ಚಲನಚಿತ್ರ ನಿರ್ಮಾಪಕ ಮುನಿರತ್ನ ಜಯಭೇರಿ
ಕನ್ನಡ ಚಲನಚಿತ್ರಗಳ ನಿರ್ಮಾಪಕ ಮುನಿರತ್ನ ಅವರು ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಜಯಭೇರಿ ಭಾರಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅವರು ಜೆಡಿಎಸ್ ನ ಕೆ.ಎಲ್.ಆರ್. ತಿಮ್ಮನಂಜಯ್ಯ ವಿರುದ್ಧ ಗೆಲುವಿನ ನಗೆ ಬೀರಿದ್ದಾರೆ. ಬಿಜೆಪಿಯ ಎಂ ಶ್ರೀನಿವಾಸ್ ಅವರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.
ಮುನಿರತ್ನ ಅವರು ಈಗಾಗಲೆ ಯಶವಂತಪುರದ ಕಾರ್ಪೋರೇಟರ್ ಆಗಿ ರಾಜಕೀಯದ ಗಾಳಿ, ನೀರು ಕುಡಿದವರು. ಈಗ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜರಾಜೇಶ್ವರಿನಗರದಿಂದ ಕಣಕ್ಕಿಳಿದ್ದರು. ಬಿಜೆಪಿಯ ಎಂ ಶ್ರೀನಿವಾಸ್, ಜೆಡಿಎಸ್ ನ ಕೆ.ಎಲ್.ತಿಮ್ಮನಂಜಯ್ಯ ಹಾಗೂ ಕೆಜೆಪಿಯ ವೆಂಕಟೇಶ್ ಗೌಡ ಇದೇ ಕ್ಷೇತ್ರದ ಇತರೆ ಅಭ್ಯರ್ಥಿಗಳು.
ಮುನಿರತ್ನ ಪಡೆದ ಮತಗಳು- 45289
ಕೆ.ಎಲ್.ಆರ್. ತಿಮ್ಮನಂಜಯ್ಯ-23489
ಎಂ ಶ್ರೀನಿವಾಸ್-23097













Click it and Unblock the Notifications