ಬಾಹುಬಲಿ ಸಿನಿಮಾಗೆ 10 ವರ್ಷದ ಸಂಭ್ರಮ: ಪಾರ್ಟಿಯಿಂದ ಅನುಷ್ಕಾ ಶೆಟ್ಟಿ- ತಮನ್ನಾ ಔಟ್, ಕಾರಣವೇನು ?
ಭಾರತದ ಸಿನಿಮಾ ರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಸಿನಿಮಾಗಳಲ್ಲಿ ಬಾಹುಬಲಿ ಮುಂಚೂಣಿಯಲ್ಲಿದೆ. ಬಾಹುಬಲಿ ಸಿನಿಮಾ ಬಂದ ಮೇಲೆ ದಕ್ಷಿಣ ಭಾರತದ ಕಡೆ ಬಾಲಿವುಡ್ ಮಾತ್ರವಲ್ಲ ಇಡೀ ವಿಶ್ವದ ಸಿನಿಮಾ ರಂಗವೇ ತಿರುಗಿ ನೋಡಿತ್ತು. ಭಾರತದ ಎಲ್ಲಾ ಸಿನಿಮಾಗಳ ಬಾಕ್ಸ್ ಆಫೀಸ್ ಕಲೆಕ್ಷನ್ ಮೀರಿ ಬಾಹುಬಲಿ ದುಡ್ಡು ಮಾಡಿತ್ತು. ಬಾಹುಬಲಿಯ ನಂತರ ಆ ಸಿನಿಮಾದಲ್ಲಿ ನಟಿಸಿದ್ದ ನಟ - ನಟಿಯರ ಕೆರಿಯರ್ ಬದಲಾಗಿ ಹೋಗಿದೆ. ದಕ್ಷಿಣ ಭಾರತದ ಸಿನಿಮಾ ದಿಕ್ಕನ್ನೇ ಬದಲಿಸಿದ ಸಿನಿಮಾ ಎಂದರೆ ಬಾಹುಬಲಿ. ರಾಜಮೌಳಿ, ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ ಹಾಗೂ ತಮನ್ನಾ ಭಾಟಿಯಾ ಸೇರಿದಂತೆ ದಕ್ಷಿಣ ಭಾರತದ ಜನಪ್ರಿಯ ನಟ-ನಟಿಯರು ಈ ಸಿನಿಮಾದ ಭಾಗವಾಗಿದ್ದರು. ಅಲ್ಲದೇ ಪ್ಯಾನ್ ಇಂಡಿಯಾ ಸಿನಿಮಾ ಎಂಬ ಟ್ಯಾಗ್ ಲೈನ್ ಅಥವಾ ಪರ್ವ ಶುರುವಾಗಿದ್ದೇ ಇಲ್ಲಿಂದ ಅಂತ ಹೇಳಬಹುದು.
ಭಾರತದಲ್ಲಿ ಬಾಲಿವುಡ್ ಮಾತ್ರ ಪ್ಯಾನ್ ಇಂಡಿಯಾ ಮೂವಿಗಳನ್ನು ಮಾಡುತ್ತದೆ. ದೇಶದಲ್ಲಿ ಹಿಂದಿಯಲ್ಲಿ ಮಾತ್ರ ಹೈ ಬಜೆಟ್ ಹಾಗೂ ಹಲವು ನಟ - ನಟಿಯರನ್ನು ಒಳಗೊಂಡ ಮೂವಿ ಬರುತ್ತದೆ ಎನ್ನುವುದನ್ನು ಸುಳ್ಳಾಗಿಸಿದ್ದು ಇದೇ ಮೂವಿ. ಈ ಮೂವಿ ಬಂದ ಮೇಲೆ ದಕ್ಷಿಣ ಭಾರತದ ಸಿನಿಮಾಗಳನ್ನು ನೋಡುವ ದೃಷ್ಟಿ ಕೋನವೇ ಬದಲಾಗಿ ಹೋಯಿತು. ದಕ್ಷಿಣ ಭಾರತದ ಸಿನಿಮಾನಗಳ ಕಡೆ ಉತ್ತರ ಭಾರತೀಯರು ತಿರುಗಿ ನೋಡುವಂತೆ ಆಯಿತು.

ಇನ್ನು ಬಾಹುಬಲಿ ದಕ್ಷಿಣ ಭಾರತದಲ್ಲಿ ನಿರ್ಮಾಣವಾದ ದೊಡ್ಡ ಬಜೆಟ್ ಸಿನಿಮಾ. ಇಷ್ಟೊಂದು ದೊಡ್ಡ ಬಜೆಟ್ ಸಿನಿಮಾ ದಕ್ಷಿಣ ಭಾರತದಲ್ಲಿ ಇದಕ್ಕೂ ಮುಂಚೆ ಬಂದಿರಲಿಲ್ಲ. ಆದರೆ ಬಾಹುಬಲಿಯ ನಂತರ ನಿರ್ಮಾಪಕರಲ್ಲೂ ಧೈರ್ಯ ಬಂತು. ಹೆಚ್ಚು ಹೂಡಿಕೆ ಮಾಡಿ ಹೆಚ್ಚು ಗಳಿಸಬಹುದು ಎನ್ನುವ ಭರವಸೆ ಬಂತು. ಅದೇ ಕಾರಣಕ್ಕೆ ಈ ಮಾದರಿಯ ಪ್ರಯೋಗಗಳು ಕನ್ನಡ ಮತ್ತು ತಮಿಳಿನಲ್ಲೂ ನಡೆದವು. ಕನ್ನಡ ಸಿನಿಮಾಗಳು ಈ ಪ್ರಯೋಗದಲ್ಲಿ ಯಶಸ್ವಿಯಾದವು. ಅದಕ್ಕೆ ಕೆಜಿಎಫ್ ಉದಾಹರಣೆ. ಆದರೆ ತಮಿಳಿನಲ್ಲಿ ಈ ಪ್ರಯೋಗ ಮಕಾಡೆ ಮಲಗಿತ್ತು.
ಇಷ್ಟೆಲ್ಲ ವಿವರಣೆಗೆ ಕಾರಣವೇನೆಂದರೆ ಈ ಸಿನಿಮಾ ಬಿಡುಗಡೆಯಾಗಿ 10 ವರ್ಷಗಳಾಗಿದ್ದು. ಚಿತ್ರತಂಡವು ಒಂದೆಡೆ ಸೇರಿ ಈ ಸಂಭ್ರಮವನ್ನು ಆಚರಿಸಿದೆ. ಆದರೆ, ಈ ಸಂಭ್ರಮಾಚರಣೆಯಲ್ಲಿ ನಾಯಕಿಯರೇ ಕಾಣಿಸಿಕೊಳ್ಳದೆ ಇರುವುದು ಇದೀಗ ಚರ್ಚೆಗೆ ಕಾರಣವಾಗಿದೆ. ಈ ಸಿನಿಮಾ ಬಿಡುಗಡೆಯಾಗಿ 10 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಸಿನಿಮಾ ತಂಡವು ಒಂದೆಡೆ ಸೇರಿ ಸಂಭ್ರಮಾಚರಣೆ ನಡೆಸಿದೆ. ರಾಜಮೌಳಿ ಮತ್ತು ತಂಡ 10 ಸಂಭ್ರಮಾಚರಣೆಯನ್ನು ನಡೆಸಿದೆ. ಮತ್ತೆ ರಿಯೂನಿಯನ್ ಆಗಿದೆ. ಈ ಸಂಭ್ರಮಾಚರಣೆಯ ಪಾರ್ಟಿಯಲ್ಲಿ ಎಲ್ಲರೂ ಕಾಣಿಸಿಕೊಂಡಿದ್ದರು. ಆದರೆ, ಪ್ರಮುಖ ನಟಿಯರಾದ ಅನುಷ್ಕಾ ಶೆಟ್ಟಿ ಹಾಗೂ ತಮನ್ನಾ ಮಾತ್ರ ಹೊರಗುಳಿದಿದ್ದರು. ಪ್ರಭಾಸ್, ರಾಣಾರಿಂದ ಹಿಡಿದು ಎಲ್ಲರೂ ಇದ್ದ ಪಾರ್ಟಿಗೆ ಇವರಿಬ್ಬರು ಗೈರಾಗಿದ್ದು ಯಾಕೆ ಎನ್ನುವ ಚರ್ಚೆ ಶುರುವಾಗಿತ್ತು.
ಅನುಷ್ಕಾ ಶೆಟ್ಟಿ ಮತ್ತು ತಮನ್ನಾ ಭಾಟಿಯಾ ಅವರಿಗೂ ಬಾಹುಬಲಿ ರಿಯೂನಿಯನ್ ಪಾರ್ಟಿಗೆ ಆಹ್ವಾನಿಸಲಾಗಿತ್ತು. ಆದರೆ, ಇಬ್ಬರು ನಾಯಕಿ ನಟಿಯರು ಕೂಡ ಹಾಜರಾಗಿಲ್ಲ. ಅನುಷ್ಕಾ ಹಾಗೂ ತಮನ್ನಾ ಅವರು ಸಮಾರಂಭಕ್ಕೆ ಬರದೆ ಇರುವುದಕ್ಕೆ ಸಿಂಪಲ್ ಕಾರಣಗಳನ್ನು ಟಾಲಿವುಡ್ ಮಂದಿ ಕೊಡುತ್ತಿದ್ದಾರೆ. ಅನುಷ್ಕಾ ಶೆಟ್ಟಿ ಅವರು ಘಾಟಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಲುಕ್ ಅವರು ರಿವೀಲ್ ಮಾಡುವಂತಿಲ್ಲ. ಅಲ್ಲದೇ ಅನುಷ್ಕಾ ಶೆಟ್ಟಿ ಇತ್ತೀಚೆಗೆ ಯಾವುದೇ ಸಮಾರಂಭ, ಪಾರ್ಟಿಗೆ ಹೋಗುವುದನ್ನು ನಿಲ್ಲಿಸಿದ್ದಾರೆ. ಹೀಗಾಗಿ ಈ ಪಾರ್ಟಿಯಿಂದ ದೂರ ಉಳಿದಿದ್ದರು ಎಂದು ಹೇಳಲಾಗಿದೆ.












Click it and Unblock the Notifications