Actor Darshan: ನಟ ದರ್ಶನ್‌ಗೆ ಈ ಸಂಕ್ರಾಂತಿ ತುಂಬಾ ಸ್ಪೆಷಲ್, ಕಾರಣ ಇಲ್ಲಿದೆ?
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಈಗಷ್ಟೇ ರಿಲೀಫ್ ಪಡೆದಿರುವ ನಟ ದರ್ಶನ್ ತೂಗುದೀಪ ಅವರು ನಿಟ್ಟುಸಿರು ಬಿಟ್ಟಿದ್ದಾರೆ. ಕೋರ್ಟು, ಕೇಸಿನ ಜಂಜಾಟದ ನಡುವೆ ಇನ್ನೇನು ಸಂಕ್ರಾಂತಿ ಹಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ. ದರ್ಶನ್ ಅವರಿಗೆ ಎಲ್ಲರಿಗೂ ಗೊತ್ತಿರುವಂತೆ ಸಂಕ್ರಾಂತಿ ಹಬ್ಬವೆಂದರೆ ತುಂಬಾ ಸ್ಪೆಷಲ್. ಇನ್ನು ಈ ಬಾರಿಯ ಸಂಕ್ರಾಂತಿಯಂತೂ ಇನ್ನೂ ಸ್ಪೆಷಲ್ ಎನ್ನಲಾಗುತ್ತಿದೆ.
ನಟ ದರ್ಶನ್ ಅವರು ಪ್ರಾಣಿಪ್ರಿಯರೂ ಹೌದು. ಇದಕ್ಕೆ ಸಾಕ್ಷಿ ಎಂಬಂತೆ ಅವರು ಹಲವಾರು ಪ್ರಾಣಿಗಳನ್ನು ದತ್ತು ಪಡೆದಿರುವ ಉದಾಹರಣೆಗಳೂ ಇವೆ. ಮೈಸೂರಿನ ಬಳಿ ಇರುವ ತಮ್ಮ ಫಾರ್ಮ್‌ಹೌಸ್‌ನಲ್ಲೂ ಹಲವು ಪ್ರಾಣಿಗಳನ್ನು ಸಾಕಿಕೊಂಡಿದ್ದಾರೆ. ಬಿಡುವಾದಾಗೆಲ್ಲ ಅವರು ಮೈಸೂರಿಗೆ ತೆರಳಿ ಫಾರ್ಮ್‌ಹೌಸ್‌ನಲ್ಲಿರೋ ಪ್ರಾಣಿಗಳೊಂದಿಗೆ ಸಮಯ ಕಳೆಯುವ ಹವ್ಯಾಸ ಹೊಂದಿದ್ದರು.

ಇನ್ನು ಸಂಕ್ರಾಂತಿ ಹಬ್ಬವನ್ನು ನಟ ದರ್ಶನ್ ಅವರು ಫಾರ್ಮ್‌ಹೌಸ್‌ನಲ್ಲೇ ಸಂಭ್ರಮದಿಂದ ಆಚರಿಸುತ್ತಿದ್ದರು. ಕಳೆದ ವರ್ಷಗಳಲ್ಲಿ ಕೂಡ ಅವರು ಇಲ್ಲಿಯೇ ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದರು. ಅಲ್ಲಿದ್ದ ಜೋಡೆತ್ತು ಸೇರಿದಂತೆ ಇತರ ಪ್ರಾಣಿಗಳೊಂದಿಗೆ ಸಂಭ್ರಮದಿಂದ ಹಬ್ಬ ಆಚರಿಸಿದ್ದರು. ಆದರೆ ಈ ಬಾರಿ ಅವರಿಗೆ ಈ ಹಬ್ಬ ಸಖತ್ ಸ್ಪೆಷಲ್ ಆಗಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ ಹೊರಬಂದ ನಂತರ ದರ್ಶನ್ ಅವರ ಬದುಕಲ್ಲಿ ಬರಸಿಡಿಲು ಬಡಿದಿತ್ತು. ಈ ಕೇಸ್‌ನಲ್ಲಿ ಆರೋಪಿಯಾಗಿ ಅವರು ಎರಡು ಜೈಲುಗಳಲ್ಲಿ ಹಲವು ತಿಂಗಳುಗಳನ್ನು ದೂಡಬೇಕಾಯಿತು. ಈ ಆರೋಪದಲ್ಲೇ ಅವರು ಕಳೆದ ವರ್ಷದ ಬಹುತೇಕ ಸಮಯ ಸೆರೆವಾಸದಲ್ಲೇ ಕಳೆದರು. ಮತ್ತೊಂದೆಡೆ ಅವರ ಆರೋಗ್ಯ ಕೂಡ ಹದಗೆಟ್ಟು, ಸರ್ಜರಿ ಮಟ್ಟಕ್ಕೆ ಹೋಗಿದೆ.

ಈ ಜಂಜಾಟಗಳ ನಡುವೆ ದರ್ಶನ್ ಅವರಿಗೆ ಇತ್ತೀಚೆಗಷ್ಟೇ ಜಾಮೀನು ಸಿಕ್ಕಿತ್ತು. ಈ ಹಿನ್ನೆಲೆ ಅವರು ತಮ್ಮ ನೆಚ್ಚಿನ ಮೈಸೂರಿಗೆ ತೆರಳಲು ಕೋರ್ಟ್‌ನಿಂದ ಅನುಮತಿ ಕೋರಿ ಹೋಗಿದ್ದರು. ಅಲ್ಲಿಯೇ ತಮ್ಮ ಫಾರ್ಮ್‌ಹೌಸ್‌ನಲ್ಲಿ ಸಮಯ ಕಳೆಯುತ್ತಾ ಜಂಜಾಟಗಳಿಂದ ದೂರ ಸರಿದಿದ್ದರು. ಮೈಸೂರಿನಲ್ಲಿರಲು ಗಡುವು ಮುಗಿದ ಕಾರಣ ದರ್ಶನ್ ಮತ್ತೊಮ್ಮೆ ಸಮಯ ವಿಸ್ತರಿಸುವಂತೆ ಕೋರ್ಟ್‌ಗೆ ಮನವಿ ಮಾಡಿದ್ದರು. ಅದಕ್ಕೂ ಸಹ ಕೋರ್ಟ್ ಅನುಮತಿ ನೀಡಿದೆ. ಈ ಹಿನ್ನೆಲೆ ಅವರು ಮೈಸೂರಿನಲ್ಲೇ ಬೀಡುಬಿಟ್ಟಿದ್ದಾರೆ.
ಇನ್ನೇನು ಸಂಕ್ರಾಂತಿ ಹಬ್ಬಕ್ಕೆ ಎರಡೇ ದಿನ ಬಾಕಿ ಇರುವುದರಿಂದ ದರ್ಶನ್ ಈ ವರ್ಷದ ಮೊದಲ ಹಾಗೂ ತಮ್ಮ ನೆಚ್ಚಿನ ಸಂಕ್ರಾಂತಿ ಹಬ್ಬವನ್ನು ತಮಗೆ ಇಷ್ಟವಾದ ಮೈಸೂರಿನ ಫಾರ್ಮ್‌ಹೌಸ್‌ನಲ್ಲೇ ಆಚರಿಸಲು ಉತ್ಸುಕರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಕಳೆ ವರ್ಷಗಳಲ್ಲಿ ಜೋಡೆತ್ತಿನೊಂದಿಗೆ ದರ್ಶನ್ ಅವರು ಸಂಕ್ರಾಂತಿ ಹಬ್ಬದಂದು ಕಿಚ್ಚು ಹಾಯಿಸುವ ಫೋಟೋಗಳನ್ನು ಹಂಚಿಕೊಂಡಿದ್ದರು. ಇವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಇನ್ನು ಈ ಬಾರಿ ಕೊಲೆ ಕೇಸ್ ಜಂಜಾಟದಿಂದ ಹೊರಬಂದ ನಂತರ ಬರುತ್ತಿರುವ ಮೊದಲ ಹಬ್ಬ ಆಗಿರುವುದರಿಂದ ದರ್ಶನ್ ಅವರಿಗೆ ಈ ಸಂಕ್ರಾಂತಿ ಬಹಳ ಸ್ಪೆಷಲ್ ಆಗಲಿದೆ ಎಂದು ಹೇಳಲಾಗುತ್ತಿದೆ. ತಮ್ಮ ಕುಟುಂಬಸ್ಥರೊಂದಿಗೆ ಈ ಬಾರಿ ದರ್ಶನ್ ಅವರು ಫಾರ್ಮ್‌ಹೌಸ್‌ನಲ್ಲೇ ಹಳ್ಳಿ ಸೊಗಡಿನ ಸಂಕ್ರಾಂತಿ ಆಚರಿಸಲಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications