ಅತಂತ್ರ ಸ್ಥಿತಿ ತಲುಪುತ್ತಿದೆಯೇ ಕರ್ನಾಟಕ ವಿಧಾನಸಭೆ?

Recommended Video

      Karnataka election results 2018 : ಅತಂತ್ರ ಸ್ಥಿತಿ ತಲುಪುತ್ತಿದೆಯೇ ಕರ್ನಾಟಕ ವಿಧಾನಸಭೆ? | Oneindia Kannada

      ಬೆಂಗಳೂರು, ಮೇ 15 : ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಹೇಳಿರುವಂತೆ, ಜ್ಯೋತಿಷಿಗಳು ಊಹಿಸಿರುವಂತೆ ಕರ್ನಾಟಕ ಅತಂತ್ರ ಸ್ಥಿತಿಗೆ ತಲುಪುತ್ತಿದೆಯಾ? ಆರಂಭಿಕ ಮುನ್ನಡೆ, ಹಿನ್ನಡೆಗಳ ಲೆಕ್ಕಾಚಾರ ಹಾಕಿದರೆ ಕರ್ನಾಟಕ ವಿಧಾನಸಭೆ ಅತಂತ್ರವಾಗುವುದು ಖಚಿತವಾಗುತ್ತಿದೆ.

      ಆದರೂ, ಇದು ಆರಂಭಿಕ ಮತ ಎಣಿಕೆ ಮಾತ್ರ. ಅಂಚೆಮತಗಳ ಎಣಿಕೆಯಲ್ಲಿ ಹಲವಾರು ಅಚ್ಚರಿಗಳು ಮೂಡಿಬರುತ್ತಿವೆ. ಮೊದಲ ಅಚ್ಚರಿಯೆಂದರೆ, ಚಾಮುಂಡೇಶ್ವರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜೆಡಿಎಸ್ ನ ಜಿಟಿ ದೇವೇಗೌಡ ಅವರ ವಿರುದ್ಧ ಹಿನ್ನಡೆ ಸಾಧಿಸಿದ್ದಾರೆ.

      ಇದು ಮುಂದಿನ ಮತಎಣಿಕೆಯಲ್ಲಿ ತಿರುವು ಮುರುವು ಕೂಡ ಆಗಬಹುದು. ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಸೋತರೆ ಕಾಂಗ್ರೆಸ್ಸಿಗೆ ಭಾರೀ ಹಿನ್ನಡೆ ಆಗುವುದಂತೂ ಖಚಿತ. ಬಾದಾಮಿಯಲ್ಲಿ ಸಿದ್ದರಾಮಯ್ಯ ಆರಂಭಿಕ ಮುನ್ನಡೆ ಕಂಡಿದ್ದಾರೆ. ಶ್ರೀರಾಮುಲು ಹಿಂದಿದ್ದಾರೆ.

      Karnataka Election Results 2018 : Is Karnataka heading towards hung assembly?

      ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ಎಲ್ಲ ಪ್ರಮುಖ ಪಕ್ಷಗಳ ಅಭ್ಯರ್ಥಿಗಳನ್ನು ಹಿಂದಿಕ್ಕಿ ಪಕ್ಷೇತರ ಅಭ್ಯರ್ಥಿ ಶ್ರೀನಿವಾಸ್ 400 ಅಂಚೆ ಮತಗಳನ್ನು ಗಳಿಸಿರುವುದು ಮತ್ತೊಂದು ಅಚ್ಚರಿ. ಇಂತಹ ಹಲವಾರು ಆಘಾತಗಳನ್ನು ಕಂಡರೂ ಅಚ್ಚರಿಯಿಲ್ಲ. ನೋಡುತ್ತಿರಿ.

      ಎರಡನೇ ಸುತ್ತಿನ ಮತಎಣಿಕೆ ಮುಕ್ತಾಯದ ನಂತರ ಕಾಂಗ್ರೆಸ್ 76 ಕ್ಷೇತ್ರಗಳಲ್ಲಿ ಮತ್ತು ಬಿಜೆಪಿ 79 ಕ್ಷೇತ್ರಗಳಲ್ಲಿ ಮುಂದಿದ್ದು, ಬಿಜೆಪಿ ಅಲ್ಪ ಮುನ್ನಡೆ ಸಾಧಿಸಿದೆ. ಜೆಡಿಎಸ್ 28ರಲ್ಲಿ ಮಾತ್ರ ಮುಂದಿದ್ದು, ಮತ್ತೆ ಕಿಂಗ್ ಮೇಕರ್ ಆಗುವ ಎಲ್ಲ ಲಕ್ಷಣಗಳನ್ನು ತೋರುತ್ತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+