ಈ ಒಂದು ಕಾರಣಕ್ಕೆ ಶುರುವಾಯ್ತು ನಟ ದರ್ಶನ್-ದುನಿಯಾ ವಿಜಯ್ ಫ್ಯಾನ್ಸ್ ನಡುವೆ ವಾರ್!
ಒಂದೆಡೆ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದಾರೆ. ಇತ್ತ ಸದ್ದಿಲ್ಲದೆ ದರ್ಶನ್ ಅಭಿಮಾನಿಗಳು ಫ್ಯಾನ್ ವಾರ್ ಶುರು ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ನಿನ್ನೆ ರೀರಿಲೀಸ್ ಆದ ಕರಿಯಾ ಸಿನಿಮಾ ಸಾಕ್ಷಿಯಾಗಿದೆ. ಹೌದು ಅದೊಂದು ಕಾರಣಕ್ಕೆ ನಟ ದರ್ಶನ್ ಹಾಗೂ ದುನಿಯಾ ವಿಜಯ್ ಅಭಿಮಾನಿಗಳ ನಡುವೆ ಕಿಚ್ಚು ಹೊತ್ತಿಕೊಂಡಿದೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲೂ ಕೆಲ ವಿಡಿಯೋಗಳು ಪೋಸ್ಟ್ ಆಗಿದ್ದು, ಇಬ್ಬರೂ ಅಭಿಮಾನಿಗಳ ಕೆಸರೆರಚಾಟಕ್ಕೆ ಸಾಕ್ಷಿಯಾಗಿದೆ. ನಿನ್ನೆ ರಾಜ್ಯಾದ್ಯಂತ ನಟ ದರ್ಶನ್ ಅಭಿನಯದ ಕರಿಯಾ ಸಿನಿಮಾ ರೀರಿಲೀಸ್ ಆಗಿದೆ. ಅಭಿಮಾನಿಗಳು ಈ ಸಿನಿಮಾವನ್ನು ಹಬ್ಬದಂತೆ ಆಚರಿಸಿದ್ದಾರೆ.

ಆದರೆ, ಥೀಯೇಟರ್‌ಗಳ ಬಳಿ ಕಟೌಟ್ ಹಾಕುವ ವಿಚಾರವಾಗಿ ದರ್ಶನ್ ಅಭಿಮಾನಿಗಳು ಬೇರೆ ನಾಯಕರ ಕಟೌಟ್‌ಗಳ ಮೇಲೆ ಎರಗಿದ್ದಾರೆ. ಅದರಲ್ಲೂ ದುನಿಯಾ ವಿಜಯ್ ನಟನೆಯ ʼಭೀಮʼ ಸಿನಿಮಾದ ಕಟೌಟ್ ವಿಚಾರವನ್ನು ವೈಯಕ್ತಿಕವಾಗಿ ತೆಗೆದುಕೊಂಡಿರುವ ಕೆಲ ಪುಂಡ ಅಭಿಮಾನಿಗಳು ದರ್ಶನ್ ಅವರ ಕರಿಯಾ ಸಿನಿಮಾದ ಕಟೌಟ್ ಅನ್ನು ಭೀಮನ ಕಟೌಟ್ ಮುಂದೆ ನಿಲ್ಲಿಸಿ ಸವಾಲೊಡ್ಡಿದ್ದಾರೆ
ಇದು ಇಷ್ಟಕ್ಕೇ ನಿಂತಿಲ್ಲ. ಇದನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿದ್ದಲ್ಲದೆ ದುನಿಯಾ ವಿಜಯ್ ಅವರ ವಿರುದ್ಧ ಅವಹೇಳನಕಾರಿಯಾಗಿಯೂ ಸಾಲುಗಳನ್ನು ಬರೆದುಕೊಂಡಿದ್ದಾರೆ. ಯಾರೋ ಕೆಲವರು ಮಾಡಿರುವ ಕೃತ್ಯ ಇದೀಗ ಇಬ್ಬರ ಅಭಿಮಾನಿಗಳ ನಡುವೆ ಕಿಚ್ಚು ಹೊತ್ತಿಸಿದೆ. ದರ್ಶನ್ ಅಭಿಮಾನಿಗಳ ಸಾಲುಗಳು ದುನಿಯಾ ವಿಜಯ್ ಅಭಿಮಾನಿಗಳನ್ನು ಕೆರಳಿಸುವಂತಿದ್ದು, ಈ ಬಗ್ಗೆ ಕಾಮೆಂಟ್‌ಗಳಲ್ಲಿ ಗಲಾಟೆ ಶುರುವಾಗಿದೆ.
ಮಚ್ಚು ತಟ್ಟವ್ನ ಮುಂದೆ ಈ ಜುಟ್ಟು ಗಳೆಲ್ಲ ಕಳ್ದೋಗ್ತ ಇರ್ತಾರೆ 🥱
— 😎ದಾಸ😎 (@harish213298505) August 29, 2024
ಮಚ್ಚು ಹಿಡಿ ನ ಮಾಡೋನ ಮುಂದೆ , ಮಚ್ಚು ಹಿಡಿತೀನಿ ಅಂಥ ಬಂದ್ರೆ, ಹಿಡ - ಬುಡ ಎರಡು ಹೊಡೀತೀವಿ 🤫👊#DBoss #DevilTheHero #BossOfSandalwood @dasadarshan ❤️ pic.twitter.com/vs8m8nNbBE
ದರ್ಶನ್ಅಭಿಮಾನಿಗಳು ಬರೆದಿರುವುದೇನು?: ʼಕರಿ ನಾಯಿ Cutout ಮುಚ್ಚಾಕಿದ ಕರಿಯ Bannerʼ ಎಂದು ದರ್ಶನ್ ಕಟೌಟ್ ನಿಲ್ಲಿಸುತ್ತಿರುವ ವಿಡಿಯೋಗಳನ್ನು ಪೋಸ್ಟ್ ಮಾಡಲಾಗಿದ್ದು, ಇದನ್ನು ಮತ್ತಷ್ಟು ಅಭಿಮಾನಿಗಳು ಶೇರ್ ಕೂಡ ಮಾಡಿದ್ದಾರೆ. ಇನ್ನು ʼಭೀಮʼ ಸಿನಿಮಾದಲ್ಲಿ ನಟ ದುನಿಯಾ ವಿಜಯ್ ಅವರು ʼಜುಟ್ಟುʼ ಎನ್ನುವ ಡೈಲಾಗ್ ಸಖತ್ ಫೇಮಸ್ ಆಗಿದ್ದು ಗೊತ್ತೇ ಇದೆ.

ಇದೇ ಪದವನ್ನು ದರ್ಶನ್ ಅಭಿಮಾನಿಗಳು ಕೂಡ ಬಳಸಿದ್ದು, ʼದರ್ಶನ್ ಮುಂದೆ ಜುಟ್ಟುಗಳೆಲ್ಲ ಸೈಲೆಂಟ್ʼ ಆಗಿರ್ಬೇಕು ಎಂದು ಕೌಂಟರ್ ಕೊಟ್ಟಿದ್ದಾರೆ. ಮಚ್ಚು ತಟ್ಟವ್ನ ಮುಂದೆ ಈ ಜುಟ್ಟುಗಳೆಲ್ಲ ಕಳ್ದೋಗ್ತ ಇರ್ತಾರೆ.. ಮಚ್ಚು ಹಿಡಿನ ಮಾಡ್ದೋನ ಮುಂದೆ, ಮಚ್ಚು ಹಿಡಿತೀನಿ ಅಂಥ ಬಂದ್ರೆ, ಹಿಡ-ಬುಡ ಎರಡು ಹೊಡೀತೀವಿʼ ಎಂದು ವಾರ್ನಿಂಗ್ ಕೂಡ ಕೊಟ್ಟಿದ್ದಾರೆ. ಒಟ್ಟಾರೆ ಒಂದು ಕಟೌಟ್ ವಿಚಾರವಾಗಂತೂ ಫ್ಯಾನ್ಸ್ ನಡುವೆ ವಾರ್ ಶುರುವಾಗಿದೆ. ಇದು ಮುಂದೆ ಯಾವ ಮಟ್ಟಕ್ಕೆ ತಲುಪುತ್ತದೆಯೋ ಗೊತ್ತಿಲ್ಲ.
ಇತ್ತೀಚೆಗೆ ದರ್ಶನ್ ಕೇಸ್ ವಿಚಾರವಾಗಿ ಮಾಧ್ಯಮದವರ ಪ್ರಶ್ನೆ ಪ್ರತಿಕ್ರಿಯಿಸಿದ್ದ ದುನಿಯಾ ವಿಜಯ್, ದರ್ಶನ್ ಹೆಸರು ಕೇಳುತ್ತಿದ್ದಂತೆ 'ಒಳ್ಳೆಯದಾಗಲಿ' ಎಂದಷ್ಟೇ ಹೇಳಿ ಸುಮ್ಮನಾಗಿದ್ದರು. ದುನಿಯಾ ವಿಜಯ್ ಹೀಗೆ ಒಂದೇ ಪದದಲ್ಲಿ 'ಒಳ್ಳೆಯದಾಗಲಿ' ಎಂದು ಹೇಳಿ ಸುಮ್ಮನಾಗಿದ್ದು ದರ್ಶನ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಕೂಡ ಮಾಡಿದ್ದರು. ಈ ವಿಚಾರವಾಗಿ ಅಭಿಮಾನಿಗಳ ನಡುವೆ ಪರಸ್ಪರ ಕೆಸರೆರಚಾಟ ಶುರುವಾಗಿತ್ತು.












Click it and Unblock the Notifications