Get Updates
Get notified of breaking news, exclusive insights, and must-see stories!

ವಿಶೇಷ ಗೊತ್ತೆ: 30 ವರ್ಷದ ನಂತರ ಪಿಯು ಪರೀಕ್ಷೆಯಲ್ಲಿ ಸಾ ರಾ ಮಹೇಶ್ ಪತ್ನಿ ಪಾಸ್!

ಬೆಂಗಳೂರು, ಜೂನ್ 18: ಕರ್ನಾಟಕದಲ್ಲಿ 2021-22ನೇ ಸಾಲಿನಲ್ಲಿ ನಡೆದ ದ್ವಿತೀಯ ಪಿಯುಸಿ ಫಲಿತಾಂಶ ಶನಿವಾರ ಹೊರ ಬಿದ್ದಿದ್ದು, 30 ವರ್ಷಗಳ ನಂತರ ಪಿಯುಸಿ ಪರೀಕ್ಷೆ ಬರೆದ ಮಾಜಿ ಸಚಿವ ಸಾ ರಾ ಮಹೇಶ್ ಪತ್ನಿ ಅನಿತಾ ಅತ್ಯಧಿತ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.

ಕಳೆದ 1993ರಲ್ಲಿ ಅನಿತಾ ಸಾ. ರಾ. ಮಹೇಶ್ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಪಾಸ್ ಆಗಿದ್ದರು. ತದನಂತರದಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಿರಲಿಲ್ಲ. ಇದೀಗ ಖಾಸಗಿಯಾಗಿ ಪಿಯುಸಿ ಪರೀಕ್ಷೆಯನ್ನು ಬರೆದ ಅವರು ಕಲಾ ವಿಭಾಗದಲ್ಲಿ 419 ಅಂಕಗಳನ್ನು ಪಡೆದುಕೊಂಡು ಉತ್ತೀರ್ಣರಾಗಿದ್ದಾರೆ.

ಸಾ ರಾ ಮಹೇಶ್ ಮತ್ತು ಅನಿತಾ ದಂಪತಿಗೆ ಇಬ್ಬರು ಮಕ್ಕಳಿದ್ದು, ಹಿರಿಯ ಪುತ್ರ ಧನುಷ್ ಎಂಬಿಬಿಎಸ್ ಮುಗಿಸಿ ಎಂಎಸ್ ಮಾಡುತ್ತಿದ್ದಾರೆ. ಅದೇ ರೀತಿ ಕಿರಿಯ ಪುತ್ರ ಜಯಂತ್ ಉದ್ಯಮಿ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

After 30 Years Ex Minister Sa Ra Mahesh Wife Anitha Passed in PUC Exam

ಅನಿತಾ ಸಾ. ರಾ. ಮಹೇಶ್ ಗಳಿಸಿದ ಅಂಕಗಳೆಷ್ಟು?: ಬರೋಬ್ಬರಿ 30 ವರ್ಷಗಳ ನಂತರ ಪಿಯುಸಿ ಪರೀಕ್ಷೆಯನ್ನು ಎದುರಿಸಿದ ಅನಿತಾ ಸಾ ರಾ ಮಹೇಶ್ ಮೊದಲ ಗ್ರೇಡ್ ಪಡೆದುಕೊಂಡು ಪಾಸ್ ಆಗಿದ್ದಾರೆ. ಹಾಗಿದ್ದರೆ ಅವರು ಪಡೆದುಕೊಂಡ ಅಂಕಗಳೆಷ್ಟು ಎಂಬುದನ್ನು ಒಮ್ಮೆ ನೋಡೋಣ.

ವಿಷಯ - ಪಡೆದ ಅಂಕಗಳು

* ಕನ್ನಡ - 98/100

* ಇಂಗ್ಲೀಷ್ - 70/100

* ಇತಿಹಾಸ - 70/100

* ಅರ್ಥಶಾಸ್ತ್ರ - 56/100

* ಸಮಾಜಶಾಸ್ತ್ರ - 70/100

* ರಾಜಕೀಯಶಾಸ್ತ್ರ - 55/100

ಮಧ್ಯಮ ವರ್ಗದ ಅನಿತಾ ಸಾ.ರಾ. ಮಹೇಶ್: ಸಾ.ರಾ. ಮಹೇಶ್ ಪತ್ನಿ ಅನಿತಾ ಮೂಲತಃ ಮಧ್ಯಮ ವರ್ಗದವರಾಗಿದ್ದು, ಮೈಸೂರಿನ ಚಾಮರಾಜ ಮೊಹಲ್ಲಾದವರಾಗಿದ್ದಾರೆ. ಇವರ ತಂದೆ ನಾರಾಯಣ್ ಖಾಸಗಿ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದು, ತಾಯಿ ರಾಧಮ್ಮ ಗೃಹಿಣಿಯಾಗಿದ್ದರು.

ನಾರಾಯಣ್ ಮತ್ತು ರಾಧಮ್ಮ ದಂಪತಿಗೆ ಅನಿತಾ ಸೇರಿದಂತೆ ಮೂವರು ಹೆಣ್ಣು ಮಕ್ಕಳಿದ್ದು, ಅನಿತಾ ಮನೆಯ ಹಿರಿಯ ಮಗಳಾಗಿದ್ದಾರೆ. ಮನೆಯ ಹಿರಿಯ ಪುತ್ರಿಯಾಗಿದ್ದ ಅವರ ಹೆಗಲಿಗೆ ಮನೆಯ ಜವಾಬ್ದಾರಿಯಿತ್ತು. ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಂಡಿದ್ದರೂ, ವಿದ್ಯಾಭ್ಯಾಸವನ್ನು ಮುಂದುವರಿಸುವುದಕ್ಕೆ ಕುಟುಂಬದ ಪರಿಸ್ಥಿತಿ ಪೂರಕವಾಗಿರಲಿಲ್ಲ.

ಪಿಯುಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನ: ದಕ್ಷಿಣ ಕನ್ನಡ ಜಿಲ್ಲೆ ಎಂದಿನಂತೆ ಮೊದಲ ಸ್ಥಾನವನ್ನು ಗಳಿಸಿದೆ. ಕಳೆದ ವರ್ಷ ಶೇ. 90. 71 ಫಲಿತಾಂಶ ಗಳಿಸುವ ಮೂಲಕ ಮೊದಲ ಸ್ಥಾನ ಗಳಿಸಿದ್ದ ದಕ್ಷಿಣ ಕನ್ನಡ ಜಿಲ್ಲೆ ಈ ಬಾರಿಯೂ 88.02 ರಷ್ಟು ಫಲಿತಾಂಶ ದಾಖಲಿಸುವ ಮೂಲಕ ಮೊದಲ ಸ್ಥಾನವನ್ನು ಈ ವರ್ಷವೂ ತನ್ನದಾಗಿಸಿಕೊಂಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+