Darshan Thoogudeepa: ನಟ ದರ್ಶನ್‌ಗೆ ತುರ್ತಾಗಿ ಆಪರೇಷನ್‌! ಅಂತದ್ದೇನಾಯ್ತು..?

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿರುವ ನಟ ದರ್ಶನ್ ತೂಗುದೀಪ ಅವರಿಗೆ ಇಂದು ಕೂಡ ಜಾಮೀನು ಸಿಗಲಿಲ್ಲ. ದರ್ಶನ್‌ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ಕೋರ್ಟ್‌ ಮತ್ತೊಮ್ಮೆ ಮುಂದೂಡಿದೆ. ಆದರೆ, ಇಂದು ದರ್ಶನ್‌ ಪರ ವಕೀಲರು ಜಾಮೀನಿಗಾಗಿ ಬಲವಾದ ಕಾರಣವನ್ನು ಕೋರ್ಟ್‌ ಮುಂದಿಟ್ಟಿದ್ದಾರೆ ಎನ್ನಲಾಗಿದೆ.

ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್‌ ಅವರು ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದು, ಅವರಿಗೆ ತುರ್ತಾಗಿ ಶಸ್ತ್ರಚಿಕಿತ್ಸೆ (ಆಪರೇಶನ್‌) ಮಾಡಿಸಲೇಬೇಕಿದೆ. ಇದಕ್ಕಾಗಿ ದರ್ಶನ್‌ ಅವರಿಗೆ ಜಾಮೀನು ನೀಡಲೇಬೇಕು ಎಂದು ವಕೀಲರು ವಾದ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Actor Darshan Thoogudeepa Lawyer Requests Court For Immediate Surgery

ದರ್ಶನ್‌ ಅವರು ಹಲವು ದಿನಗಳಿಂದ ತೀವ್ರವಾದ ಬೆನ್ನುನೋವಿನಿಂದಾಗಿ ಬಳಲುತ್ತಿರುವ ಕಾರಣ, ಅವರಿಗೆ ತಕ್ಷಣವೇ ಸರ್ಜಿಕಲ್ ಅಪರೇಶನ್ ಮಾಡಿಸುವ ಅನಿವಾರ್ಯತೆ ಎದುರಾಗಿದೆ. ಈ ಕಾರಣದಿಂದ ಅವರಿಗೆ ಆದಷ್ಟು ಬೇಗ ಜಾಮೀನು ಮಂಜೂರು ಮಾಡಿ ಎಂದು ವಕೀಲರು ನ್ಯಾಯಾಧೀಶರ ಮುಂದೆ ಕೇಳಿಕೊಂಡಿದ್ದಾರಂತೆ.

ವಕೀಲರ ವಾದ ಆಲಿಸಿದ ಕೋರ್ಟ್‌, ದರ್ಶನ್‌ ಅವರ ಆರೋಗ್ಯ ಸಮಸ್ಯೆ ಕುರಿತಂತೆ ವೈದ್ಯಕೀಯ ವರದಿಗಳನ್ನು ಸಲ್ಲಿಸುವಂತೆ ದರ್ಶನ್‌ ಪರ ವಕೀಲರಿಗೆ ಕೋರ್ಟ್‌ ಸೂಚಿಸಿದೆ. ಅಲ್ಲದೆ ದರ್ಶನ್‌ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್‌ 28ಕ್ಕೆ ಮುಂದೂಡಿದೆ.

Actor Darshan Thoogudeepa Lawyer Requests Court For Immediate Surgery

ದರ್ಶನ್‌ ಅವರಿಗೆ ಬೆನ್ನು ನೋವು ಸೇರಿದಂತೆ ಅನಾರೋಗ್ಯ ಸಮಸ್ಯೆ ಎದುರಾಗಿರುವ ಹಿನ್ನೆಲೆ, ಈಗ ತಕ್ಷಣವೇ ಆಪರೇಶನ್‌ ಅಗತ್ಯವೂ ಇರುವುದರಿಂದ ಒಂದು ವೇಳೆ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಿ ದರ್ಶನ್‌ ಅವರಿಗೆ ಜಾಮೀನು ಮಂಜೂರು ಮಾಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಮುಂದಿನ ವಿಚಾರಣೆಯೊಳಗೆ ದರ್ಶನ್‌ ಅವರ ಆರೋಗ್ಯ ಸ್ಥಿತಿಯನ್ನು ಆಧರಿಸಿ, ಜಾಮೀನಿನ ಭವಿಷ್ಯ ನಿರ್ಧಾರವಾಗಲಿದೆ.

ದರ್ಶನ್‌ ಅವರು ಸರಿಸುಮಾರು ಒಂದು ತಿಂಗಳಿನಿಂದ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಬಗ್ಗೆ ತಪಾಸಣೆಯೂ ನಡೆಸಿದ್ದ ವೈದ್ಯರು, ದರ್ಶನ್‌ ಅವರಿಗೆ ಸ್ಕ್ಯಾನಿಂಗ್‌ಗೆ ಒಳಪಡುವಂತೆ ಸಲಹೆ ನೀಡಿದ್ದರು. ಆದರೆ, ಇದಕ್ಕೆ ದರ್ಶನ್‌ ನಿರಾಕರಿಸಿದ್ದರು. ನನಗೆ ಮಾತ್ರೆ ಕೊಡಿ ಸಾಕು, ಬಳ್ಳಾರಿಯಲ್ಲಿ ನಾನು ಯಾವುದೇ ಚಿಕಿತ್ಸೆ ಪಡೆಯೋದಿಲ್ಲ, ನಾನು ಬೆಂಗಳೂರಿನಲ್ಲೇ ವೈದ್ಯಕೀಯ ತಪಾಸಣೆಗೆ ಒಳಗಾಗುತ್ತೇನೆ ಎಂದು ಹಠ ಹಿಡಿದಿದ್ದರು.

Actor Darshan Thoogudeepa Lawyer Requests Court For Immediate Surgery

ಇದೇ ಕಾರಣ ನೀಡಿ, ದರ್ಶನ್‌ ಅವರ ವಕೀಲರು ಕೂಡ ಹಲವು ಬಾರಿ ವಿಚಾರಣೆ ವೇಳೆ ದರ್ಶನ್‌ ಅವರ ಅನಾರೋಗ್ಯ ವಿಚಾರ ಪ್ರಸ್ತಾಪಿಸಿ, ಜಾಮೀನಿಗಾಗಿ ಮನವಿ ಮಾಡಿದ್ದರು. ಆದರೆ, ಕೋರ್ಟ್‌ ವಿಚಾರಣೆಯನ್ನು ಮುಂದೂಡುತ್ತಲೇ ಇದೆ. ಇದೀಗ ದರ್ಶನ್‌ ಅವರ ಅನಾರೋಗ್ಯವು ಆಪರೇಶನ್‌ ಮಾಡಿಸುವ ಹಂತಕ್ಕೆ ತಲುಪಿರುವುದರಿಂದ ಜಾಮೀನು ಸಿಗುವ ಲಕ್ಷಣಗಳು ದಟ್ಟವಾಗುತ್ತಿವೆ ಎನ್ನಲಾಗಿದೆ.

ಈ ಹಿಂದೆಯೂ ದರ್ಶನ್‌ ಅವರರು ಹಲವು ಆಪರೇಶನ್‌ಗಳಿಗೆ ಒಳಗಾಗಿದ್ದರು. ಮೈಸೂರಿನ ಬಳಿ ಅಪಘಾತವಾದಾಗಲೂ ಅವರ ಕೈ ಫ್ರಾಕ್ಚರ್‌ ಆಗಿತ್ತು. ಇದೀಗ ಜೈಲು ಸೇರಿದ ನಾಲ್ಕು ತಿಂಗಳುಗಳಾಗಿರುವುದರಿಂದ ಅವರ ಜೀವನಶೈಲಿ ಬದಲಾಗಿ, ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಬಳ್ಳಾರಿ ವಾತಾವರಣ ದರ್ಶನ್‌ ಅವರಿಗೆ ಹೊಂದುತ್ತಿಲ್ಲ ಎಂದು ಹೇಳಲಾಗಿದ್ದು, ಈ ಕಾರಣದಿಂದಲೇ ನನ್ನನ್ನು ಬೆಂಗಳೂರಿಗೆ ವಾಪಸ್‌ ಕಳಿಸಿ ಎಂದು ದರ್ಶನ್‌ ಪಟ್ಟು ಹಿಡಿದಿದ್ದರು ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+