Actor Darshan: ಇಂದೇ.. ಸ್ಯಾಂಡಲ್‌ವುಡ್ ನಟ, ನಟಿಯರಿಗೆ ದರ್ಶನ್ ಮಹತ್ವದ ಸಂದೇಶ ರವಾನೆ
Actor Darshan Thoogudeepa: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ & ಗ್ಯಾಂಗ್ ಜೈಲು ಪಾಲಾಗಿದ್ದಾರೆ. ಇಂದು (ಅಕ್ಟೋಬರ್ 28) ಹೈಕೋರ್ಟ್‌ನಲ್ಲಿ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದೆ. ಮತ್ತೊಂದೆಡೆ ಚಿತ್ರರಂಗದ ನಟ, ನಟಿಯರಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮೂಲಕ ಸಂದೇಶವೊಂದನ್ನು ರವಾನಿಸಿದ್ದಾರೆ. ಇಲ್ಲಿದೆ ನೋಡಿ ಮಾಹಿತಿ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್‌ನನ್ನು ಹೊರತರಲು ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬಸ್ಥರು ಇನ್ನಿಲ್ಲದೆ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಅಲ್ಲದೆ, ವಿಜಯಲಕ್ಷ್ಮಿ ಪತಿ ದರ್ಶನ್‌ಗಾಗಿ ಟೆಂಪಲ್ ರನ್ ಕೂಡ ಮುಂದುವರೆಸಿದ್ದಾರೆ. ಮತ್ತೊಂದಡೆ ಅಭಿಮಾನಿಗಳು ಕೂಡ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಬಾಸ್ ಬೇಗ ಬಿಡುಗಡೆಯಾಗಲಿ ಎಂದು ಬೇಡಿಕೊಳ್ಳುತ್ತಿದ್ದಾರೆ.

ಅಲ್ಲದೆ, ಜೈಲು ನಿಯಮದ ಪ್ರಕಾರ ವಾರಕ್ಕೊಮ್ಮೆಯಾದರೂ ಪತ್ನಿ ವಿಜಯಲಕ್ಷ್ಮಿ ಪತಿ ದರ್ಶನ್ ಆರೋಗ್ಯ ವಿಚಾರಿಸಲು ಜೈಲಿಗೆ ಆಗಮಿಸುತ್ತಲೇ ಇದ್ದಾರೆ. ಮತ್ತೊಂದೆಡೆ ನಟ, ನಟಿಯರು, ಆಪ್ತರು ಕೂಡ ಜೈಲಿನಲ್ಲಿ ದರ್ಶನ್ ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಲು ಬರುತ್ತಲೇ ಇದ್ದಾರೆ. ಆದರೆ ಇದೀಗ ದರ್ಶನ್ ನಟ, ನಟಿಯರಿಗೆ ಪ್ರಮುಖ ಸಂದೇಶವೊಂದನ್ನು ರವಾನಿಸಿದ್ದಾರೆ.
"ಯಾರೂ ಬಳ್ಳಾರಿ ಜೈಲಿಗೆ ಬರುವುದು ಬೇಡ, ಸದ್ಯ ನನಗೆ ಯಾರನ್ನೂ ಭೇಟಿ ಮಾಡಲು ಇಷ್ಟವಿಲ್ಲ," ಎಂದು ದರ್ಶನ್ ಪತ್ನಿ ವಿಜಯಲಕ್ಷ್ಮಿ ಮೂಲಕ ಸಂದೇಶ ಕಳುಹಿಸಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ. ಈಗಾಗಲೇ ದರ್ಶನ್ ಬಳ್ಳಾರಿ ಜೈಲಿಗೆ ಬಂದು ಎರಡು ತಿಂಗಳು ಕಳೆದಿದ್ದು, ಈ ಅವಧಿಯಲ್ಲಿ ಚಾರ್ಜ್‌ಶೀಟ್, ಜಾಮೀನು ತಲೆಬಿಸಿ ಜೊತೆಗೆ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈಗಾಗಲೇ ದರ್ಶನ್‌ನನ್ನ ಎರಡು ತಿಂಗಳಲ್ಲಿ ಪತ್ನಿ, ತಾಯಿ, ಸಹೋದರ, ಸಹೋದರಿ, ಸಂಬಂಧಿಗಳಾದ ಸುಶಾಂತ್, ಹೇಮಂತ್, ಚಂದ್ರ ಭೇಟಿಯಾಗಿದ್ದಾರೆ. ಅಲ್ಲದೆ, ನಟ ಧನ್ವಿರ್ ಸೇರಿದಂತೆ ಕೆಲವು ಆಪ್ತರು ಭೇಟಿ ಮಾಡಿದ್ದಾರೆ.
ಇದೀಗ ದರ್ಶನ್‌ನನ್ನು ನೋಡಲು ಹಲವು ನಟ-ನಟಿಯರು ಬಳ್ಳಾರಿ ಜೈಲಿಗೆ ಆಗಮಿಸಲು ಮುಂದಾಗಿದ್ದಾರೆ. ಇದೀಗ ಪತ್ನಿ ವಿಜಯಲಕ್ಷ್ಮಿ ಬಳಿ ಜೈಲಿಗೆ ಹೋಗಿ ದರ್ಶನ್ ಭೇಟಿ ಮಾಡಲು ನಟ-ನಟಿಯರು ಅವಕಾಶವನ್ನು ಕೇಳುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇದೇ ವಿಚಾರವನ್ನು ದರ್ಶನ್‌ಗೆ ವಿಜಯಲಕ್ಷ್ಮಿ ಹೇಳಿದ್ದಕ್ಕೆ, ದರ್ಶನ್ ಸದ್ಯಕ್ಕೆ ಯಾರು ಬರುವುದು ಬೇಡ. ಸ್ವಲ್ಪ ದಿನದಲ್ಲೇ ಜಾಮೀನು ಸಿಗಬಹುದು. ಆಗ ನಾನೇ ಬೆಂಗಳೂರಿಗೆ ಬರುತ್ತೇನೆ, ಅಲ್ಲಿಯೇ ಭೇಟಿ ಮಾಡೋಣ ಎಂಬ ಸಂದೇಶವನ್ನು ಕಳುಹಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications