ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿರಿಯಾಪಟ್ಟಣದಲ್ಲಿ ಕೈ ಹಿಡಿದ ಮತದಾರ

|
Google Oneindia Kannada News

Piriyapatna
ಮೈಸೂರು, ಮೇ 31 : ರಾಜ್ಯದ ಜನರ ಕುತೂಹಲ ಕೆರಳಿಸಿರುವ ಪಿರಿಯಾಪಟ್ಟಣ ಕ್ಷೇತ್ರ ಕಾಂಗ್ರೆಸ್ ವಶವಾಗಿದೆ. ಪಕ್ಷದ ಅಭ್ಯರ್ಥಿ ಕೆ.ವೆಂಕಟೇಶ್ ಜಯಗಳಿಸಿದ್ದಾರೆ. ಆಡಳಿತ ಪಕ್ಷದ ಪರವಾಗಿ ಜನರು ತೀರ್ಪು ನೀಡಿದ್ದು, ಬಿಜೆಪಿಗೆ ಭಾರೀ ಮುಖಭಂಗ ಉಂಟಾಗಿದೆ.

205 ಕೇಂದ್ರಗಳಲ್ಲಿ ನಡೆದ ಮತದಾನದ ಎಣಿಕೆ ಒಟ್ಟು 18 ಸುತ್ತುಗಳಲ್ಲಿ ನಡೆಯಿತು. ಜೆಡಿಎಸ್ ಅಭ್ಯರ್ಥಿ ಕೆ.ಮಹದೇವ್ ಕಾಂಗ್ರೆಸ್ ಅಭ್ಯರ್ಥಿಗೆ ಪ್ರಬಲ ಪೈಪೋಟಿ ನೀಡಿದರು. ಅನುಕಂಪದ ಅಲೆ ಯಾವುದೇ ಪ್ರಭಾವ ಉಂಟು ಮಾಡಿಲ್ಲ. ಆದ್ದರಿಂದ ಬಿಜೆಪಿ ಅಭ್ಯರ್ಥಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿಕೊಂಡಿದ್ದಾರೆ.

2008 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ವೆಂಕಟೇಶ್ ಜಯಗಳಿಸಿದ್ದಾರೆ. ಬಿಎಎಸ್ಆರ್ ಬಿಜೆಪಿಗಿಂತ ಹೆಚ್ಚಿನ ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದಿದೆ. ಕ್ಷೇತ್ರದ ಚುನಾವಣೆಯಲ್ಲಿ ಕೆಜೆಪಿ ತಟಸ್ಥ ನೀತಿ ಅನುಸರಿಸಿತ್ತು. ಆದರೂ. ಅಭ್ಯರ್ಥಿಗೆ 827 ಮತಗಳನ್ನು ಪಡೆದಿದ್ದಾರೆ.

ಪಿರಿಯಾಪಟ್ಟಣ ಕ್ಷೇತ್ರದ ಗೆಲುವಿನಿಂದಾಗಿ ವಿಧಾನಸಭೆಯಲ್ಲಿ ಕಾಂಗ್ರೆಸ್ ಬಲ ಹೆಚ್ಚಾಗಿದೆ. ವಿಧಾನಸಭೆಯಲ್ಲಿ ಕಾಂಗ್ರೆಸ್ ಒಟ್ಟು 122 ಶಾಸಕರ ಬಲ ಹೊಂದಿದೆ. ಜೆಡಿಎಸ್ ಮತ್ತು ಬಿಜೆಪಿ ಸಮಬಲ ಸಾಧಿಸಿದ್ದು, 40 ಸ್ಥಾನಗಳನ್ನು ಪಡೆದಿವೆ.

ಫಲಿತಾಂಶದ ಹೈಲೈಟ್ಸ್

* 4 ನೇ ಸುತ್ತಿನ ವರೆಗೆ ಸ್ಪಷ್ಟ ಮುನ್ನಡೆ ಸಾಧಿಸಿದ್ದ ಜೆಡಿಎಸ್ ಅಭ್ಯರ್ಥಿ.
* 5 ಸುತ್ತಿನಿಂದ ಮುನ್ನಡೆ ಸಾಧಿಸಿದ ಕಾಂಗ್ರೆಸ್ ನ ವೆಂಕಟೇಶ್ ಅಂತಿಮ ಸುತ್ತಿನವರೆಗೂ ಮುನ್ನಡೆ ಉಳಿಸಿಕೊಂಡರು.
* ಪ್ರಬಲ ಪೈಪೋಟಿ ನೀಡಿದ ಜೆಡಿಎಸ್ ಅಭ್ಯರ್ಥಿ.
* ಅನುಕಂಪ ಮತಗಳಾಗಿ ಬದಲಾಗಲಿಲ್ಲ 4 ನೇ ಸ್ಥಾನಕ್ಕೆ ಕುಸಿದ ಬಿಜೆಪಿ.
* ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಪೈಪೋಟಿ ಮೂರನೇ ಸ್ಥಾನಕ್ಕೂ ಬರಲಿಲ್ಲ ಬಿಜೆಪಿ ಅಭ್ಯರ್ಥಿ
* ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮೂರನೇ ಸ್ಥಾನ
* ಠೇವಣಿ ಕಳೆದುಕೊಂಡ ಬಿಜೆಪಿ ಅಭ್ಯರ್ಥಿ
* ಜೆಡಿಎಸ್ ಹೊರತು ಪಡಿಸಿ ಉಳಿದ ಪಕ್ಷಗಳಿಗೆ ಠೇವಣಿ ಲಾಸ್

ಅಭ್ಯರ್ಥಿಗಳು ಪಡೆದ ಮತಗಳು

ಕಾಂಗ್ರೆಸ್‌ - ಕೆ.ವೆಂಕಟೇಶ್ - 62,054
ಜೆಡಿಎಸ್‌ - ಕೆ.ಮಹದೇವ್ - 59,975
ಬಿಎಸ್‌ಆರ್ ಕಾಂಗ್ರೆಸ್‌ - ಎಚ್.ಡಿ. ಗಣೇಶ್ - 5,669
ಬಿಜೆಪಿ - ಆರ್.ಟಿ. ಸತೀಶ್ - 3,731
ಕೆಜೆಪಿ - ಎಸ್.ಸಿ.ಬಸವರಾಜು - 827

English summary
Karnataka assembly Election 2013 Mysore district Piriyapatna constituency result. Get complete information about winners and losers with their partys Piriyapatna constituency. Congress candidate K.Venkatesh win the election. JDS get second place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X