ಇಂದು ನಟ ದರ್ಶನ್ ಭವಿಷ್ಯ ನಿರ್ಧಾರ, ರಾತ್ರಿಯಿಡೀ ನಿದ್ದೆ ಇಲ್ಲ..!
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ತೂಗುದೀಪ ಅವರ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಕೊಲೆ ಕೇಸ್ ಜೊತೆಗೆ ನಿನ್ನೆ ಐಟಿ ವಿಚಾರಣೆ ಕೂಡ ಎದುರಿಸಿರುವ ನಟ ದರ್ಶನ್ ನಿನ್ನೆ ಫುಲ್ ಸುಸ್ತಾಗಿದ್ದಾರೆ. ಇದರ ನಡುವೆ ಟೆನ್ಷನ್‌ನಲ್ಲಿ ಅವರು ರಾತ್ರಿಯಿಡೀ ನಿದ್ದೆ ಮಾಡಿಲ್ಲ ಎಂದು ವರದಿಯಾಗಿದೆ.
ಒಂದೆಡೆ ಜಾಮೀನು ಸಿಗುತ್ತೋ ಇಲ್ಲವೋ ಎನ್ನುವ ಚಿಂತೆ, ಮತ್ತೊಂದು ಐಟಿ ಅಧಿಕಾರಿಗಳ ವಿಚಾರಣೆಯಿಂದ ದರ್ಶನ್‌ಗೆ ದೊಡ್ಡ ತಲೆನೋವು ಬಂದಂತಾಗಿದೆ. ರೇಣುಕಾಸ್ವಾಮಿ ಕೊಲೆ ಬಳಿಕ ದರ್ಶನ್ ಅವರು ಸಾಕ್ಷ್ಯ ನಾಶಕ್ಕೆ ಭಾರಿ ಮೊತ್ತದ ಹಣ ಹರಿಸಿದ್ದರು ಎನ್ನುವ ಆರೋಪವಿತ್ತು. ಹೀಗಾಗಿ ನಿನ್ನೆ ಸೀದಾ ಬಳ್ಳಾರಿ ಹೋದ ಐಟಿ ಅಧಿಕಾರಿಗಳು ದರ್ಶನ್ ಅವರನ್ನು ವಿಚಾರಣೆ ನಡೆಸಿದ್ದಾರೆ.

ದರ್ಶನ್ ಕೆಲವರಿಗೆ ದುಡ್ಡಿನ ಆಮಿಷವೊಡ್ಡಿ ಈ ಕೇಸ್‌ನಲ್ಲಿ ಸರೆಂಡರ್ ಆಗುವಂತೆ ಸೂಚಿಸಿದ್ದರು. ಇದಕ್ಕೆ ದರ್ಶನ್ ಲಕ್ಷಗಟ್ಟಲೆ ಹಣ ಸುರಿದಿದ್ದಾರೆ ಎಂದು ಹೇಳಲಾಗಿದೆ. ಈ ಹಣವನ್ನು ಪೊಲೀಸರು ವಶಕ್ಕೆ ಕೂಡ ಪಡೆದಿದ್ದರು. ಹಾಗಾಗಿ ಈ ಹಣದ ಮೂಲ ಮತ್ತು ವರ್ಗಾವಣೆ ಕುರಿತು ಐಟಿ ಅಧಿಕಾರಿಗಳು ವಿಚಾರಣೆ ಕೈಗೆತ್ತಿಕೊಂಡಿದ್ದಾರೆ. ಹಾಗಾಗಿ ನಿನ್ನೆ ಜೈಲಿನಲ್ಲಿ ಸುಮಾರು 7 ಗಂಟೆಗಳ ಕಾಲ ದರ್ಶನ್ ಅವರನ್ನು ವಿಚಾರಣೆ ನಡೆಸಿದ್ದಾರೆ.
ಬಿಡುವಿಲ್ಲದೆ ವಿಚಾರಣೆ ನಡೆಸಿದ ದರ್ಶನ್ ನಿನ್ನೆ ರಾತ್ರಿ ವೇಳೆಗೆ ಫುಲ್ ಸುಸ್ತಾಗಿಬಿಟ್ಟಿದ್ದರು. ವಿಚಾರಣೆ ಮುಗೀತಿಲ್ಲ ಅಂತ ನಿಟ್ಟುಸಿರು ಬಿಡುವಷ್ಟರಲ್ಲಿ ನಾಳೆ ಮತ್ತೆ ಜಾಮೀನು ಅರ್ಜಿಯ ವಿಚಾರಣೆ ಇದೆಯಲ್ಲಾ? ಎನ್ನುವ ಮತ್ತೊಂದು ಆತಂಕದಲ್ಲಿ ದರ್ಶನ್ ವಿಲವಿಲ ಒದ್ದಾಡಿದ್ದಾರಂತೆ. ಹಾಗಾಗಿ ನಿನ್ನೆ ರಾತ್ರಿಯಿಡೀ ದರ್ಶನ್ ನಿದ್ದೆ ಮಾಡದೆ, ಜಾಗರಣೆಯಲ್ಲೇ ಕಳೆದಿದ್ದಾರೆ ಎನ್ನಲಾಗಿದೆ.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಅವರು ಜೈಲು ಸೇರಿ ನೂರು ದಿನಗಳಿಂತ ಹೆಚ್ಚಾಗಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದರ್ಶನ್ ಅವರನ್ನು ಬಳ್ಳಾರಿ ಶಿಫ್ಟ್ ಮಾಡಿದ್ದರಿಂದ ಎರಡು ಜೈಲುಗಳಲ್ಲಿ ದರ್ಶನ್ ಬಂಧನದಲ್ಲಿದ್ದರು. ಇಂದು ದರ್ಶನ್ ಅವರ ಜಾಮೀನು ಅರ್ಜಿಯ ವಿಚಾರಣೆ ಕೂಡ ನಡೆಯಲಿದೆ. ದರ್ಶನ್ ಪರ ವಕೀಲರು ಸೆಷನ್ಸ್ ಕೋರ್ಟ್‌ನಲ್ಲೇ ಬೇಲ್ ಸಿಗುತ್ತೆ ಎನ್ನುವ ವಿಶ್ವಾಸದಲ್ಲಿದ್ದಾರೆ.

ಮೂಲಗಳ ಪ್ರಕಾರ ಡೆವಿಲ್ ಚಿತ್ರದ ನಿರ್ದೇಶಕ ಸಹ ಬಳ್ಳಾರಿ ಜೈಲಿಗೆ ಬಂದರು ನಟ ದರ್ಶನ್ ಅವರನ್ನು ಭೇಟಿ ಆಗಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ಒಂದು ವೇಳೆ ದರ್ಶನ್ ಅವರಿಗೆ ಜಾಮೀನು ಸಿಕ್ಕರೆ, ಅವರನ್ನು ಬಳ್ಳಾರಿಯಿಂದ ಬೆಂಗಳೂರಿಗೆ ಕರೆತರಲು ಅವರು ಈಗಾಗಲೇ ಹೆಲಿಕಾಪ್ಟರ್ ಸಹ ರೆಡಿ ಮಾಡಿಟ್ಟಿದ್ದಾರೆ ಎಂದು ವರದಿಯಾಗಿದೆ.
ಹಾಗಾಗಿ ಇಂದು ನಟ ದರ್ಶನ್ ಅವರ ಭವಿಷ್ಯ ಕೋರ್ಟ್‌ನಲ್ಲಿ ನಿರ್ಧಾರವಾಗಲಿದ್ದು, ಜಾಮೀನು ಸಿಗುತ್ತೋ? ಅಥವಾ ಮತ್ತೆ ಜೈಲು ಸೇರುತ್ತಾರೋ? ಎಂಬ ಆತಂಕದಲ್ಲೇ ಎಲ್ಲರೂ ಇದ್ದಾರೆ. ಮೊನ್ನೆ ಕೂಡ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್, ಈ ದಿನಕ್ಕೆ ಮುಂದಿನ ವಿಚಾರಣೆ ನಿಗದಿಪಡಿಸಿತ್ತು.












Click it and Unblock the Notifications