ಕಾಂಗ್ರೆಸ್ ನ ಚುನಾವಣೆ ಗುರುತಿಗೇ ಕುತ್ತು! ಏಪ್ರಿಲ್ 18ಕ್ಕೆ ವಿಚಾರಣೆ

Posted By:
Subscribe to Oneindia Kannada
   Karnataka Elections 2018: ಕಾಂಗ್ರೆಸ್ ನ ಚುನಾವಣೆ ಗುರುತು ಹಸ್ತಕ್ಕೆ ಬಂತು ಕುತ್ತು | Oneindia Kannada

   ಬೆಂಗಳೂರು, ಏಪ್ರಿಲ್ 13: ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೇನು ತಿಂಗಳು ಸಹ ಇಲ್ಲ, ಇದೀಗ ಚುನಾವಣಾ ಆಯೋಗದ ಮುಂದೆ ಮನವಿಯೊಂದು ಬಂದಿದ್ದು, ಕಾಂಗ್ರೆಸ್ ನ ಚುನಾವಣೆ ಗುರುತಾದ ಹಸ್ತವನ್ನು ರದ್ದು ಮಾಡಬೇಕು ಎಂಬ ಅರ್ಜಿಯ ವಿಚಾರಣೆಯನ್ನು ಏಪ್ರಿಲ್ 18ರಂದು ಚುನಾವಣೆ ಆಯೋಗ ಮಾಡಬೇಕಿದೆ.

   ಅಶ್ವಿನಿ ಉಪಾಧ್ಯಾಯ ಎಂಬುವವರು ಚುನಾವಣೆ ಆಯೋಗಕ್ಕೆ ಅರ್ಜಿ ಹಾಕಿದ್ದು, ಈ ಬಗ್ಗೆ ಮಾಹಿತಿ ಟ್ವೀಟ್ ಮಾಡಿದ್ದಾರೆ. ಚುನಾವಣೆ ಗುರುತನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಗೆ ಕಾನೂನು ಬಾಹಿರವಾಗಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

   ರಾಜಕೀಯ ಪಕ್ಷದ ಚಿಹ್ನೆ ಬಗ್ಗೆ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಭವಿಷ್ಯ

   "ಕಾನೂನು ಪ್ರಕಾರ ಮತ್ತು ನೀತಿ ಸಂಹಿತೆ ಅನ್ವಯ, ದೇಹದ ಭಾಗವನ್ನು ಚುನಾವಣೆ ಗುರುತಾಗಿ ನೀಡುವಂತಿಲ್ಲ ಮತ್ತು ಯಾವುದೇ ವ್ಯಕ್ತಿ ಚುನಾವಣೆ ಗುರುತಿನೊಂದಿಗೆ ಮತ ಕೇಂದ್ರವನ್ನು ಪ್ರವೇಶಿಸುವಂತಿಲ್ಲ" ಎಂದು ಉಪಾಧ್ಯಾಯ ಹೇಳಿದ್ದಾರೆ. ಅಂದಹಾಗೆ ಅವರು ಸುಪ್ರೀಂ ಕೋರ್ಟ್ ನ ವಕೀಲರೂ ಹೌದು.

   Congress

   ಜನವರಿ 29ರಂದು ಉಪಾಧ್ಯಾಯ್ ಅವರು ಅರ್ಜಿ ಸಲ್ಲಿಸಿದ್ದು, ಕಾಂಗ್ರೆಸ್ ನ ಗುರುತು ನೀತಿ ಸಂಹಿತೆಯ ಉಲ್ಲಂಘನೆ ಆಗುತ್ತದೆ ಎಂದಿದ್ದಾರೆ. ಜನ ಪ್ರತಿನಿಧಿ ಕಾಯ್ದೆ ಸೆಕ್ಷನ್ 130 ಮತ್ತು ಸಾಮಾನ್ಯ ಸಂಹಿತೆ 4 ಚುನಾವಣೆ ನೀತಿ ಸಂಹಿತೆ ಅನ್ವಯ, "ಮತದಾನ ಕೇಂದ್ರದ 100 ಮೀಟರ್ ಫಾಸಲೆಯಲ್ಲಿ ಚುನಾವಣೆ ಗುರುತು ಪ್ರದರ್ಶಿಸುವಂತಿಲ್ಲ" ಎಂದು ತಿಳಿಸಿದ್ದಾರೆ.

   ಕಾಂಗ್ರೆಸ್ ನವರ ಗುರುತು 'ಹಸ್ತ'. ಆ ಪಕ್ಷದ ಅಭ್ಯರ್ಥಿಗಳು, ಬೆಂಬಲಿಗರು, ಕಾರ್ಯಕರ್ತರು ಮತ್ತು ಏಜೆಂಟರು ಚುನಾವಣಾ ಪ್ರಚಾರ ಮುಗಿದ ನಂತರವೂ ಅದನ್ನು ಯಾವಾಗಲೂ ಜತೆಯಲ್ಲಿ ಇಟ್ಟುಕೊಂಡು ಓಡಾಡುತ್ತಿರುತ್ತಾರೆ ಎಂದು ಚುನಾವಣೆ ಆಯೋಗಕ್ಕೆ ಬರೆದ ಪತ್ರದಲ್ಲಿ ಉಪಾಧ್ಯಾಯ ತಿಳಿಸಿದ್ದಾರೆ.

   ಕರ್ನಾಟಕದಲ್ಲಿ ಮಾದರಿ ನೀತಿ ಸಂಹಿತೆ ಮಾರ್ಚ್ 27ರಿಂದ ಜಾರಿಯಲ್ಲಿದೆ. ಮೇ 12ರಂದು ಮತದಾನ ನಡೆಯಲಿದ್ದು, ಮೇ 15ಕ್ಕೆ ಎಣಿಕೆ ನಡೆಯುತ್ತದೆ. 1980ರಲ್ಲಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ (ಐ)ಗೆ ಹಸ್ತದ ಗುರುತನ್ನು ನೀಡಲಾಯಿತು. ಅದಕ್ಕೂ ಮುನ್ನ ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ ಬಳಸಿತ್ತು, 1952ರ ಚುನಾವಣೆಯಲ್ಲಿ.

   ಆ ನಂತರ ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ ಪಕ್ಷ ಇಲ್ಲದಂತಾಗಿ, ಹಸ್ತದ ಗುರುತನ್ನು ದಶಕಗಳ ಕಾಲ ಯಾವುದೇ ಪಕ್ಷ ಬಳಸುತ್ತಿರಲಿಲ್ಲ್. ಅದನ್ನೇ ಕಾಂಗ್ರೆಸ್ (ಐ)ಗೆ ನೀಡಲಾಯಿತು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Less than a month before Karnataka goes to the polls, the Election Commission (EC) will on April 18 hear a plea regarding the cancellation of the Congress party's election symbol -- palm, a BJP leader said on Thursday.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ