Darshan Thoogudeepa: ನಟ ದರ್ಶನ್‌ಗೆ ಕಾದಿದ್ಯಾ ಇನ್ನೊಂದು ಸಂಕಷ್ಟ?
ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಕೊಲೆ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಸಿಕ್ಕರೂ ಕೂಡ ಟೆನ್ಶನ್ ಕಡಿಮೆ ಆದಂತೆ ಕಾಣಿಸುತ್ತಿಲ್ಲ. ಒಂದು ಕಡೆ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದಾಸ, ಮತ್ತೊಂದು ಕಡೆ ಮಧ್ಯಂತರ ಜಾಮೀನನ್ನು ಪೊಲೀಸರು ಪ್ರಶ್ನೆ ಮಾಡುವಂತೆ ಕಾಣಿಸುತ್ತಿದೆ.
ಹೌದು... ಅನಾರೋಗ್ಯದ ಕಾರಣ ಚಿಕಿತ್ಸೆಗಾಗಿ ದರ್ಶನ್ ಮಧ್ಯಂತರ ಜಾಮೀನನ್ನು ಪಡೆದುಕೊಂಡಿದ್ದಾರೆ. ಬಿಜಿಎಸ್ ಆಸ್ಪತ್ರೆಯಲ್ಲಿ ದರ್ಶನ್ ಅವರು ಚಿಕಿತ್ಸೆ ಕೂಡ ಪಡೆಯುತ್ತಿದ್ದಾರೆ. ಆದರೆ ಇತ್ತ ದರ್ಶನ್‌ಗೆ ನೀಡಿದ ಮಧ್ಯಂತರ ಜಾಮೀನನ್ನು ಪ್ರಶ್ನಿಸಿ ಪೊಲೀಸರು ಸುಪ್ರೀಂ ಮೊರೆ ಹೋಗಲು ಪ್ಲ್ಯಾನ್ ಮಾಡುತ್ತಿದ್ದಾರೆ. ಇದಕ್ಕಾಗಿ ಪೊಲೀಸರು ಕಾನೂನು ತಜ್ಞರ ಮೊರೆ ಹೋಗಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಪೊಲೀಸರು ದರ್ಶನ್‌ಗೆ ನೀಡಿದ ಮಧ್ಯಂತರ ಜಾಮೀನು ಆದೇಶ ಅಧ್ಯಯನ ನಡೆಸಿದ್ದಾರೆ. ಕಾನೂನು ತಜ್ಞರ ಅಭಿಪ್ರಾಯ ಪಡೆದು ಸುಪ್ರೀಂ ಮೊರೆಗೆ ಚಿಂತನೆ ಮಾಡುತ್ತಿದ್ದಾರೆನ್ನುವ ಮಾಹಿತಿ ಲಭ್ಯವಾಗಿದೆ.

ದರ್ಶನ್ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಸರ್ಜರಿಗಾಗಿ ಅವರಿಗೆ ಮಧ್ಯಂತರ ಜಾಮೀನು ನೀಡಲಾಗಿದೆ. ಆರು ವಾರಗಳ ಕಾಲ ಹೈಕೋರ್ಟ್‌ನ ಏಕಸದಸ್ಯರ ಪೀಠ ದರ್ಶನ್‌ಗೆ ಷರತ್ತು ಬದ್ಧ ಜಾಮೀನು ನೀಡಿದೆ. ಈಗ ದರ್ಶನ್ ಅವರಿಗೆ ನೀಡಿದ ಈ ಮಧ್ಯಂತರ ಜಾಮೀನಿನ ಬಗ್ಗೆ ಪ್ರಶ್ನೆ ಮಾಡಲು ಚಿಂತನೆ ನಡೆಸಿದ್ದಾರೆ ಪೊಲೀಸರು. ಇದಕ್ಕಾಗಿ ಪೊಲೀಸರು ಸುಪ್ರೀಂ ಮೊರೆ ಹೋಗುವ ಸಾಧ್ಯತೆಗಳು ಇವೆ.
ಗೃಹ ಇಲಾಖೆ ಗ್ರೀನ್ ಸಿಗ್ನಲ್ ಕೊಡುತ್ತಿದ್ದಂತೆ ಸುಪ್ರೀಂನತ್ತ ಹೆಜ್ಜೆ ಇಡಲು ಪೊಲೀಸರು ಸಿದ್ಧರಾಗಿದ್ದಾರೆ. ಎರಡರಿಂದ ಮೂರು ದಿನಗಳಲ್ಲಿ ಲೀಗಲ್ ಒಪಿನಿಯನ್ ಪಡೆಯಲು ಖಾಕಿ ತಂಡ ಮುಂದಾಗುತ್ತಿದೆ. ದರ್ಶನ್ ಬೆನ್ನುನೋವಿಗೆ ಶಸ್ತ್ರ ಚಿಕಿತ್ಸೆ ಅಗತ್ಯ ಎಂದು ವರದಿಯನ್ನು ವಿಮ್ಸ್ ನೀಡಿತ್ತು. ಇದನ್ನು ಪ್ರಶ್ನಿಸಿ ಪೊಲೀಸರು ಸುಪ್ರೀಂ ಮೊರೆ ಹೋಗುವ ಸಾಧ್ಯತೆಗಳು ದಟ್ಟವಾಗಿವೆ.
ಹೀಗಾಗಿ ಮಧ್ಯಂತರ ಜಾಮೀನಿನ ಮೇಲೆ ಹೊರಗಿದ್ದರೂ ಕೂಡ ದರ್ಶನ್‌ಗೆ ಟೆನ್ಶನ್ ಶುರುವಾಗಿದೆ. ಒಂದು ವೇಳೆ ಪೊಲೀಸರು ಮಧ್ಯಂತರ ಜಾಮೀನು ಪ್ರಶ್ನೆ ಮಾಡಿ ಸುಪ್ರೀಂ ಕೋರ್ಟ್‌ಗೆ ಹೋಗಿದ್ದೇ ಆದರೆ ಅದು ದಾಸನಿಗೆ ಹೊಸ ಸಂಕಷ್ಟ ತಂದಿಡುವ ಸಾಧ್ಯತೆ ಇದೆ.
ದರ್ಶನ್ ಬಿಜಿಎಸ್ ಆಸ್ಪತ್ರೆ ಆದರೆ ಮತ್ತೊಬ್ಬ ಕೈದಿಗೆ ಮತ್ತೊಂದು ಆಸ್ಪತ್ರೆ ಬೇಕಂತೆ...
ಜೈಲಿನಲ್ಲಿ ಹಲವಾರು ಕೈದಿಗಳು ಇದ್ದಾರೆ. ಅವರಿಗೆ ಅನಾರೋಗ್ಯ ಸಂದರ್ಭದಲ್ಲಿ ಜೈಲು ಅಧಿಕಾರಿಗಳ ಸೂಚಿಸಿದಂತಹ ಆಸ್ಪತ್ರೆಯಲ್ಲೇ ಚಿಕಿತ್ಸೆಯನ್ನು ಪಡೆಯಬೇಕು. ಆದರೆ ದರ್ಶನ್ ಮಾತ್ರ ಹಾಗೇ ಮಾಡಲೇ ಇಲ್ಲ. ತಮಗೆ ಸೂಚನೆ ನೀಡಿದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಒಪ್ಪದ ದಾಸ ಸುಪ್ರೀಂ ಕೋರ್ಟ್‌ನಲ್ಲಿ ತಮಗೆ ಅನಾರೋಗ್ಯದಿಂದಾಗಿ ಜಾಮೀನು ನೀಡಬೇಕೆಂದು ತಮ್ಮ ವಕೀಲರಿಂದ ಜಾಮೀನು ಅರ್ಜಿ ಹಾಕಿಸಿದ್ದರು. ಇದಕ್ಕೆ ಕೋರ್ಟ್ ಕೂಡ ಅಸ್ತು ಎಂದಿದೆ.
ಸದ್ಯ ಜೈಲಿನಲ್ಲಿ ಇರುವ ಕೈದಿಗಳಿಗೆ ಇದೇ ನಿಯಮ ಅನ್ವಯ ಆಗುತ್ತಾ ಎನ್ನುವ ಪ್ರಶ್ನೆ ಮೂಡಿದೆ. ಕೈದಿಗಳು ತಮಗೆ ಅನಾರೋಗ್ಯದ ಸಂದರ್ಭದಲ್ಲಿ ವೈದ್ಯರ ಸಲಹೆಯಂತೆ ತಮಗೆ ಬೇಕಾದ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತೇವೆ ಅಂದರೆ ಇದಕ್ಕೆ ಒಪ್ಪಿಗೆ ಸಿಗುತ್ತಾ ಎನ್ನುವ ಪ್ರಶ್ನೆಗಳು ಸಾಮಾನ್ಯ ಜನರಲ್ಲಿ ಹುಟ್ಟಿಕೊಂಡಿವೆ.
ದರ್ಶನ್ ಬಿಡುಗಡೆಗಾಗಿ ಹಲವಾರು ಬಾರಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ಹೊರಬರಲು ಸಾಧ್ಯವಾಗಿರಲಿಲ್ಲ. ಆದರೀಗ ಅನಾರೋಗ್ಯದ ಕಾರಣ ಅವರಿಗೆ ಜಾಮೀನು ಸಿಕ್ಕಿದೆ. ಚಿಕಿತ್ಸೆ ಪಡೆಯಲು ಅವರಿಗೆ ಆರು ವಾರ ಕಾಲಾವಕಾಶ ನೀಡಲಾಗಿದೆ. ಮೊನ್ನೆ ಮೊನ್ನೆಯಷ್ಟೇ ಮಧ್ಯದ ಬೆರಳು ತೋರಿಸಿದ್ದ ದಾಸ ಈಗ ಬೆನ್ನು ನೋವಿನಿಂದ ತಗ್ಗಿಬಗ್ಗಿ ನಡೆಯುತ್ತಿದ್ದಾರೆ. ಇದೆಲ್ಲಾ ಹೇಗೆ ಸಾಧ್ಯ ಆಯ್ತು ಅನ್ನೋದೇ ಅರ್ಥ ಆಗುತ್ತಿಲ್ಲ. ಅದೇನೇ ಆಗಲಿ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ದರ್ಶನ್‌ಗೆ ಟೆನ್ಶನ್ ಮಾತ್ರ ಕಡಿಮೆ ಆಗಿಲ್ಲ ಎನ್ನೋದು ಮಾತ್ರ ಸುಳ್ಳಲ್ಲ.












Click it and Unblock the Notifications