ತಪ್ಪು ಮಾಡಿದವರಿಗೆ ಚಾಮುಂಡೇಶ್ವರಿ ತಕ್ಕ ಶಿಕ್ಷೆ ಕೊಡುತ್ತಾಳೆ: ನಟ ದರ್ಶನ್‌ಗೆ ಟಾಂಗ್‌ ಕೊಟ್ರಾ ಉಮಾಪತಿ ಶ್ರೀನಿವಾಸ್ ಗೌಡ?

Darshan Thoogudeepa: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ & ಗ್ಯಾಗ್‌ ಜೈಲು ಸೇರಿದ್ದು, ಈಗಾಗಲೇ ಪೊಲೀಸರು ಕೋರ್ಟ್‌ಗೆ ಚಾರ್ಜ್‌ ಶೀಟ್‌ ಕೂಡ ಸಲ್ಲಿಸಿದ್ದಾರೆ. ಮತ್ತೊಂದೆಡೆ ದರ್ಶನ್‌ ಪರ ವಿರೋಧ ಚರ್ಚೆಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿವೆ. ಇನ್ನು ಇದೀಗ ಉಮಾಪತಿ ಶ್ರೀನಿವಾಸ ಗೌಡ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಪ್ಪು ಮಾಡಿದವರಿಗೆ ಚಾಮುಂಡೇಶ್ವರಿ ಶಿಕ್ಷೆ ನೀಡಲಿ. ತಪ್ಪು ಮಾಡಿಲ್ಲ ಅಂದ್ರೆ ಪ್ರಕರಣದಿಂದ ಮುಕ್ತರಾಗಲಿ ಎಂದು ಹೇಳಿದರು.

Actor Darshan Chamundeshwari Will Give Appropriate Punishment to sinners Umapathy Srinivasa Gowda

ಮಾನವೀಯತೆ ದೃಷ್ಟಿಯಿಂದ ನೋಡುವುದಾದರೆ, ಇದು 100% ತಪ್ಪು. ಈಗಾಗಲೇ ಈ ಪ್ರಕರಣದ ಬಗ್ಗೆ ಪೊಲೀಸರು ಚಾರ್ಜ್‌ಶೀಟ್ ಅನ್ನು ಕೋರ್ಟ್‌ಗೆ ಸಲ್ಲಿಸಿದ್ದು, ಸತ್ಯಾಸತ್ಯತೆ ಹೊರಗಡೆ ಬರಬೇಕಿದೆ ಅಷ್ಟೇ. ಇನ್ನೂ ನಾನು ಏನೇ ಇದ್ದರೂ ನೇರಾವಾಗಿ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

ರೇಣುಕಾಸ್ವಾಮಿ ತಂದೆ ಹೇಳಿದ್ದೇನು?: ರೇಣುಕಾಸ್ವಾಮಿ ಕೈಮುಗಿದು ಎಷ್ಟೇ ಅಂಗಲಾಚಿದರೂ ಕೂಡ ಡಿ & ಗ್ಯಾಂಗ್‌ ಆತನ ಮೇಲೆ ಕ್ರೌರ್ಯ ಮೆರೆದಿದ್ದಾರೆ ಈ ಪೋಟೋಗಳು ಇದೀಗ ವೈರಲ್‌ ಆಗುತ್ತಿದ್ದು, ಇದನ್ನು ಕಂಡ ರೇಣುಕಾಸ್ವಾಮಿ ತಂದೆ ಕಾಶೀನಾಥಯ್ಯ ಪ್ರತಿಕ್ರಿಯಿಸಿ, "ನನ್ನ ಮಗನಿಗೆ ಈ ಪರಿಸ್ಥಿತಿ ಬರಬಾರದಾಗಿತ್ತು. ಇನ್ನು ನನ್ನ ಮಗನನನ್ನು ಈ ಸ್ಥಿತಿಗೆ ತಂದವರಿಗೂ ಇದೇ ರೀತಿ ಆಗಬೇಕು," ಎಂದು ಹೇಳಿದರು.

"ಕೈಮುಗಿದು ಅಂಗಲಾಚಿ, ಬೇಡಿಕೊಳ್ಳುತ್ತಿರುವ ಫೋಟೋದ ಬಗ್ಗೆ ಪ್ರತಿಕ್ರಿಯಿಸಿರುವ ಕರುಣೆ ತೋರಿಸಿ ಬಿಟ್ಟು ಕಳುಹಿಸಬಹುದಿತ್ತು. ನಾವು ಅವನ್ನು ಯಾವ ರೀತಿ ನೋಡ್ಕೋಬೇಕು ಹಾಗೆ ನೋಡ್ತಿದ್ವಿ, ಆದರೆ ಬೇಡಿಕೊಂಡರೂ ಬೀಡದೇ ಹೊಡೆದು ಸಾಯಿಸಿದ್ದಾರೆ," ಎಂದು ಹೇಳುತ್ತಾ ಕಣ್ಣೀರಿಟ್ಟಿದ್ದಾರೆ.

"ಆ ಕ್ಷಣದಲ್ಲಿ ನಟ ದರ್ಶನ್ ಮತ್ತು ಗ್ಯಾಂಗ್ ನವರು ಯೋಚನೆ ಮಾಡಬೇಕಾಗಿತ್ತು. ಒಂದು ವೇಳೆ ಏನಾದರೂ ಅನಾಹುತ ಆದರೆ ನಾಳೆ ನನ್ನ ಪರಿಸ್ಥಿತಿ ಏನಾಗುತ್ತದೆ ಅಂತ ಯೋಚನೆ ಮಾಡಬೇಕಾಗಿತ್ತು. ಕೇಳಿಕೊಂಡಾಗ ಬಿಟ್ಟು ಕಳುಹಿಸಬಹುದಿತ್ತು. ಇಲ್ಲ ಅಂದ್ರೆ ಒಂದೆರಡು ಏಟು ಹೊಡೆದು ಕಳಿಸಿಬಹುದಿತ್ತು." ಎಂದು ಹೇಳುತ್ತಾ ಕಣ್ಣೀರಿಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+