ರಾಹುಲ್ ಗಾಂಧಿ ಮಾರ್ಚ್ 20, 21 ಕರ್ನಾಟಕ ಪ್ರವಾಸ ವೇಳಾಪಟ್ಟಿ
ಬೆಂಗಳೂರು, ಮಾರ್ಚ್ 17 : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಾರ್ಚ್ 20, 21 ರಂದು ಕರ್ನಾಟಕದ ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಅದರ ವೇಳಾಪಟ್ಟಿ ಹೀಗಿದೆ.
ಮಾರ್ಚ್ 20, ಮಂಗಳವಾರ
ಮಂಗಳೂರಿನಿಂದ ವಿಮಾನದ ಮೂಲಕ ಉಡುಪಿಗೆ
ರಾಜೀವ್ ಗಾಂಧಿ ಪೊಲಿಟಕಲ್ ಇನ್ ಸ್ಟಿಟ್ಯೂಟ್ ಉದ್ಘಾಟನೆ (ಸೇವಾ ದಲ ತರಬೇತಿ ಇನ್ ಸ್ಟಿಟ್ಯೂಟ್)
ಸಭೆ ಪಡುಬಿದರೆ, ಉಡುಪಿ
ಸ್ವಾಗತ ಮೂಲ್ಕಿ, ದಕ್ಷಿಣ ಕನ್ನಡ
ಸ್ವಾಗತ ಜತೆಗೆ ಭಾಷಣ, ಸುರತ್ಕಲ್, ದಕ್ಷಿಣ ಕನ್ನಡ
ಮೆರವಣಿಗೆ ಜ್ಯೋತಿ ವೃತ್ತದಿಂದ ಸಿಗ್ನಲ್ ಪಾಯಿಂಟ್ ವೃತ್ತದವರೆಗೆ, ಮಂಗಳೂರು, ದಕ್ಷಿಣ ಕನ್ನಡ
ಸಾರ್ವಜನಿಕ ಸಭೆ, ನೆಹರೂ ಮೈದಾನ, ಮಂಗಳೂರು

ಗೋಕರ್ಣನಾಥ ದೇವಸ್ಥಾನ ಹಾಗೂ ರೋಜಾರಿಯೊ ಚರ್ಚ್, ಉಲ್ಲಾಳ ದರ್ಗಾ ಭೇಟಿ
ಮಂಗಳೂರು ಸರ್ಕ್ಯೂಟ್ ಹೌಸ್ ನಲ್ಲಿ ರಾತ್ರಿ ವಾಸ್ತವ್ಯ.
ಮಾರ್ಚ್ 21 ಬುಧವಾರದ ಕಾರ್ಯಕ್ರಮಗಳು
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಜತೆಗೆ ಸಭೆ
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಹಿರಿಯ ನಾಯಕರ ಜತೆ ಸಭೆ
ವಿಮಾನದ ಮೂಲಕ ಮಂಗಳೂರಿನಿಂದ ಶೃಂಗೇರಿ (ಚಿಕ್ಕಮಗಳೂರು) ಪ್ರಯಾಣ
ಶೃಂಗೇರಿ ಜಗದ್ಗುರು ಭಾರತೀ ತೀರ್ಥ ಸ್ವಾಮೀಜಿ ಭೇಟಿ
ಶೃಂಗೇರಿ ಮಠದ ರಾಜೀವ್ ಗಾಂಧಿ ಸಂಸ್ಕೃತ ವಿಶ್ವ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಜತೆ ಸಂವಾದ
ಹೊಸದಾಗಿ ನಿರ್ಮಿಸಿರುವ ಬ್ಲಾಕ್ ಕಾಂಗ್ರೆಸ್ ಕಟ್ಟಡ ಉದ್ಘಾಟನೆ
ವಿಮಾನದ ಮೂಲಕ ಶೃಂಗೇರಿಯಿಂದ ಚಿಕ್ಕಮಗಳೂರಿಗೆ
ಸಾರ್ವಜನಿಕ ಸಭೆ, ಚಿಕ್ಕಮಗಳೂರು
ಸ್ವಾಗತ, ಬೇಲೂರು, ಹಾಸನ
ಸಾರ್ವಜನಿಕ ಸಭೆ, ಹಾಸನ
ಮೈಸೂರು ವಿಮಾನ ನಿಲ್ದಾಣದಿಂದ ದೆಹಲಿಗೆ ವಾಪಸ್












Click it and Unblock the Notifications