ಸುಪ್ರೀಂ ಆದೇಶ : ಶನಿವಾರ ಬಹುಮತ ಸಾಬೀತು ಮಾಡಬೇಕು
ಬೆಂಗಳೂರು, ಮೇ 18 : ಬಿಜೆಪಿಗೆ ಸರ್ಕಾರ ರಚನೆ ಮಾಡಲು ಅವಕಾಶ ನೀಡಿರುವ ಕರ್ನಾಟಕದ ರಾಜ್ಯಪಾಲ ವಜುಭಾಯಿ ವಾಲಾ ಅವರ ಕ್ರಮ ಪ್ರಶ್ನಿಸಿ ಕಾಂಗ್ರೆಸ್-ಜೆಡಿಎಸ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಶನಿವಾರ ಸಂಜೆ 4 ಗಂಟೆಗೆ ಬಿಜೆಪಿ ಸರ್ಕಾರ ಬಹುಮತ ಸಾಬೀತು ಮಾಡಬೇಕು ಎಂದು ಆದೇಶ ನೀಡಿದೆ.
ಶುಕ್ರವಾರ ತ್ರಿಸದಸ್ಯ ಪೀಠದಲ್ಲಿ ಅರ್ಜಿಯ ವಿಚಾರಣೆ ನಡೆಯಿತು. ಬಿಜೆಪಿ ಮೇ 15, 16ರಂದು ರಾಜ್ಯಪಾಲರಿಗೆ ನೀಡಿದ್ದ ಪತ್ರದ ಪ್ರತಿಯನ್ನು ಕೋರ್ಟ್‌ಗೆ ನೀಡಲಾಯಿತು. 2018ರ ಕರ್ನಾಟಕ ವಿಧಾಸನಸಭೆ ಚುನಾವಣೆಯಲ್ಲಿ 104 ಸ್ಥಾನಗಳಿಸಿದ್ದ ಬಿಜೆಪಿ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಿದೆ.

ಕೋರ್ಟ್ ಕಲಾಪದಲ್ಲಿ ನಡೆದಿದ್ದೇನು?
ಸುಪ್ರೀಂಕೋರ್ಟ್ ಆದೇಶದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, 'ನ್ಯಾಯಾಲಯದ ಆದೇಶ ಪಾಲಿಸುತ್ತೇವೆ. ಶನಿವಾರ ವಿಧಾನಸಭೆ ಕಲಾಪ ನಡೆಸುತ್ತೇವೆ. ನಮಗೆ ಬಹುಮತ ದೊರೆಯುವ ವಿಶ್ವಾಸವಿದೆ' ಎಂದು ಹೇಳಿದರು.
ಬಿ.ಎಸ್.ಯಡಿಯೂರಪ್ಪ ಆಡಳಿತಾತ್ಮಕ ನಿರ್ಧಾರವನ್ನು ಕೈಗೊಳ್ಳಬಾರದು ಎಂದು ಕೋರ್ಟ್ ಆದೇಶದಲ್ಲಿ ತಿಳಿಸಿದೆ
ಎಲ್ಲಾ ಶಾಸಕರು ಕಡ್ಡಾಯವಾಗಿ ಪ್ರಮಾಣ ವಚನ ಸ್ವೀಕಾರ ಮಾಡಬೇಕು. ಸಿಸಿಟಿವಿ ಅಳವಡಿಸಿ ವಿಶ್ವಾಸ ಮತ ಯಾಚನೆಯನ್ನು ಮಾಡಬೇಕು ಎಂದು ಸುಪ್ರೀಂಕೋರ್ಟ್ ಸೂಚನೆ ನೀಡಿದೆ
ವಿಶ್ವಾಸ ಮತವನ್ನು ಹೇಗೆ ಯಾಚನೆ ಮಾಡಬೇಕು? ಎಂದು ಹಂಗಾಮಿ ಸ್ಪೀಕರ್ ನಿರ್ಧರಿಸಬೇಕು ಎಂದು ಕೋರ್ಟ್ ಹೇಳಿದೆ
ಶನಿವಾರ ಸಂಜೆ 4 ಗಂಟೆಗೆ ಬಹುಮತ ಸಾಬೀತು ಮಾಡಿ ಎಂದು ಸುಪ್ರೀಂಕೋರ್ಟ್ ತ್ರಿ ಸದಸ್ಯ ಪೀಠ ಆದೇಶ ನೀಡಿದೆ
ವಿಶ್ವಾಸ ಮತ ಯಾಚನೆಗೆ ಕಾಲಾವಕಾಶ ನೀಡುವಂತೆ ಬಿಜೆಪಿ ಮಾಡಿದ ಮನವಿ ತಿರಸ್ಕರಿಸಿದ ಸುಪ್ರೀಂಕೋರ್ಟ್
ವಿಶ್ವಾಸ ಮತ ಯಾಚನೆಗೆ ಹೆಚ್ಚಿನ ಕಾಲಾವಕಾಶ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಅರ್ಜಿದಾರರಿಗೆ ಸ್ಪಷ್ಟಪಡಿಸಿದೆ
ಶನಿವಾರವೇ ವಿಶ್ವಾಸ ಮತ ಯಾಚನೆಗೆ ಅವಕಾಶ ನೀಡಬಾರದು ಎಂದು ಬಿಜೆಪಿ ಪರ ವಕೀಲರು ವಾದ ಮಂಡನೆ ಮಾಡಿದರು
ಎಚ್.ಡಿ.ಕುಮಾರಸ್ವಾಮಿ ಅವರು ಸಲ್ಲಿಸಿರುವ ಅರ್ಜಿಯ ಪರವಾಗಿ ವಾದ ಮಂಡನೆ ಆರಂಭಿಸಿದ ಹಿರಿಯ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್
ಎಲ್ಲಾ ಶಾಸಕರು ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ ಹಾಜರಾಬೇಕು ಎಂದು ಡಿಜಿಪಿಗೆ ಆದೇಶ ನೀಡುತ್ತೇವೆ. ಶಾಸಕರಿಗೆ ರಕ್ಷಣೆ ನೀಡುವಂತೆ ಸೂಚಿಸುತ್ತೇವೆ ಎಂದು ಹೇಳಿದ ಕೋರ್ಟ್
ನೀಡಿರುವ ಪತ್ರದಲ್ಲಿ ಬಹುಮತ ಇಲ್ಲ. 15 ದಿನ ಅವಕಾಶ ಕೊಟ್ಟರೆ ಬಹುಮತವನ್ನು ಸೃಷ್ಟಿ ಮಾಡುತ್ತೀರಿ ಎಂದು ಹೇಳಿದ ಕೋರ್ಟ್
ಬಿಜೆಪಿ ಪತ್ರ ನೋಡಿದ ಕೋರ್ಟ್ ಬಿಜೆಪಿಗೆ ಶಾಸಕರ ಸಂಪೂರ್ಣ ಬಹುಮತವಿರುವ ಪತ್ರವನ್ನು ನೀಡುವಂತೆ ಕೇಳಿದೆ
ಮೊದಲು ಬಿಜೆಪಿ ಮೇ 15, 16ರಂದು ರಾಜ್ಯಪಾಲ ವಜುಬಾಯಿ ವಾಲಾ ಅವರಿಗೆ ನೀಡಿದ ಪತ್ರವನ್ನು ಕೋರ್ಟ್‌ಗೆ ಸಲ್ಲಿಸಿತು. ಇದರಲ್ಲಿ 104 ಶಾಸಕರ ಬೆಂಬಲ ನಮಗೆ ಇದೆ ಎಂದು ಹೇಳಿದ್ದು, ಸರ್ಕಾರ ರಚನೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಲಾಗಿದೆ
ಅರ್ಜಿದಾರರಿಗೆ 2 ಆಯ್ಕೆಗಳನ್ನು ಸುಪ್ರೀಂಕೋರ್ಟ್ ನೀಡಿದೆ. ಯಾವ ಆಯ್ಕೆಗೆ ಒಪ್ಪಿಗೆ ಸಿಗಲಿದೆ ಎಂದು ಕಾದು ನೋಡಬೇಕು
ರಾಜ್ಯಪಾಲರು ಅನುಮತಿ ನೀಡಿದ ಬಗ್ಗೆ ವಿಚಾರಣೆ, ನಾಳೆಯೇ ವಿಶ್ವಾಸ ಮತ ಯಾಚನೆಗೆ ಸೂಚನೆ ನೀಡುವುದು ನಮ್ಮ ಮುಂದೆ ಎರಡು ಆಯ್ಕೆಗಳಿವೆ ಎಂದು ಹೇಳಿದ ಕೋರ್ಟ್
ಯಾರಿಗೆ ಮೊದಲು ಸರ್ಕಾರ ರಚನೆಗೆ ಅವಕಾಶ ನೀಡಬೇಕು ಎಂಬುದನ್ನು ಕೋರ್ಟ್ ತೀರ್ಮಾನಿಸಬೇಕು ಎಂದು ಕಾಂಗ್ರೆಸ್ ಪರ ವಕೀಲ ಅಭಿಷೇಕ್ ಸಿಂಘ್ವಿ ವಾದ ಮಂಡನೆ ಮಾಡಿದರು
ನಾವು ಯಾರಿಗೂ ಕಾಲಾವಕಾಶ ನೀಡುವುದಿಲ್ಲ. ನಾಳೆಯೇ ಬಹುಮತ ಸಾಬೀತು ಪಡಿಸಿ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ
ಬಿಜೆಪಿ ಪರವಾಗಿ ಮುಕುಲ್ ರೋಹ್ಟಗಿ ವಾದ ಮಂಡನೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಪರವಾಗಿ ಪಿ.ಚಿದಂಬರಂ, ಕೇಂದ್ರ ಸರ್ಕಾರದ ಪರವಾಗಿ ಎಜಿ ಕೆ.ಕೆ.ವೇಣುಗೋಪಾಲ್ ಅವರು ವಾದ ಮಂಡಿಸುತ್ತಿದ್ದಾರೆ.












Click it and Unblock the Notifications