ಬಳ್ಳಾರಿ ಕದನಕಣ : ಕೂಡ್ಲಿಗಿ (ಎಸ್‌ಟಿ ಮೀಸಲು)
ಗಣಿಧಣಿಗಳ ಪಾರುಪತ್ಯ ಕಂಡಿರುವ ಬಳ್ಳಾರಿಯಲ್ಲಿ ಇನ್ನೂ ದುಡ್ಡಿನದೇ ಮೇಲಾಟವಾಗಿದ್ದರೂ ಲಿಂಗಾಯತ, ವಾಲ್ಮಿಕಿ, ಕುರುಬ, ಮುಸ್ಲಿಂ, ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ಮತಗಳನ್ನು ಬುಟ್ಟಿಗೆ ಹಾಕಿಕೊಂಡವರು ಮಾತ್ರ ಇಲ್ಲಿ ಗೆಲ್ಲಲು ಸಾಧ್ಯ. ಶ್ರೀರಾಮುಲು ಮತ್ತು ರೆಡ್ಡಿಗಳ ನಡುವೆ ಒಡಕು ಮೂಡಿದೆ ಎಂಬ ಸುದ್ದಿ, ಹಾಗು ಟಿಕೆಟ್‌ಗಾಗಿ ಕಾಂಗ್ರೆಸ್ಸಿನಲ್ಲಿ ಭಾರೀ ಪೈಪೋಟಿ ನಡೆಯುತ್ತಿರುವುದರಿಂದ ಈ ಬಾರಿ ಏನು ಬೇಕಾದರೂ ಸಂಭವಿಸಬಹುದು. ಕಳೆದ ಬಾರಿ ಇದ್ದ ಬಿಜೆಪಿ ಅಲೆ ಈ ಬಾರಿ ಇಲ್ಲದಿದ್ದರೂ ಹಣದ ಪ್ರಭಾವ ತುಸುವೂ ಕಡಿಮೆಯಾಗಿಲ್ಲ.
ಕೂಡ್ಲಿಗಿ (ಎಸ್‌ಟಿ ಮೀಸಲು) : ಲಿಂಗಾಯತ ಮತ್ತು ಪರಿಶಿಷ್ಟ ಪಂಗಡದ ಮತಗಳು ಇಲ್ಲಿ ಹೆಚ್ಚಾಗಿವೆ. ತಲಾ 45 ಸಾವಿರಕ್ಕೂ ಅಧಿಕ ಮತಗಳನ್ನು ಹೊಂದಿರುವ ಈ ಎರಡು ಸಮಾಜದ ಮತಗಳ ಮೇಲೆ ಎಲ್ಲರೂ ಕಣ್ಣಿಟ್ಟಿದ್ದಾರೆ. ಗೊಲ್ಲ ಸಮಾಜದ ಮತಗಳು ಸಹ ಪರಿಣಾಮಕಾರಿಯಾಗಿವೆ. ಹೀಗಾಗಿ ಕಳೆದ ಬಾರಿ ಸ್ಪರ್ಧಿಸಿ ಗೆಲುವು ಕಂಡಿದ್ದ ನಾಗೇಂದ್ರ, ಇದೀಗ ಬಿಜೆಪಿಯಿಂದ ದೂರವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿದ್ದಾರೆ.
ಕಾಂಗ್ರೆಸ್‌ನಿಂದ ಗುಜ್ಜಲ್ ರಘು, ಎನ್. ಟಿ. ಬೊಮ್ಮಣ್ಣ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಕೆಜೆಪಿ ಸಹ ಡಾಕ್ಟರ್ ತರಸಾಲಪ್ಪರನ್ನ ಕಣಕ್ಕೆ ಇಳಿಸುತ್ತಿದೆ. ಜೆಡಿಎಸ್ ಹಾಗೂ ಬಿಜೆಪಿ ಈ ಕ್ಷೇತ್ರದಲ್ಲಿ ಪ್ರಬಲವಾಗಿ ಇಲ್ಲದಿದ್ದರೂ, ಗೆಲ್ಲುವ ಅಭ್ಯರ್ಥಿಗೆ ತೊಡಕಾಗುವ ಸಾಧ್ಯತೆ ಹೆಚ್ಚಾಗಿದೆ. ಬಿಎಸ್‌ಆರ್ ಕಾಂಗ್ರೆಸ್, ನಾಗೇಂದ್ರ ವಿರುದ್ದ ಅಭ್ಯರ್ಥಿಯನ್ನು ನಿಲ್ಲಿಸಬೇಕೋ ಬೇಡವೋ ಅನ್ನೋ ಚಿಂತನೆ ನಡೆಸುತ್ತಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications