Actor Darshan: ಕೊನೆಗೂ ನಟ ದರ್ಶನ್ ಅಭಿನಯದ ಡೆವಿಲ್ ಸಿನಿಮಾ ಶೂಟಿಂಗ್ ಆರಂಭದ ಬಗ್ಗೆ ಹೊರಬಿತ್ತು ಬಿಗ್ ಅಪ್ಡೇಟ್
Actor Darshan: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ ಹಿನ್ನೆಲೆ ಡೆವಿಲ್ ಚಿತ್ರಿಕರಣಕ್ಕೆ ಬ್ರೇಕ್ ಬಿದ್ದಿತ್ತು. ಇದೀಗ ಜಾಮೀನಿನ ಮೇಲೆ ಹೊರಗಿರುವ ದರ್ಶನ್ ಅವರು ಮತ್ತೆ ಯಾವಾಗ ಈ ಚಿತ್ರದ ಚಿತ್ರಿಕರಣ ಆರಂಭಿಸಲಿದ್ದಾರೆ ಎನ್ನುವ ಬಿಗ್ ಅಪ್ಡೇಟ್‌ವೊಂದು ಇದೀಗ ರಿವೀಲ್ ಆಗಿದೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ ಬಳಿಕ ಬಹುನಿರೀಕ್ಷಿತ ಡೆವಿಲ್ ಸಿನಿಮಾದ ಚಿತ್ರಿಕರಣ ನಿಂತುಹೋಗಿತ್ತು. ಇನ್ನು ಇದೀಗ ಜಾಮೀನಿನ ಮೇಲೆ ದರ್ಶನ್ ಹೊರಗಡೆ ಇದ್ದು, ಅಭಿಮಾನಿಗಳು ಯಾವಾಗ ಈ ಚಿತ್ರಿಕರಣ ಆರಂಭವಾಗಲಿದೆ ಎಂದು ಕಾತರದಿಂದ ಕಾಯುತ್ತಿದ್ದರು. ಈ ಸಮಯದಲ್ಲೇ ನಿರ್ಮಾಪಕರು ಗುಡ್ ನ್ಯೂಸ್‌ವೊಂದನ್ನು ನೀಡಿದ್ದು, ಚಿತ್ರಿಕರಣ ಆರಂಭದ ಬಗ್ಗೆ ಮಾಹಿತಿ ನೀಡಿದ್ದಾರೆ.

ದರ್ಶನ್ ಅಭಿನಯದ ಡೆವಿಲ್ ಚಿತ್ರ ನಿಂತು ಹೋಗಿದ್ದು, ಈ ಸಿನಿಮಾ ಬಿಡುಗಡೆಯಾಗುವುದು ಡೌಟ್ ಎಂದು ನಟ ದರ್ಶನ್ ಜೈಲಿಗೆ ಹೋದಾಗ ತುಂಬಾ ಜನ ಇದನ್ನೇ ಹೇಳಿದರು. ಆದರೆ, ದರ್ಶನ್ ರೆಗ್ಯುಲರ್ ಬೇಲ್ ಮೇಲೆ ಈ ಆಲೋಚನೆಗಳೇ ಬದಲಾಗಿಬಿಟ್ಟಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಸಿನಿಮಾ ಚಿತ್ರಿಕರಣ ಯಾವಾಗ ಆರಂಭವಾಗಲಿದೆಯೋ ಎಂದು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ.
ನಟ ದರ್ಶನ್ ಹುಟ್ಟುಹಬ್ಬದ ಎರಡನೇ ಟೀಸರ್ ಹೊರ ಬಂದಮೇಲೆ ಅಭಿಮಾನಿಗಳ ಮುಖದಲ್ಲಂತೂ ಸಂತಸ ಮನೆ ಮಾಡಿದೆ. ಮಾಹಿತಿಯ ಪ್ರಕಾರ, ಡೆವಿಲ್ ಚಿತ್ರದ ಶೂಟಿಂಗ್ ಇದೇ ಮಾರ್ಚ್ ತಿಂಗಳಿಂದಲೇ ಆರಂಭವಾಗುತ್ತಿದೆ. ಅಲ್ಲದೆ, ಎಲ್ಲಾ ಒಳ್ಳೆಯದಾಗಲಿದೆ ಎಂದು ಕನ್ನಡದ ಹಿರಿಯ ನಿರ್ಮಾಪಕ ಚಿನ್ನೇಗೌಡರು ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಹಿರಿಯ ನಿರ್ಮಾಪಕ ಚಿನ್ನೇಗೌಡ ಅವರು ಮಾಧ್ಯಮವೊಂದರ ಬಳಿ ತಮ್ಮ ಈ ಅಭಿಪ್ರಾಯವನ್ನು ಹೇಳಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಚಿನ್ನೇಗೌಡರಿಗೂ ಡೆವಿಲ್ ಚಿತ್ರಕ್ಕೂ ಏನ್ ಸಂಬಂಧ ಎನ್ನುವ ಪ್ರಶ್ನೆ ಎದ್ದಿದೆ. ಇನ್ನು ಡೆವಿಲ್ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕ ಮಿಲನ ಪ್ರಕಾಶ್ ಶ್ರೀಮುರಳಿಯವರ ತಂದೆ ಚಿನ್ನೇಗೌಡರ ಸಹೋದರಿಯ ಮಗ. ಅದ್ದರಿಂದ ಡೆವಿಲ್ ಚಿತ್ರದ ಬಗ್ಗೆ ಚಿನ್ನೇಗೌಡರಿಗೆ ಹಲವು ವಿಚಾರಗಳು ಗೊತ್ತಿದೆ ಎನ್ನಲಾಗುತ್ತಿದೆ.
ಇದಕ್ಕೂ ಮುಂಚೆ ವಿಜಯಲಕ್ಷ್ಮಿ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್‌ನನ್ನು ಹೊರತರಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ರಾಜ್ಯದ ಪ್ರಮುಖ ದೇವಾಲಯಗಳಿಗೆ ಹೋಗಿ ವಿಶೇಷ ಪೂಜೆ, ವ್ರತಗಳನ್ನು ಮಾಡಿಸಿದ್ದರು. ಮತ್ತೊಂದೆಡೆ ಅಭಿಮಾನಿಗಳು ಕೂಡ ವಿಶೇಷ ಪೂಜೆಗಳನ್ನು ಸಹ ಮಾಡಿಸಿದ್ದರು. ಇದಕ್ಕೆ ಪ್ರತಿಫಲವೆಂಬಂತೆ ಕೊನೆಗೂ ನಟ ದರ್ಶನ್‌ಗೆ ಜಾಮೀನು ದೊರೆಯಿತು.
ಪತಿ ದರ್ಶನ್ ಬಿಡುಗಡೆಯಾದಾಗಿನಿಂದಲೂ ವಿಜಯಲಕ್ಷ್ಮಿ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಅಲ್ಲದೆ, ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೊಸ ಹೊಸ ಪೋಸ್ಟರ್‌ಗಳನ್ನು ಹಂಚಿಕೊಳ್ಳುತ್ತಲೇ ಇದ್ದಾರೆ. ಇವುಗಳು ಭಾರೀ ವೈರಲ್ ಕೂಡ ಆಗುತ್ತಿವೆ. ಹಾಗೆಯೇ ಇತ್ತೀಚೆಗಷ್ಟೇ ಅವರು ಅಸ್ಸಾಂನ ಗುವಾಹಟಿಯ ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ದೇವಸ್ಥಾನದಲ್ಲಿರುವ ಫೋಟೋವನ್ನು ತಮ್ಮ ಇನ್ಸ್ಟಾ ಕಾತೆಯಲ್ಲಿ ಹಂಚಿಕೊಂಡಿದ್ದಾರೆ.
ವಿಜಯಲಕ್ಷ್ಮಿ ಅವರು ದೇವಿಯ ಆರಾಧಕಿಯಾಗಿದ್ದಾರೆ. ಆಗಾಗ ಶಕ್ತಿ ದೇವತೆಯ ಮೊರೆ ಹೋಗುತ್ತಲೇ ಇರುತ್ತಾರೆ. ಹಾಗೆಯೇ ಅಸ್ಸಾಂನ ಗುವಾಹಟಿಯ ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಗಮನ ಸೆಳೆದಿದ್ದಾರೆ. ಈ ಹಿಂದೆಯೂ ಪತಿ ದರ್ಶನ್ ಅವರು ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ಸೇರಿದ ಸಮಯದಲ್ಲೂ ಅವರ ಬಿಡುಗಡೆಗಾಗಿ ದೇವರ ಮೊರೆ ಹೋಗುತ್ತಿದ್ದರು. ಇದೇ ವೇಳೆ ಆಗಲೂ ಒಮ್ಮೆ ಕಾಮಾಕ್ಯ ದೇವಾಲಯಕ್ಕೆ ಭೇಟಿ ನೀಡಿದ್ದರು.












Click it and Unblock the Notifications