Darshan Thoogudeepa: ಆಷಾಢ ಶುಕ್ರವಾರದ ಹಿನ್ನೆಲೆ ಚಾಮುಂಡೇಶ್ವರಿ ದರ್ಶನ ಪಡೆದ ನಟ ದರ್ಶನ್; ಹೋಗಿದ್ದು ಯಾರ ಜೊತೆಗೆ?
ಮೈಸೂರು, ಜುಲೈ 04: ಇಂದು ಎರಡನೇ ಆಪಾಢ ಶುಕ್ರವಾರ ಹಿನ್ನಲೆ ನಾಡ ದೇವತೆ ಚಾಮುಂಡೇಶ್ವರಿ ದೇವಿ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬಂದಿದೆ. ಮೊದಲ ಆಷಾಡ ಶುಕ್ರವಾರವೂ ಸಹ ಭಕ್ತ ಸಾಗರದ ಜೊತೆಗೆ ನಟಿ ಶೃತಿ ಸೇರಿದಂತೆ ಹಿರಿಯ ನಟಿಯರು ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದಿದ್ದರು. ಇಂದು ಎರಡನೇ ಆಪಾಢ ಶುಕ್ರವಾರ ಹಿನ್ನಲೆ ಬೆಳಗಿನ ಜಾವದಿಂದಲೇ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಗಿದ್ದು, ಇಂದು ನಟ ದರ್ಶನ್ ಹಾಗೂ ಕುಟುಂಬಸ್ಥರು ಚಾಮುಂಡೇಶ್ವರಿ ದೇವಿ ದೇಗುಲಕ್ಕೆ ಭೇಟಿ ನೀಡಿದ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜಾಮೀನು ಸಿಕ್ಕ ಬಳಿಕ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ಹಲವು ದೇವಸ್ಥಾನಗಳಿಗೆ ಭೇಟಿ ಕೊಟ್ಟು ವಿಶೇಷ ಹರಕೆಯನ್ನು ತೀರಿಸಿದ್ದಾರೆ. ನಟ ದರ್ಶನ್ ಹಾಗೂ ಕುಟುಂಬಸ್ಥರು ಚಾಮುಂಡೇಶ್ವರಿ ದೇವಿ ಮೇಲೆ ಅಪಾರ ನಂಬಿಕೆ ಹೊಂದಿದ್ದಾರೆ. ಆಗಾಗ ದೇಗುಲಕ್ಕೆ ಭೇಟಿ ನೀಡುತ್ತಲೇ ಇರುತ್ತಾರೆ. ಇದೀದ ಇಂದು(ಶುಕ್ರವಾರ) ಬೆಳಗ್ಗೆಯೇ ಸ್ಯಾಂಡಲ್ವುಡ್ ನಟ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಸಮೇತ ಬಂದು ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿ ವಾಪಾಸ್ ಆಗಿದ್ದಾರೆ.

ಇನ್ನೂ ಮೈಸೂರು ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ನಟ ದರ್ಶನ್ ಅವರ ಕಾರು ಚಾಮುಂಡಿ ಬೆಟ್ಟಕ್ಕೆ ಬರ್ತಿದ್ದಂತೆ ಅಭಿಮಾನಿಗಳು ಕಾರಿನ ಸುತ್ತ ಸುತ್ತವರಿದ್ರು. ಕಾರು ಇಳಿದ ದರ್ಶನ್ ಕಂಡು ಡಿಬಾಸ್, ಡಿಬಾಸ್ ಎಂದು ಕೂಗಿದ್ದಾರೆ. ಮೊಬೈಲ್ ಹಿಡಿದು ವಿಡಿಯೋ ಮಾಡಲು ಜನರು ಪರದಾಡಿದ್ರು. ಅಭಿಮಾನಿಗಳಿಗೆ ಕೈ ಮುಗಿದ ದರ್ಶನ್, ದೇವಸ್ಥಾನದ ಒಳಗೆ ತೆರಳಿದ್ದಾರೆ. ದರ್ಶನ್ ನೋಡಲು ಚಾಮುಂಡೇಶ್ವರಿ ದೇವಸ್ಥಾನದ ಬಳಿ ಜನ ಸಾಗರವೇ ಸೇರಿತ್ತು.
ಕಳೆದ ವರ್ಷ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಜೈಲು ಸೇರಿದ್ದ ಹಿನ್ನೆಲೆ ಹಿಂದಿನ ವರ್ಷದ ಆಷಾಢಕ್ಕೆ ನಟ ದರ್ಶನ್ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಇದೀಗ ಈ ಬಾರಿ ದಂಪತಿ ಸಮೇತ ಆಗಮಿಸಿ ಚಾಮುಂಡಿ ತಾಯಿ ದರ್ಶನವನ್ನ ನಟ ದರ್ಶನ್ ಅವರು ಪಡೆದಿದ್ದಾರೆ.
ಇಂದು ಎರಡನೇ ಆಷಾಢದ ಶುಕ್ರವಾರದ ಹಿನ್ನೆಲೆ ದೇವಿಗೆ ಮುಂಜಾನೆ 3:30ಕ್ಕೆ ವಿವಿಧ ಅಭಿಷೇಕಗಳನ್ನು ಮಾಡಲಾಗಿದೆ. ಬೆಳಿಗ್ಗೆ 6 ಗಂಟೆಯಿಂದ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆಯುತ್ತಿದ್ದಾರೆ. ಇಂದು ನಟ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಅವರು ವಿಶೇಷ ಪೂಜೆ ಸಲ್ಲಿಸಿದ್ದರು. ಇನ್ನು ದರ್ಶನ್ ಭೇಟಿ ಕೊಟ್ಟ ಬಳಿಕ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಹಾಗೂ ಅವರ ಪತ್ನಿ ಉಷಾ ಡಿ ಕೆ ಶಿವಕುಮಾರ್ ಅವರು ಚಾಮುಂಡೇಶ್ವರಿ ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದರು.












Click it and Unblock the Notifications