ಕರ್ನಾಟಕ ಚುನಾವಣಾ ಕಣದಲ್ಲಿರುವ ಬಿಜೆಪಿಯ ಕುಬೇರರು

ಬೆಂಗಳೂರು, ಮೇ 07: ಕರ್ನಾಟಕ ಚುನಾವಣಾ ಕಣದಲ್ಲಿ ಈ ಬಾರಿ ಸರಿ ಸುಮಾರು 883 ಕೋಟ್ಯಧಿಪತಿಗಳಿದ್ದಾರೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಲ್ಲದೆ, ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿರುವವರ ಪೈಕಿ ಕೋಟ್ಯಧಿಪತಿಗಳು ಹೆಚ್ಚಾಗಿದ್ದಾರೆ. 2018ರ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಆಸ್ತಿ ಮೌಲ್ಯ ಸರಾಸರಿ 7.54 ಕೋಟಿ ರು ಆಗಲಿದೆ.

ಕರ್ನಾಟಕ ವಿಧಾನಸಭೆ ಕದನದಲ್ಲಿರುವ ಸುಮಾರು 2,560 ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸಿ, ಅಸೋಸಿಯೇಷನ್ ಫಾರ್ ಡೆಮೊಕ್ರಾಟಿಕ್ ರಿಫಾರ್ಮ್ಸ್ (ಎಡಿಆರ್ ) ಸಂಸ್ಥೆ ಕಲೆ ಹಾಕಿರುವ ಮಾಹಿತಿಯಂತೆ, ಭಾರತೀಯ ಜನತಾ ಪಕ್ಷ (ಬಿಜೆಪಿ) ದ ಕುಬೇರರ ವಿವರ ಇಲ್ಲಿದೆ....

ಎಲ್ಲಾ ಪಕ್ಷದ ಕುಬೇರರ ವಿವರ ನೋಡಿದರೂ ಕಾಂಗ್ರೆಸ್ಸಿನ ಪ್ರಿಯಾಕೃಷ್ಣ 1020 ಕೋಟಿ ರು, ಎನ್ ನಾಗರಾಜು 1015 ಕೋಟಿ ರು, ಡಿಕೆ ಶಿವಕುಮಾರ್ 840 ಕೋಟಿ ರು ಟಾಪ್ ಮೂರು ಕೋಟ್ಯಧಿಪತಿಗಳಾಗಿ ಹೊರ ಹೊಮ್ಮುತ್ತಾರೆ.

ಪಕ್ಷಗಳ ಪೈಕಿ ಬಿಜೆಪಿಯಲ್ಲಿ 208(93%), ಕಾಂಗ್ರೆಸ್ 207(94%), ಜೆಡಿಎಸ್ 154(17%), ಜೆಡಿಯು 13(52%), ಎಎಪಿ 9(33%), ಪಕ್ಷೇತರರು 199 (18%) ಮಂದಿ ಕನಿಷ್ಟ 1 ಕೋಟಿ ರುಗಳಿಗಿಂತ ಅಧಿಕ ಆಸ್ತಿ ಹೊಂದಿದ್ದಾರೆ.

ಹುಲ್ಲಳ್ಳಿ ಸುರೇಶ್- ಬೇಲೂರು

ಹುಲ್ಲಳ್ಳಿ ಸುರೇಶ್- ಬೇಲೂರು

1. ಬೇಲೂರು ವಿಧಾನಸಭಾ ಕ್ಷೇತ್ರದ ಆಕಾಂಕ್ಷಿತ ಅಭ್ಯರ್ಥಿ ಹುಲ್ಲಳ್ಳಿ ಸುರೇಶ್ ಅಲಿಯಾಸ್ ಎಚ್. ಕೆ ಸುರೇಶ್ ಅವರ ವಿರುದ್ಧ ಯಾವುದೇ ಕ್ರಿಮಿನಲ್ ಕೇಸ್ ಗಳಿಲ್ಲ. ಹಾಸನ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿರುವ ಸುರೇಶ್ ಅವರು ಡಿಪ್ಲೋಮಾ(ಸಿವಿಎಲ್) ಗಳಿಸಿದ್ದಾರೆ. 380 ಕೋಟಿ ರು ಆಸ್ತಿ ಹೊಂದಿದ್ದು, 3 ಕೋಟಿ ರು ಸಾಲ ಹೊಂದಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಪರ 208 ಕೋಟ್ಯಧಿಪತಿ ಅಭ್ಯರ್ಥಿಗಳ ಪೈಕಿ ಸುರೇಶ್ ಅಗ್ರಸ್ಥಾನ ಗಳಿಸಿದ್ದಾರೆ.

2. ನಂದೀಶ್ ರೆಡ್ಡಿ- ಕೆ.ಆರ್ ಪುರ

2. ನಂದೀಶ್ ರೆಡ್ಡಿ- ಕೆ.ಆರ್ ಪುರ

ಬೆಂಗಳೂರು ಕೆ.ಆರ್ ಪುರದ ಕ್ಷೇತ್ರದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ನಂದೀಶ್ ರೆಡ್ಡಿ ಅವರ ವಿರುದ್ಧ 13 ಕ್ರಿಮಿನಲ್ ಕೇಸ್ ಗಳಿವೆ. ನಂದೀಶ್ ರೆಡ್ಡಿ ಅವರು ಪಿಯುಸಿ ತನಕ ಮಾತ್ರ ಓದಿದ್ದಾರೆ. 303 ಪ್ಲಸ್ ಕೋಟಿ ರು ಆಸ್ತಿ ಹೊಂದಿದ್ದು, 38 ಕೋಟಿ ರು ಸಾಲ ಹೊಂದಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಪರ 208 ಕೋಟ್ಯಧಿಪತಿ ಅಭ್ಯರ್ಥಿಗಳ ಪೈಕಿ ನಂದೀಶ್ ಎರಡನೇ ಸ್ಥಾನದಲ್ಲಿದ್ದಾರೆ.

3. ಉದಯ್ ಗರುಡಾಚಾರ್- ಚಿಕ್ಕಪೇಟೆ

3. ಉದಯ್ ಗರುಡಾಚಾರ್- ಚಿಕ್ಕಪೇಟೆ

ಬೆಂಗಳೂರು ಚಿಕ್ಕಪೇಟೆ ಕ್ಷೇತ್ರದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಉದಯ್ ಗರುಡಾಚಾರ್ ಅವರ ವಿರುದ್ಧ ಯಾವುದೇ ಕ್ರಿಮಿನಲ್ ಕೇಸ್ ಗಳಿಲ್ಲ. ಉದಯ್ ಗರುಡಾಚಾರ್ ಅವರು ಪದವೀಧರರಾಗಿದ್ದಾರೆ. 196 ಪ್ಲಸ್ ಕೋಟಿ ರು ಆಸ್ತಿ ಹೊಂದಿದ್ದು, 59 ಕೋಟಿ ರು ಸಾಲ ಹೊಂದಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಪರ 208 ಕೋಟ್ಯಧಿಪತಿ ಅಭ್ಯರ್ಥಿಗಳ ಪೈಕಿ ಮೂರನೇ ಸ್ಥಾನದಲ್ಲಿದ್ದಾರೆ.

4. ಸೋಮಶೇಖರ್ ಜಯರಾಜ್- ಸಕಲೇಶಪುರ

4. ಸೋಮಶೇಖರ್ ಜಯರಾಜ್- ಸಕಲೇಶಪುರ

ಬೆಂಗಳೂರು ಸಕಲೇಶಪುರ ಕ್ಷೇತ್ರದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸೋಮಶೇಖರ್ ಜಯರಾಜ್ ಅವರ ವಿರುದ್ಧ ಯಾವುದೇ ಕ್ರಿಮಿನಲ್ ಕೇಸ್ ಗಳಿಲ್ಲ. ಸೋಮಶೇಖರ್ ಜಯರಾಜ್ ಅವರು 10ನೇ ತರಗತಿ ತನಕ ಓದಿದ್ದಾರೆ. 129 ಪ್ಲಸ್ ಕೋಟಿ ರು ಆಸ್ತಿ ಹೊಂದಿದ್ದು, 10 ಕೋಟಿ ರು ಸಾಲ ಹೊಂದಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಪರ 208 ಕೋಟ್ಯಧಿಪತಿ ಅಭ್ಯರ್ಥಿಗಳ ಪೈಕಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+