Actor Darshan Bail: ಪವಿತ್ರಾ ಗೌಡ ಜೈಲಿಂದ ಹೊರಬರೋದು ಯಾವಾಗ? ಎಷ್ಟು ಜನರಿಂದ ಶ್ಯೂರಿಟಿ ಬೇಕು?

Actor Darshan Case: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌, ಪವಿತ್ರಾ ಗೌಡ ಸೇರಿದಂತೆ 7 ಮಂದಿಗೆ ಇಂದು (ಡಿಸೆಂಬರ್ 13) ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ. ಹಾಗಾದರೆ ಇವೆರೆಲ್ಲರು ಜೈಲಿನಿಂದ ಯಾವತ್ತು ಹೊರಗಡೆ ಬರಲಿದ್ದಾರೆ ಹಾಗೂ ಎಷ್ಟು ಜನ ಶ್ಯೂರಿಟಿ ಹಾಕಬೇಕು ಎನ್ನುವ ಮಾಹಿತಿಯನ್ನು ಇಲ್ಲಿ ಗತಿಳಿಯಿರಿ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ಧ ನಟ ದರ್ಶನ್‌ ಇತ್ತೀಚೆಗಷ್ಟೇ ಬೆನ್ನು ನೋವು ಹಿನ್ನೆಲೆ ಸರ್ಜರಿಗೆಂದು ಹೈಕೋರ್ಟ್‌ ಮಧ್ಯಂತರ ಜಾಮೀನಿನ ಮೇಲೆ ಹೊರಗಡೆ ಬಂದಿದ್ದರು. ಇದರ ನಡುವೆಯೇ ಜಾಮೀನಿಗಾಗಿ ದರ್ಶನ್‌ ಹೋರಾಟ ನಡೆಸಿದ್ದು, ಇಂದು ಕೊನೆಗೂ ದರ್ಶನ್‌ ಪವಿತ್ರಾ ಗೌಡ ಸೇರಿ 7 ಮಂದಿಗೆ ಜಾಮೀನು ಮಂಜೂರು ಮಾಡಿದೆ. ಇವರು ಹೊರಗಡೆ ಬರಬೇಕೆಂದರೆ ತಲಾ ಇಬ್ಬರು ಶ್ಯೂರಿಟಿ ನೀಡಬೇಕಾಗುತ್ತದೆ ಎಂದು ಕೋರ್ಟ್‌ ತಿಳಿಸಿದೆ.

Actor Darshan How Many people Sureties Need to Pavithra Gowda for Released from Jail

ಒಂದು ವೇಳೆ ಇಂದು ಶ್ಯೂರಿಟಿ ನೀಡದಿದ್ದರೆ, ಸೋಮವಾರವೇ ಪವಿತ್ರಾ ಗೌಡ ಹಾಗೂ ಇನ್ನುಳಿದ ಆರೋಪಿಗಳು ಸೋಮವಾರದವರೆಗೂ ಕಾಯಬೇಕಾಗುತ್ತದೆ. ಯಾಕೆಂದರೆ, ಶನಿವಾರ ಹಾಗೂ ಭಾನುವಾರ ರಜೆ ಇರುವ ಕಾರಣ ಸೋಮವಾರದವರೆಗೂ ಕಾಯಬೇಕಾಗುತ್ತದೆ.

ನಟ ದರ್ಶನ್‌ ಈಗಾಗಲೇ ಸರ್ಜರಿಗೆಂದು ಮಧ್ಯಂತರ ಜಾಮೀನಿನ ಮೇಲೆ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿದ್ದಾರೆ. ಆದರೆ, ಪವಿತ್ರಾ ಗೌಡ ಇನ್ನೂ ಪರಪ್ಪನ ಅಗ್ರಹಾರದಲ್ಲಿದ್ದು, ಇಂದು ಹೈಕೋರ್ಟ್ ಜಾಮೀನು ಮಂಜೂರು ಆಗಿದೆ. ಈ ವಿಚಾರ ತಿಳಿದ ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಸಂತಸಪಟ್ಟಿದ್ದಾರೆ.

ಪವಿತ್ರಾ ಗೌಡಗೆ ಜಾಮೀನು ದೊರೆತಿದೆ. ಆದರೆ, ಬಿಡುಗಡೆ ಭಾಗ್ಯ ಮಾತ್ರ ಇನ್ನೂ ಇಲ್ಲ. ನಾಳೆ ಶನಿವಾರ ಇನ್ನು ಡಿಸೆಂಬರ್ 15ರಂದು ಭಾನುವಾರ ಆಗಿದೆ. ಆದ್ದರಿಂದ ಈ ರಜೆ ದಿನಗಳಲ್ಲಿ ಕೋರ್ಟ್‌ ಪ್ರೋಸಿಜರ್ ಆಗುವುದಿಲ್ಲ. ಈ ಹಿನ್ನೆಲೆ ಪವಿತ್ರಾ ಗೌಡ ಸೋಮವಾರವೇ ಜೈಲಿನಿಂದಲೇ ಬಿಡುಗಡೆಯಾಗಲಿದ್ದಾರೆ ಎನ್ನಲಾಗುತ್ತಿದೆ.

ಪವಿತ್ರಾ ಗೌಡ ಸೇರಿ ಇತರ ಆರೋಪಿಗಳಿಗಳು ಸಹ ಸೋಮವಾರವೇ ಬಿಡುಗಡೆಯಾಗಲಿದ್ದಾರೆ. ಪವಿತ್ರಾ ಗೌಡ ಕಳೆದ 7 ತಿಂಗಳಿನಿಂದಲೂ ಜೈಲಿನಲ್ಲಿಯೇ ಇದ್ದಾರೆ. ಅಲ್ಲದೆ, ಜಾಮೀನಿಗಾಗಿ ತುಂಬಾ ಪರದಾಡಿಯೂ ಇದ್ದಾರೆ. ಆದರೆ, ವಕೀಲರ ವಾದಗಳು ಆಗ ಕೆಲಸ ಮಾಡಿರಲಿಲ್ಲ. ಇದರ ಬೆನ್ನಲ್ಲೇ ಸಿಂಗಲ್ ಪೇರೆಂಟ್ ಎಂಬ ವಿಷಯವನ್ನಿಟ್ಟುಕೊಂಡು ಪವಿತ್ರಾ ಗೌಡ ಪರ ವಕೀಲರು ವಾದ ಮಂಡಿಸಿದ್ದರು. ಆಗಲೂ ಯಾವುದೇ ಪ್ರಯೋಜನೆ ಇಲ್ಲದಂತಾಗಿತ್ತು.

ಇದೀಗ ಇಂದು ಪವಿತ್ರಾ ಗೌಡಗೆ ಜಾಮೀನು ದೊರೆತಿದ್ದು, ಈ ಮೂಲಕ ಪವಿತ್ರಾ ಗೌಡ ಸಂತಸದಲ್ಲಿ ತೇಲಾಡುತ್ತಿದ್ದಾರೆ. ಇನ್ನುಳಿದಂತೆ ರೇಣುಕಾಸ್ವಾಮಿ ಪ್ರಕರಣದಲ್ಲಿ ಎ1 ಆರೋಪಿ ಆಗಿರುವ ಪವಿತ್ರಾ ಗೌಡ ಜಾಮೀನಿನ ಮೇಲೆ ಸೋಮವಾರವೇ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+