Devil Movie Release: "ಡೆವಿಲ್‌" ಸಿನಿಮಾ ರಿಲೀಸ್‌ ಡೇಟ್‌ ಮತ್ತೆ ಚೇಂಜ್‌, ಯಾವಾಗ?

ನಟ ದರ್ಶನ್‌ ತೂಗುದೀಪ ಅವರ ಬಹುನಿರೀಕ್ಷಿತ "ಡೆವಿಲ್‌" ಸಿನಿಮಾ ರಿಲೀಸ್‌ ಆಗುವ ಖುಷಿಯಲ್ಲಿದ್ದ ಡಿಬಾಸ್‌ ಅಭಿಮಾನಿಗಳಿಗೆ ಚಿತ್ರತಂಡ ಮಹತ್ವದ ಅಪ್‌ಡೇಟ್‌ ನೀಡಿದೆ. ಈ ಸಿನಿಮಾ ನಟ ದರ್ಶನ್‌ ಅವರು ಜೈಲಿನಲ್ಲಿದ್ದರೂ ಡಿಸೆಂಬರ್‌ 12ರಂದು ಡೆವಿಲ್‌ ಸಿನಿಮಾ ರಿಲೀಸ್‌ ಆಗುವುದಾಗಿ ಚಿತ್ರತಂಡವು ದಿನಾಂಕ ಘೋಷಿಸಿತ್ತು. ಹೀಗಾಗಿ ಇನ್ನು ಎರಡೇ ವಾರಗಳಲ್ಲಿ ಸಿನಿಮಾ ತೆರೆಗೆ ಬರಲಿದೆ ಎಂದು ಫ್ಯಾನ್ಸ್‌ ಕೂಡ ಕಾಯುತ್ತಿದ್ದರು. ಆದರೆ ಚಿತ್ರತಂಡವು ಕೆಲವೇ ದಿನಗಳು ಬಾಕಿ ಇರುವಾಗಲೇ ಬಿಡುಗಡೆ ದಿನಾಂಕವನ್ನು ಮತ್ತೆ ಬದಲಾಯಿಸಿದೆ.

ದರ್ಶನ್‌ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಂಧನವಾಗಿದ್ದರಿಂದ ಡೆವಿಲ್‌ ಸಿನಿಮಾ ಅಂದುಕೊಂಡ ಸಮಯಕ್ಕೆ ಶೂಟಿಂಗ್‌ ಮುಗಿಸಲಿಲ್ಲ. ಸಿನಿಮಾ ರಿಲೀಸ್‌ ಕೂಡ ಆಗಲಿಲ್ಲ. ಬಳಿಕ ದರ್ಶನ್‌ ಅವರು ಹಲವು ತಿಂಗಳ ಬಳಿಕ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದರು. ಹೀಗಾಗಿ ಡೆವಿಲ್‌ ಸಿನಿಮಾದ ಬಾಕಿ ಶೂಟಿಂಗ್‌ ವೇಗವಾಗಿ ಮುಗಿಸಿದ್ದರು. ಇನ್ನೇನು ಸಿನಿಮಾ ರಿಲೀಸ್‌ ದಿನಾಂಕ ಘೋಷಣೆ ಮಾಡಬೇಕು ಎನ್ನುವಷ್ಟರಲ್ಲಿ ದರ್ಶನ್‌ ಅವರ ಜಾಮೀನು ರದ್ದಾಗಿ ಮತ್ತೆ ಜೈಲು ಸೇರಿದ್ದರು. ಇದು ದರ್ಶನ್‌ ಅಭಿಮಾನಿಗಳಿಗೆ ಹಾಗೂ ಡೆವಿಲ್‌ ಚಿತ್ರತಂಡಕ್ಕೆ ಬಿಗ್‌ಶಾಕ್‌ ನೀಡಿತ್ತು.

Actor Darshan Devil Movie Release Date Changed Again December 11

ದರ್ಶನ್‌ ಅವರು ಜೈಲಿನಿಂದ ಯಾವಾಗ ಬರ್ತಾರೋ ಗೊತ್ತಿಲ್ಲ. ಇತ್ತ ಡೆವಿಲ್‌ ಸಿನಿಮಾ ಕೂಡ ಶೂಟಿಂಗ್‌ ಮುಗಿದು ರಿಲೀಸ್‌ಗೆ ರೆಡಿಯಾಗಿದ್ದರಿಂದ ಚಿತ್ರತಂಡವು ಡೇಟ್‌ ಅನೌನ್ಸ್‌ ಮಾಡಿತ್ತು. ಅದರಂತೆ ಡಿಸೆಂಬರ್‌ 12ರಂದು ಡೆವಿಲ್‌ ಸಿನಿಮಾ ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ಘೋಷಿಸಿತ್ತು. ಇದೀಗ ಮತ್ತೆ ಡೆವಿಲ್‌ ಟೀಂ ಸಿನಿಮಾ ಬಿಡುಗಡೆ ದಿನಾಂಕವನ್ನು ಬದಲಾಯಿಸಿದೆ.

ಸಿನಿಮಾ ರಿಲೀಸ್‌ ಯಾವಾಗ?

ಪ್ರತಿ ಬಾರಿ ಡೆವಿಲ್‌ ಸಿನಿಮಾ ರಿಲೀಸ್‌ ದಿನಾಂಕ ಮುಂದೂಡಲಾಗುತ್ತಿತ್ತು. ಆದರೆ ಈ ಬಾರಿ ಅಚ್ಚರಿ ಎನ್ನುವಂತೆ ಘೋಷಿಸಿದ ದಿನಾಂಕಕ್ಕೂ ಮೊದಲೇ ಡೆವಿಲ್‌ ಸಿನಿಮಾ ತೆರೆಕಾಣಲಿದೆ. ಅಂದರೆ ಡಿಸೆಂಬರ್‌ 11ರಂದೇ ಒಂದು ದಿನ ಮುನ್ನವೇ ಸಿನಿಮಾ ರಿಲೀಸ್‌ ಮಾಡುವುದಾಗಿ ಶ್ರೀಜೈಮಾತಾ ಕಂಬೈನ್ಸ್‌ ಅಧಿಕೃತವಾಗಿ ಘೋಷಣೆ ಮಾಡಿದೆ. ಅದರಂತೆ ಡಿಸೆಂಬರ್‌ 12ರ ಬದಲಿಗೆ ಡಿಸೆಂಬರ್‌ 11ರಂದೇ ಡೆವಿಲ್‌ ಸಿನಿಮಾ ವೀಕ್ಷಿಸಬಹುದು ಎಂದು ಫ್ಯಾನ್ಸ್‌ಗೆ ಗುಡ್‌ನ್ಯೂಸ್‌ ನೀಡಿದೆ.

ಪ್ರೀತಿಯ ಜನರಿಗೆ, ಸೆಲೆಬ್ರಿಟಿಗಳು ಮತ್ತು ಕನ್ನಡ ಪ್ರಿಯ ಜನರ ನಿರಂತರ ವಿನಂತಿಗಳಿಂದಾಗಿ. ನಿಮ್ಮ "ದಿ ಡೆವಿಲ್" ಚಿತ್ರವು ನಿಗದಿತ ದಿನಾಂಕಕ್ಕಿಂತ ಒಂದು ದಿನ ಮುಂಚಿತವಾಗಿ ಬೆಳ್ಳಿ ಪರದೆಯ ಮೇಲೆ ಬಿಡುಗಡೆಯಾಗಲಿದೆ. ನಿಮ್ಮ ಪ್ರೀತಿ ಮತ್ತು ಅಭಿಮಾನವೇ ನಮ್ಮ ಶ್ರೀರಕ್ಷೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ತಿಳಿಸಿದೆ.

ದರ್ಶನ್‌ ಅವರ ಅನುಪಸ್ಥಿತಿಯಲ್ಲೇ ಡೆವಿಲ್‌ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಿಂದಾಗಿ ಡೆವಿಲ್‌ ಸಿನಿಮಾ ವಿಳಂಬವಾಗಿತ್ತು. ಚಿತ್ರತಂಡ ಭಾರೀ ಬಂಡವಾಳ ಹಾಕಿರುವುದರಿಂದ ದರ್ಶನ್‌ ಅವರು ಬೇಗನೆ ಶೂಟಿಂಗ್‌ ಮುಗಿಸಿಕೊಟ್ಟಿದ್ದರು. ಈಗ ಅವರು ಜೈಲಿನಲ್ಲಿದ್ದರೂ ಸಿನಿಮಾ ರಿಲೀಸ್‌ ಆಗಲು ಸಜ್ಜಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+