿಯನ್ನು ಉಳಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಇದು ದರ್ಶನ್ ಅಭಿಮಾನಿಗಳನ್ನು ಕಾಡುತ್ತಿದ್ದು, ಇಷ್ಟು ದಿನ ಅತ್ತಿಗೆ ಎನ್ನುತ್ತಿದ್ದವರು ಈಗ ದೇವತೆ ಎನ್ನುತ್ತಿದ್ದಾರೆ.

ಡಿ ಬಾಸ್ ಫ್ಯಾನ್ಸ್ ಪಾಲಿಗೆ ದೇವತೆಯಾದ ವಿಜಯಲಕ್ಷ್ಮಿ
ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ತಮ್ಮ ಗಂಡನ ಬಂಧನದ ಹಲವು ದಿನಗಳ ಬಳಿಕ ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮೃತ ರೇಣುಕಾಸ್ವಾಮಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದು, ದರ್ಶನ್ ಬಂಧನದ ಬಗ್ಗೆ ಅನಧಿಕೃತ ಮಾಹಿತಿಯನ್ನು ಪ್ರಕಟಿಸದಂತೆ ಅಥವಾ ಪ್ರಸಾರ ಮಾಡದಂತೆ ಮಾಧ್ಯಮದ ವಿರುದ್ಧ ಅವರು ತಡೆಯಾಜ್ಞೆ ತಂದಿದ್ದಾರೆ. ವಿಜಯಲಕ್ಷ್ಮಿ ಅವರ ಈ ನಡೆಗೆ ದರ್ಶನ್ ಅಭಿಮಾನಿಗಳು ಬೆರಗಾಗಿದ್ದು, ಅವರನ್ನು ಮತ್ತಷ್ಟು ಮೆಚ್ಚಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ರೇಣುಕಾಸ್ವಾಮಿ ಅವರ ಕುಟುಂಬಸ್ತರಿಗೆ ಸಾಂತ್ವನ ಹೇಳಿರುವ ಅವರು, "ಕಳೆದ ಕೆಲವು ದಿನಗಳಲ್ಲಿ, ದರ್ಶನ್ ಅವರು, ನಾನು, ನಮ್ಮ ಮಗ, ದರ್ಶನರ ಸೆಲೆಬ್ರಿಟೀಸ್ ಮತ್ತು ಕುಟುಂಬದವರು ಪದಗಳಲ್ಲಿ ವಿವರಿಸಲಾಗದ ನೋವನ್ನು ಅನುಭವಿಸಿದ್ದೇವೆ. ಗೌರವಾನ್ವಿತ ನ್ಯಾಯಾಲಯದ ಮೇಲ್ಕಂಡ ಆದೇಶದಂತೆ, ಇನ್ನು ಮುಂದಾದರೂ ಅಸತ್ಯಗಳು ಹಾಗೂ ಅನಧೀಕೃತ ಮಾಹಿತಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗದಿರಲಿ ಎಂದು ಕೇಳಿಕೊಳ್ಳುತ್ತೇನೆ" ಎಂದು ಮನವಿ ಮಾಡಿದ್ದಾರೆ.

'ದೇವತೆ ಅತ್ತಿಗೆ ನೀವು'
ವಿಜಯಲಕ್ಷ್ಮಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್ ಡಿಆಕ್ಟಿವೇಟ್ ಮಾಡಿದ್ದರು. ಕೆಲಸ ದಿನಗಳ ಬಳಿಕ ಆಕ್ಟಿವ್ ಆಗಿರುವ ಅವರು, ಎಲ್ಲಾ ಫೋಟೋ, ವಿಡಿಯೋಗಳನ್ನು ಡಿಲೀಟ್ ಮಾಡಿದ್ದರು. ಜೊತೆಗೆ ಎಲ್ಲರನ್ನು ಫಾಲೋ ಮಾಡುವುದನ್ನು ನಿಲ್ಲಿಸಿದ್ದರು. ಈಗ ಈ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಇರುವುದು ಎರಡೇ ಪೋಸ್ಟ್. ಅದಕ್ಕೆ ಬಂದಿರುವ ಕಾಮೆಂಟ್‌ಗಳು ಮಾತ್ರ ವಿಜಯಲಕ್ಷ್ಮಿ ಅವರನ್ನು ದೇವತೆ ಸ್ಥಾನಕ್ಕೆ ಏರಿಸಿದ್ದಾರೆ.
ಸಾವಿರಾರು ಮಂದಿ ಅವರ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ. "ಗಂಡ ಏನ್ ತಪ್ಪು ಮಾಡಿದ್ರು ಅದುನ್ನೆಲ್ಲ ಹೊಟ್ಟೆಗೆ ಆಕ್ಕೊಂಡು ಮತ್ತೆ ಗಂಡನೆ ಸರ್ವಸ್ವ ಅಂತ ಅವನ ಬೆಂಬಲಕ್ಕೆ ನಿಲ್ತಳಲ್ಲ ಅವಳೆ ಹೆಂಡತಿ , ದೇವತೆ ಅತ್ತಿಗೆ ನೀವು" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, "ನಮ್ಮ ಪ್ರೀತಿಯ ಡಿಬಾಸ್ ಅವರ ಜೀವನದ ಅದೃಷ್ಟ ದೇವತೆ ವಿಜಯಲಕ್ಷ್ಮಿ (ಅತ್ತಿಗೆ ಮಾ), ನಮ್ ಅತ್ತಿಗೆ ಅಂತ ಹೆಣ್ಣು ಯಾರು ಇರೋಕೆ ಸಾಧ್ಯನೇ ಇಲ್ಲ ಇವ್ರು ದೇವತೆ" ಎಂದಿದ್ದಾರೆ.
ಮತ್ತಷ್ಟು ಮಂದಿ, "ನಿಮ್ಮಂತ ಹೆಂಡತಿ ಪಡೆಯೋಕೆ ಬಾಸ್ ಪುಣ್ಯ ಮಾಡಿರಬೇಕು ಅಂಕೊಳ್ತೀನಿ...', 'ಅಕ್ಕಾ ನೀವ್ ಇದನ್ನಾ ಮಾಡಿದ್ದು ನನಗೆ ಹೆಗ್ ಅನ್ನಿಸ್ತಾ ಇದೆ ಅಂದ್ರೆ ಯಮ ಬಂದು ಗಂಡನ ಪ್ರಾಣ ತಗೊಳೋವಾಗ ಸತಿ ಸಾವಿತ್ರಿ ಹೇಗ್ ಬಂದು ಕಾಪಾಡಿದ್ರೋ ಅದೇ ಥರ ನೀವ್ ನಮ್ ಬಾಸ್ ಘನತೆನ ಉಳಸಿದ್ರಕ್ಕ......' ಎಂದು ಕಾಮೆಂಟ್ ಮಾಡಿದ್ದಾರೆ.












Click it and Unblock the Notifications