Actor Darshan: ನಿನ್ನ ನೋಡಬೇಕು, ಮಾತಾಡಬೇಕು: ಪವಿತ್ರಾ ಗೌಡ ಕೇಳಿಕೊಂಡಾಗ ದರ್ಶನ್ ಕೊಟ್ಟಿದ್ದು ಈ ಉತ್ತರ
Actor Darshan: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರ ಭೇಟಿಗೆ ಅವಕಾಶ ಕೊಡಬೇಕೆಂದು ಇದೇ ಪ್ರಕರಣದ ಮತ್ತೋರ್ವ ವಿಚಾರಣಾಧೀನ ಕೈದಿ ಪವಿತ್ರಾ ಗೌಡ ಮನವಿ ಮಾಡಿದ್ದಾರೆ. ಅವರು ಏನೆಲ್ಲಾ ಕೇಳಿಕೊಂಡಿದ್ದಾರೆ ಹಾಗೂ ಇದಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪ್ರತಿಕ್ರಿಯೆ ಹೇಗಿತ್ತು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಎ2 ಹಾಗೂ ಪವಿತ್ರಾ ಗೌಡ ಎ1 ಆರೋಪಿಗಳಾಗಿದ್ದು, ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇದೀಗ ಬಂದ ಮಾಹಿತಿ ಪ್ರಕಾರ, ಜೈಲಿನಲ್ಲಿ ನಟ ದರ್ಶನ್ ಅವರನ್ನ ಭೇಟಿ ಮಾಡಲು ಸಹ ವಿಚಾರಣಾಧೀನ ಕೈದಿ ಪವಿತ್ರಾಗೌಡ ಮನವಿ ಮಾಡಿಕೊಂಡಿದ್ದಾರೆ. ಆದರೆ, ಇದಕ್ಕೆ ದರ್ಶನ್ ಅವರು ನಿರಾಕರಸಿದ್ದಾರೆ ಎಂದು ತಿಳಿದುಬಂದಿದೆ.

ಕಾರಾಗೃಹ ಇಲಾಖೆ ಡಿಜಿಪಿಯಾಗಿ ಜವಾಬ್ದಾರಿ ವಹಿಸಿಕೊಂಡ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರು ಇತ್ತೀಚೆಗಷ್ಟೇ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ದರು. ಈ ವೇಳೆ ರೇಣುಕಾಸ್ವಾಮಿ ಕೊಲೆ ಪ್ರಕರಣದ A2 ಆರೋಪಿ ನಟ ದರ್ಶನ್ ಹಾಗೂ A1 ಪವಿತ್ರಾ ಗೌಡ ಇಬ್ಬರನ್ನು ಮಾತನಾಡಿಸಿದ್ದರು. ಇದೇ ವೇಳೆ ಸಹ ಕೈದಿಗಳ ಭೇಟಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದರು. ಆದರೆ, ಈ ವಿಚಾರ ತಿಳಿಯುತ್ತಿದ್ದಂತೆ ದರ್ಶನ್ ಯಾವುದೇ ಕಾರಣಕ್ಕೂ ಭೇಟಿ ಮಾಡುವುದಿಲ್ಲ ಎಂದು ತಿರಸ್ಕಾರ ಮಾಡಿದ್ದಾರೆ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ಟ್ರಯಲ್ ಆರಂಭವಾಗಿದೆ. ಡಿಸೆಂಬರ್ 17ರಂದು ರೇಣುಕಾಸ್ವಾಮಿ ತಂದೆ, ತಾಯಿಯನ್ನು ಕರೆದು ವಿಚಾರಣೆ ಮಾಡಲಾಯಿತು. ಇನ್ನೂನೂ ಹಲವಾರು ಸಾಕ್ಷಿಗಳಿಗೆ ಸಮನ್ಸ್ ನೀಡಿ ಕೋರ್ಟ್ ಟ್ರಯಲ್ ನಡೆಸಬೇಕಿದೆ. ಇಂತಹ ಸಮಯದಲ್ಲೇ ದರ್ಶನ್ ಜೊತೆ ಮಾತನಾಡಬೇಕು ಎಂದು ಪವಿತ್ರಾ ಗೌಡ ಯತ್ನಿಸಿದ್ದಾತೆ. ಆದರೆ, ಅದಕ್ಕೆ ದರ್ಶನ್ ಅವರು ನಿರಾಕರಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಕೊಲೆ ಕೇಸ್‌ನಲ್ಲಿ ಆರೋಪಿಗಳಾಗಿ ಜೈಲು ಸೇರುವುದಕ್ಕೂ ಮುಂಚೆ ನಟ ದರ್ಶನ್ ಮತ್ತು ಪವಿತ್ರಾ ಗೌಡ ಅವರು ತುಂಬಾ ಆಪ್ತವಾಗಿದ್ದರು. ಅದಕ್ಕೆ ಅವರಿಬ್ಬರ ಅನೇಕ ಫೋಟೋಗಳೇ ಸಾಕ್ಷಿ. ಆದರೆ, ಅದೊಂದು ಕೊಲೆ ಪ್ರಕರಣದಿಂದ ಇಬ್ಬರು ಜೈಲು ಸೇರಿದದ್ದಾರೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಎಂಬ ಕಾರಣಕ್ಕೆ ನಟ ದರ್ಶನ್ ಹಾಗೂ ಗ್ಯಾಂಗ್ ಸೇರಿ ಆತನನ್ನು ಭೀಕರವಾಗಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸ್ ದಾಖಲೆಗಳಲ್ಲಿ ಉಲ್ಲೇಖವಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಸುಪ್ರೀಂ ಕೋರ್ಟ್‌ವರೆಗೂ ಹೋಗಿದ್ದು, ವಿಚಾರಣೆ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಕೋರ್ಟ್ ಏನು ತೀರ್ಪು ನೀಡುತ್ತದೆಯೋ ಎಂದು ಕಾದುನೋಡಬೇಕಿದೆ.












Click it and Unblock the Notifications