ಬೆಂಗಳೂರು ರಾಜಾಜಿನಗರ ವಿಧಾನಸಭಾ ಕ್ಷೇತ್ರ ಪರಿಚಯ

ಆರಂಭದಲ್ಲಿ ಬಿಬಿಎಂಪಿ ಕಾರ್ಪೊರೇಟರ್. ಪ್ರಸ್ತುತ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರು.
* ಸಾಧನೆಗಳು: ದೀನ ದಯಾಳ್ ಡಯಾಲಿಸಿಸ್ ಕೇಂದ್ರದ ಅಭಿವೃದ್ಧಿ, ವಾಜಪೇಯಿ ಒಳಾಂಗಣ ಕ್ರೀಡಾಂಗಣ, ಆಡಿಟೋರಿಯಂ, ಗಾಂಧಿ ಶಾಲೆ ನಿರ್ಮಾಣವಾಗಿದೆ.
* ಸಮಸ್ಯೆಗಳು: ಕ್ಯಾಬಿನೆಟ್ ಸಚಿವರಾಗಿದ್ದರೂ ಕ್ಷೇತ್ರದಲ್ಲಿ ಶಾಸಕರ ಕಚೇರಿ ಆರಂಭಿಸಿಲ್ಲ. ಮನೆಗೆ ಹೋದರೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ ಎಂಬ ದೂರು ಸಾಮಾನ್ಯವಾಗಿದೆ ಎಂಬುದು ಪರಾಜಿತ ಅಭ್ಯರ್ಥಿ ಜಿ ಪದ್ಮಾವತಿ (ಕಾಂಗ್ರೆಸ್)
ಅವರ ದೂರು. ಪಕ್ಷದ ಹೊಣೆಗಾರಿಕೆ ಜತೆಗೆ ಸರಕಾರದ ಜವಾಬ್ದಾರಿಯೂ ಮೈಮೆಲೆ ಬಿದ್ದಿರುವುದರಿಂದ ಕ್ಷೇತ್ರವನ್ನು ಕಡೆಗಣಿಸಿದ್ದಾರೆ ಎಂಬುದು ಮತ ಮಾತು. ಇನ್ನು ಈ ಬಾರಿ ಶೋಭಾ ಕರಂದ್ಲಾಜೆ ಇಲ್ಲಿಂದಲೇ ಸ್ಪರ್ಧಿಸುವುದು ಖಚಿತವಾಗಿದೆ. ಜತೆಗೆ ಜೆಡಿಎಸ್ ಪಕ್ಷದಿಂದ ಮಾಳವಿಕಾ ಸ್ಪರ್ಧಾ ಕಣದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಇದೆಲ್ಲ ಸೇರಿ ಸುರೇಶ್ ಕುಮಾರ್ ಗೆ ಈ ಬಾರಿ ಒಂದಷ್ಟು ಕಸಿವಿಸಿ ಮಾಡಲಿದೆ.
* ವಾರ್ಡ್: ದಯಾನಂದಸಾಗರ ನಗರ, ಪ್ರಕಾಶ್ ನಗರ, ರಾಜಾಜಿನಗರ, ಬಸವೇಶ್ವರ ನಗರ, ಕಾಮಾಕ್ಷಿಪಾಳ್ಯ, ಶಿವನಗರ, ಶ್ರೀರಾಮ ಮಂದಿರ
* ಮತದಾರರ ಸಂಖ್ಯೆ: 1,83,301. ಕಳೆದ ಬಾರಿ ವೋಟ್ ಮಾಡಿದವರು ಶೇ. 53ರಷ್ಟು ಮಂದಿ. ಅದರಲ್ಲಿ ಎಸ್ ಸುರೇಶ್ ಕುಮಾರ್ ಮತ ಗಳಿಕೆ ಪ್ರಮಾಣ ಶೇ. 52.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications