ವಿಜಯವಾಣಿ, ದಿಗ್ವಿಜಯ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಅತಂತ್ರ ವಿಧಾನಸಭೆ
ಬೆಂಗಳೂರು, ಮೇ 07: ಕರ್ನಾಟಕ ವಿಧಾನಸಭೆ ಚುನಾವಣೆ 2018 ರ ಕುರಿತು ವಿಜಯ ಸಂಕೇಶ್ವರ್ ಒಡೆತನದ ಪತ್ರಿಕೆ ವಿಜಯವಾಣಿ ಮತ್ತು ದಿಗ್ವಿಜಯ ವಾಹಿನಿ ಜಂಟಿಯಾಗಿ ಮಾಡಿರುವ ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಲಿದೆ.
ವಿಜಯವಾಣಿ-ದಿಗ್ವಿಜಯ ಸಮೀಕ್ಷೆಯ ಪ್ರಕಾರ ಅತಿ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಪಕ್ಷ ಬಿಜೆಪಿ ಆಗಲಿದ್ದು, ಕಾಂಗ್ರೆಸ್‌ಗೆ ಎರಡನೇ ಸ್ಥಾನ ಹಾಗೂ ಜೆಡಿಎಸ್‌ಗೆ ಮೂರನೇ ಸ್ಥಾನ ದೊರೆಯಲಿದೆ.
ಸಮೀಕ್ಷೆ ಪ್ರಕಾರ ಬಿಜೆಪಿಯು 90-94 ಸ್ಥಾನ ಪಡೆದುಕೊಂಡರೆ, ಕಾಂಗ್ರೆಸ್ 85-89 ಸ್ಥಾನ ಪಡೆದುಕೊಳ್ಳಲಿದೆ. ಜೆಡಿಎಸ್ ಪಕ್ಷವು 37-41 ಕ್ಷೇತ್ರದಲ್ಲಿ ಗೆಲ್ಲಲಿದೆ. ಇನ್ನು ಪಕ್ಷೇತರರು ಹಾಗೂ ಇತರ ಪಕ್ಷಗಳು 3-7 ಸ್ಥಾನಗಳಲ್ಲಿ ಗೆಲವು ಸಾಧಿಸಲಿದ್ದಾರೆ.

ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಲಿದ್ದು ಮೈತ್ರಿ ಸರ್ಕಾರ ರಚನೆ ಆಗುವುದು ಖಂಡಿತ ಎನ್ನಲಾಗಿದೆ. ಕಳೆದ ಬಾರಿ ಚುನಾವಣೆಗೆ ಹೋಲಿಸಿದರೆ ಬಿಜೆಪಿ ಜಿಗಿತ ಕಂಡಿದ್ದು, ಕಾಂಗ್ರೆಸ್ ಕುಸಿತ ಕಂಡಿದೆ ಹಾಗೂ ಜೆಡಿಎಸ್ ಯಥಾಸ್ಥಿತಿ ಮುಂದುವರೆಸಿದೆ.












Click it and Unblock the Notifications