ಬಾಗಲಕೋಟೆ ಜಿಲ್ಲೆಯ ಜೆಡಿಎಸ್ ಅಭ್ಯರ್ಥಿಗಳ ಪರಿಚಯ
ಬಾಗಲಕೋಟೆ, ಮಾರ್ಚ್ 16 : ಕರ್ನಾಟಕ ಜೆಡಿಎಸ್ ವಿಧಾನಸಭೆ ಚುನಾವಣೆಗೆ 126 ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದೆ. ಬಾಗಲಕೋಟೆ ಜಿಲ್ಲೆಯ 3 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ ಮುಧೋಳ, ತೆರದಾಳ, ಜಮಖಂಡಿ, ಬೀಳಗಿ, ಬಾದಾಮಿ, ಬಾಗಲಕೋಟೆ, ಹುನಗುಂದ ಸೇರಿ ಒಟ್ಟು 7 ವಿಧಾನಸಭಾ ಕ್ಷೇತ್ರಗಳಿವೆ. ಇವುಗಳ ಪೈಕಿ 3 ಕ್ಷೇತ್ರಗಳಿಗೆ ಜೆಡಿಎಸ್ ಪಕ್ಷ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ.

ತೇರದಾಳ : ಕ್ಷೇತ್ರಕ್ಕೆ ಪ್ರೊ.ಬಸವರಾಜ್ ಕೊಣ್ಣೂರು ಅವರು ಅಭ್ಯರ್ಥಿ. ಕಳೆದ ಬಾರಿ ರಂಗನಗೌಡ ಶಿವನಗೌಡ ಪಾಟೀಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. 5,282 ಮತಗಳನ್ನು ಪಡೆದಿದ್ದರು.
ಪ್ರೊ.ಬಸವರಾಜ್ ಕೊಣ್ಣೂರು ಕಳೆದ 20 ವರ್ಷಗಳಿಂದ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಈಗ ರಾಜಕೀಯಕ್ಕೆ ಧಮುಕಿದ್ದಾರೆ. ಬಸವರಾಜ್ ಸ್ಥಳೀಯರು ಎಂಬುದು ಚುನಾವಣೆಯಲ್ಲಿ ಸಹಾಯಕವಾಗಬಹುದು ಎಂಬ ನಿರೀಕ್ಷೆ ಇದೆ.

ಜಮಖಂಡಿ : ತೌಫಿಕ್ ಪಾರ್ಥನಹಳ್ಳಿ ಅವರನ್ನು ಜಮಖಂಡಿ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ. ಕೆಲವು ದಿನಗಳ ಹಿಂದೆ ತೌಫಿಕ್ ಪಕ್ಷ ಸೇರಿದ್ದರು. ತೌಫಿಕ್ ಪಕ್ಷ ಸೇರಿದ ಕೆಲವೇ ದಿನಗಳಲ್ಲಿ ಅವರ ಕಚೇರಿ ಮುಂದೆ ವಾಮಾಚಾರ ನಡೆಸಲಾಗಿದೆ ಎಂಬುದು ಭಾರೀ ಚರ್ಚೆಗೆ ಕಾರಣವಾಗಿತ್ತು.
ಬಾದಾಮಿ : ಹಣುಮಂತ ಮಾವಿನಮರದ್ ಅವರನ್ನು ಬಾದಾಮಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಮದು ಘೋಷಣೆ ಮಾಡಲಾಗಿದೆ.












Click it and Unblock the Notifications