Darshan Thoogudeepa: ಮತ್ತೆ ಜೈಲು ಸೇರುವ ಭೀತಿಯಲ್ಲಿ ದಾಸ; ಸುಪ್ರೀಂ ಕೋರ್ಟ್‌ಗೆ ವಿಶೇಷ ಮನವಿ ಮಾಡಿದ ನಟ ದರ್ಶನ್
ಬೆಂಗಳೂರು, ಆಗಸ್ಟ್ 07: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್‌ಗೆ ಮತ್ತೆ ಡವ ಡವ ಶುರುವಾಗಿದೆ. ದರ್ಶನ್ ಹಾಗೂ ಅವರ ಗ್ಯಾಂಗ್ನ ಜಾಮೀನು ರದ್ದಾಗುತ್ತಾ? ಮತ್ತೆ ದಾಸ ಹಾಗೂ ಪವಿತ್ರಾ ಗೌಡ ಜೈಲು ಸೇರ್ತಾರಾ ಎಂಬ ಪ್ರಶ್ನೆ ಸದ್ಯ ಕೋಟಿ ಕೋಟಿ ಕನ್ನಡಿಗರ ಮುಂದಿದೆ. ಯಾಕಂದ್ರೆ ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ನಟ ದರ್ಶನ್ ಬೇಲ್ ಭವಿಷ್ಯ ಇನ್ನೂ ಸುಪ್ರಿಂ ಕೋರ್ಟ್ ಕಟಕಟೆಯಲ್ಲಿದೆ.. ದರ್ಶನ್ ಗ್ಯಾಂಗ್ ಮತ್ತೆ ಜೈಲಿಗೆ ಹೋಗುವಂತಾಗುತ್ತಾ ಎನ್ನುವ ಟೆನ್ಷನ್ ಅವರ ಅಭಿಮಾನಿಗಳನ್ನ ಕಾಡಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ ಗೆ ಸಂಬಂಧಿಸಿದಂತೆ ನಟಿ ಪವಿತ್ರಾ ಗೌಡ ಅವರು ಈಗಾಗಲೇ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ. ನಾನು ಕೊಲೆ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಆದರೆ, ಅಶ್ಲೀಲ ಮೆಸೇಜ್ಗಳನ್ನು ರೇಣುಕಾಸ್ವಾಮಿ ಕಳುಹಿಸಿದ್ದ.. ನನಗೂ ಮತ್ತು ಉಳಿದ ಆರೋಪಿಗಳಿಗೂ ಯಾವುದೇ ಸಂಬಂಧ ಇಲ್ಲ.. ನನಗೆ 10ನೇ ತರಗತಿ ಓದುವ ಮಗಳು ಇದ್ದಾಳೆ. ನಾನು ಸಿಂಗಲ್ ಪೇರೆಂಟ್ ಆಗಿದ್ದು, ಅವಳನ್ನ ನಾನು ನೋಡಿಕೊಳ್ಳಬೇಕು. ನನಗೆ ವಯಸ್ಸಾದ ಪೋಷಕರಿದ್ದಾರೆ, ಅವರಿಗೆ ನಾನೇ ಆಧಾರ. ಈ ವರ್ಷ ಬೋರ್ಡ್ ಪರೀಕ್ಷೆಗಳು ಇವೆ.. ನನಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಅಥವಾ ಕೇಸ್ ಇಲ್ಲ.. ನಾನು ಫ್ಯಾಷನ್ ಡಿಸೈನರ್ ಆಗಿದ್ದು.. ಜೀವನಕ್ಕಾಗಿ ಸ್ಟುಡಿಯೋ ನಡೆಸುತ್ತಿದ್ದೇನೆ ಎಂದು ಮನವಿ ಮಾಡಿದ್ದಾರೆ.

ಪವಿತ್ರಾ ಗೌಡ ಮನವಿಯ ಬಳಿಕ ಇದೀಗ ನಟ ದರ್ಶನ್ ಗೆ ಮತ್ತೆ ಜೈಲು ಸೇರುವ ಭೀತಿ ಎದುರಾಗಿದ್ದು, ಮತ್ತೆ ಡವ ಡವ ಶುರುವಾದಂತೆ ಕಾಣುತ್ತಿದೆ. ಈಗಾಗಲೇ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಆರು ತಿಂಗಳುಗಳ ಕಾಲ ಜೈಲಿನಲ್ಲಿ ವಿಲ ವಿಲ ಎಂದಿದ್ದು, ಇದೀಗ ಜಾಮೀನಿನ ಮೇಲೆ ಜೈಲಿನಿಂದ ಹೊರ ಬಂದಿದ್ದಾರೆ. ಬೇಲ್ ಭವಿಷ್ಯದ ಮಧ್ಯೆ ಸುಪ್ರೀಂ ಕೋರ್ಟ್ಗೆ ಲಿಖಿತ ರೂಪದಲ್ಲೂ ಸರ್ಕಾರದ ಪರ ವಕೀಲರು ಪ್ರಬಲ ವಾದ ಮಂಡಿಸಿದ್ದು ಬೇಲ್‌ಗೆ ಅಡ್ಡಿಯಾಗುವ ಆತಂಕ ಎದುರಾಗಿದೆ.
ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ನಟ ದರ್ಶನ್ ಅವರು ಈಗಾಗಲೇ ಷರತ್ತುಬದ್ಧ ಜಾಮೀನು ಪಡೆದು ಹೊರ ಬಂದಿದ್ದಾರೆ. ಆದರೆ ಸುಪ್ರೀಂ ಕೋರ್ಟ್ ನೀಡಿರುವ ಜಾಮೀನು ರದ್ದು ಕೋರಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆ ಸದ್ಯ ಚಾಲ್ತಿಯಲ್ಲಿದೆ. ಜುಲೈ 24ರಂದು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಆದೇಶವನ್ನು ಕಾಯ್ದಿರಿಸಿದೆ. ಪ್ರಕರಣದಲ್ಲಿ ನಟ ದರ್ಶನ್ ಸೇರಿ 7 ಆರೋಪಿಗಳ ಜಾಮೀನನ್ನು ರದ್ದು ಮಾಡುವಂತೆ ಸುಪ್ರೀಂನಲ್ಲಿ ಮನವಿ ಮಾಡಲಾಗಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಅರ್ಜಿ ವಿಚಾರಣೆ ವೇಳೆ ವಾದ-ಪ್ರತಿವಾದ ಆಲಿಸಿದ ಕೋರ್ಟ್ ತೀರ್ಪು ಕಾಯ್ದಿರಿಸಿದೆ. ವಾರದಲ್ಲಿ ಲಿಖಿತ ವಾದ ಸಲ್ಲಿಸಲು ಸೂಚಿಸಿತ್ತು. ಇನ್ನೆರಡು ದಿನಗಳಲ್ಲಿ ಸುಪ್ರೀಂ ಆದೇಶ ಹೊರ ಬೀಳಲಿದೆ. ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ನಟ ದರ್ಶನ್ ಆತಂಕಕ್ಕೊಳಗಾಗಿದ್ದು, ಇದರ ನಡುವೆ ಜಾಮೀನು ರದ್ದು ಮಾಡದಂತೆ ದರ್ಶನ್ ಪರ ವಕೀಲರು ಸುಪ್ರೀಂಗೆ ಲಿಖಿತ ಕಾರಣಗಳನ್ನು ನೀಡಿದ್ದಾರೆ. ಆದರೆ, ದರ್ಶನ್‌ಗೆ ನೀಡಿರುವ ಜಾಮೀನು ರದ್ದು ಮಾಡಬೇಕು ಎಂದು ಕರ್ನಾಟಕದ ಸರ್ಕಾರದ ಪರ ವಕೀಲರು ಕೂಡ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಮಾಡಿದ್ದಾರೆ. ದರ್ಶನ್‌ಗೆ ಜಾಮೀನು ನೀಡಿರುವ ಹೈಕೋರ್ಟ್ ನಡೆ ತಪ್ಪಾಗಿದೆ. ಡಿಎನ್‌ಎ ಪುರಾವೆ, ಸಾಕ್ಷಿ ಹೇಳಿಕೆ ಹಾಗೂ ಆರೋಪಿಗಳ ಅಪರಾಧದ ಹಿನ್ನೆಲೆ ಉಲ್ಲೇಖಿಸಿ ಜಾಮೀನು ರದ್ದು ಮಾಡುವಂತೆ ಕೇಳಿದ್ದಾರೆ.












Click it and Unblock the Notifications