ದರ್ಶನ್ ಬಂಧನ: ಮರ್ಮಾಂಗಕ್ಕೆ ಒದ್ದು, ಸಲಾಕೆಯಲ್ಲಿ ಸುಟ್ಟು ಸಾಯಿಸಿದ್ದಾರಾ? ಥೂ ಇವರೆಂತಹ ವಿಕೃತರು?

ದರ್ಶನ್ ವಿರುದ್ಧ ಕೇಳಿಬಂದಿರುವ ಕೊಲೆ ಆರೋಪ ಕೇಸ್ ಪ್ರತಿ ಕ್ಷಣಕ್ಕೂ ಒಂದು ತಿರುವು ಪಡೆಯುತ್ತಿದೆ. ಅದರಲ್ಲೂ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಅವರ ಸಾವಿನಲ್ಲಿ, ಈ ನಟ ದರ್ಶನ್ ಅವರ ಕೈವಾಡ ಕೂಡ ಇದೆ ಅನ್ನೋ ಮಾತು ಇದೀಗ ಕಿಚ್ಚು ಹೊತ್ತಿಸಿದ್ದು. ಇದೇ ಸಮಯದಲ್ಲಿ ರೇಣುಕಾಸ್ವಾಮಿ ಹತ್ಯೆ ಮಾಡುವಾಗ ಕಿರಾತಕರು ಏನೆಲ್ಲಾ ಹಿಂಸೆಯನ್ನ ಕೊಟ್ಟಿದ್ದಾರೆ ಗೊತ್ತೆ? ಬನ್ನಿ ತಿಳಿಯೋಣ.

ಅಂದಹಾಗೆ ಈ ಹಿಂದೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್ & ಪವಿತ್ರ ಗೌಡ ಜಗಳ ದೊಡ್ಡ ಕಂಟಕ ತಂದಿತ್ತು. ದರ್ಶನ್ ಮತ್ತು ಪವಿತ್ರಾ ಗೌಡ ನಡುವೆ ಆತ್ಮೀಯತೆ ಇದ್ದ ಕಾರಣ ಈ ರೀತಿ ಜಗಳ ಆಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಹೀಗೆ ಜಗಳ ಶುರುವಾದಾಗ ಈಗ ಕೊಲೆ ಆಗಿರುವ ರೇಣುಕಾಸ್ವಾಮಿ, ಪವಿತ್ರ ಗೌಡ ಅವರ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿ ಪೋಸ್ಟ್ ಮಾಡಿದ್ದರು ಎಂಬ ಆರೋಪ ಕೇಳಿಬಂದಿದೆ. ಈಗ ಅದೇ ರೇಣುಕಾಸ್ವಾಮಿ ಕೊಲೆ ಆಗಿದೆ ಈ ವಿಚಾರದಲ್ಲಿ ದರ್ಶನ್ ಅವರ ವಿರುದ್ಧವೇ ಕೊಲೆ ಆರೋಪ ಕೇಳಿಬಂದಿದೆ. ಹೀಗೆ ರೇಣುಕಾಸ್ವಾಮಿ ಕೊಲೆ ಮಾಡುವಾಗ ಏನೆಲ್ಲಾ ಹಿಂಸೆ ಕೊಟ್ಟಿದ್ದಾರೆ ಗೊತ್ತಾ? ಮುಂದೆ ಓದಿ.

A Major Twist In Darshan Thoogudeepa Arrest Case

ಮರ್ಮಾಂಗಕ್ಕೆ ಒದ್ದು, ಸುಟ್ಟು ಕೊಲೆ?

ದರ್ಶನ್ ಅವರು ಈ ಕೊಲೆ ಪ್ರಕರಣದಲ್ಲಿ ಭಾಗಿ ಆಗಿದ್ದಾರೆ ಎನ್ನುವ ಗಂಭೀರ ಆರೋಪಗಳ ನಡುವೆ, ಇದೇ ಕಾರಣಕ್ಕೆ ದಿಢೀರ್ ದರ್ಶನ್ ಅವರನ್ನ ಇಂದು ಬೆಳಗ್ಗೆಯೇ ಅರೆಸ್ಟ್ ಮಾಡಿ ಮೈಸೂರಿನಿಂದ ಬೆಂಗಳೂರಿಗೆ ಕರೆದುಕೊಂಡು ಬರಲಾಗಿದೆ. ವಿಚಾರಣೆ ನಡೆಯುತ್ತಿರುವಾಗ ಆರೋಪಿಗಳಿಂದ ಪೊಲೀಸರು ಸತ್ಯ ಕಕ್ಕಿಸುತ್ತಿದ್ದಾರೆ.

ಈ ವೇಳೆ ಕೆಲವು ಆರೋಪಿಗಳು ಈ ಕೊಲೆಯನ್ನ ಹೇಗೆ ಮಾಡಿದ್ದು? ಎಂಬುದನ್ನ ವಿವರಿಸಿದ್ದಾರೆ ಅದರಲ್ಲೂ ರೇಣುಕಾಸ್ವಾಮಿ ಅವರ ಮರ್ಮಾಂಗಕ್ಕೆ ಒದ್ದು, ಸಲಾಕೆಯಿಂದ ಸುಟ್ಟು ಹಲ್ಲೆ ಮಾಡಿ ವಿಕೃತವಾಗಿ ಕೊಲೆ ಮಾಡಿರುವುದು ಬಯಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಶವ ಪರೀಕ್ಷೆಯ ನಂತರ ಸಂಪೂರ್ಣ ಮಾಹಿತಿ ಸಿಗಲಿದೆ.

ಸಾಲು ಸಾಲು ವಿವಾದಗಳು

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ವಿವಾದ ಎರಡೂ ಒಟ್ಟೊಟ್ಟಿಗೆ ಹುಟ್ಟಿವೆ ಅಂತಾನೇ ಕಾಣಿಸುತ್ತದೆ. ಯಾಕಂದ್ರೆ ನಟ ದರ್ಶನ್ ಮಾಡಿಕೊಳ್ಳುತ್ತಿರುವ ಕಿರಿಕ್ ಒಂದಲ್ಲ, ಎರಡಲ್ಲ. ಈ ನಟ ದರ್ಶನ್ ತನ್ನ ವೈವಾಹಿಕ ಜೀವನದಿಂದ ಹಿಡಿದು, ಹೊರಗಡೆ ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡುವ ತನಕ ಹಲವು ಆರೋಪ ಎದುರಿಸಿದ್ದ. ಈಗ ನೋಡಿದರೆ ನೇರವಾಗಿ ಕೊಲೆ ಮಾಡಿಸುವ ಹಂತಕ್ಕೆ ಬಂದಿದ್ದಾರೆ ಎಂಬ ಆರೋಪ ಕನ್ನಡ ನಾಡಿನಲ್ಲಿ ಸಂಚಲನ ಸೃಷ್ಟಿಸಿ ರೊಚ್ಚಿಗೆಬ್ಬಿಸಿದೆ.

ಅಭಿಮಾನಿಗಳ ಉಗ್ರ ಹೋರಾಟ ಶುರು!

ದರ್ಶನ್ ಅಭಿಮಾನಿಗಳು ಉಗ್ರ ಹೋರಾಟಕ್ಕೆ ಸಜ್ಜಾಗಿದ್ದಾರೆ, ಹೀಗಾಗಿ ಪೊಲೀಸರು ಕೂಡ ಪರಿಸ್ಥಿತಿ ನಿಭಾಸಲು ಸಜ್ಜಾಗಿದ್ದಾರೆ. ಅದರಲ್ಲೂ ದರ್ಶನ್‌ರ ಮನೆ ಇರುವ ರಾಜರಾಜೇಶ್ವರಿ ನಗರದಲ್ಲಿ ಪರಿಸ್ಥಿತಿಯು ಕೈಮೀರುತ್ತಿದೆ. ಆರ್‌ಆರ್ ನಗರದಲ್ಲಿ ದರ್ಶನ್ ಅವರ ಫೋಟೋ ಇರುವ ಬಾವುಟ ಹಿಡಿದು ದರ್ಶನ್ ಅವರ ಅಭಿಮಾನಿಗಳು ಜಮಾಯಿಸುತ್ತಿದ್ದಾರೆ. ಈಗಾಗಲೇ ಸಾವಿರಾರು ಅಭಿಮಾನಿಗಳು ರಾಜರಾಜೇಶ್ವರಿ ನಗರದಲ್ಲಿ ಒಂದೇ ಕಡೆ ಸೇರಿದ್ದು, ಹೋರಾಟ ನಡೆಸಲು ಮುಂದಾಗಿದ್ದಾರೆ. ಹೀಗಾಗಿ ಪೊಲೀಸರು ಕೂಡ ಈ ಕುರಿತು ಕಟ್ಟೆಚ್ಚರ ವಹಿಸಿ, ಪರಿಸ್ಥಿತಿ ಹಿಡಿತಕ್ಕೆ ತರಲು ಯತ್ನಿಸುತ್ತಿದ್ದಾರೆ.

'ದರ್ಶನ್‌ಗೆ ಸಾವಿನ ಶಿಕ್ಷೆ ಕೊಡಿ'

ದರ್ಶನ್ & ಪವಿತ್ರ ಗೌಡ ಅವರಿಂದಲೇ ನನ್ನ ಮಗನ ಸಾವು ಆಗಿದೆ, ಹೀಗಾಗಿ ನನ್ನ ಮಗನಂತೆ ದರ್ಶನ್ & ಪವಿತ್ರ ಗೌಡ ಕೂಡ ಸಾಯಬೇಕು ಎಂದಿದ್ದಾರೆ ಮೃತ ರೇಣುಕಾಸ್ವಾಮಿ ಪೋಷಕರು. ನಿನ್ನೆ ಪೂರ್ತಿ ಬಿಕ್ಕಿ, ಬಿಕ್ಕಿ ಅತ್ತಿರುವ ರೇಣುಕಾಸ್ವಾಮಿ ಅವರ ಪೋಷಕರು & ಪತ್ನಿ, ದರ್ಶನ್‌ನ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕುತ್ತಿದ್ದು. ಅದ್ರಲ್ಲೂ ಯಾವ ರೀತಿ ನನ್ನ ಮಗ ರೇಣುಕಾಸ್ವಾಮಿ ಹತ್ಯೆ ಮಾಡಲಾಗಿದೆಯೋ, ಅದೇ ರೀತಿ ದರ್ಶನ್‌ಗೆ ಕೂಡ ಶಿಕ್ಷೆ ಕೊಡಿ. ಹಾಗೇ ಪವಿತ್ರಾ ಗೌಡಗೆ ಕೂಡ ಇದೇ ರೀತಿ ಕಠಿಣ ಶಿಕ್ಷೆ ನೀಡಬೇಕು ಅಂತಿದ್ದಾರೆ ರೇಣುಕಾಸ್ವಾಮಿ ಅವರ ಅಪ್ಪ & ಅಮ್ಮ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+