ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಸನದಲ್ಲಿ ಗೆಲುವಿನ ಶಾಸನ ಯಾರು ಕೆತ್ತುತ್ತಾರೆ?

By Mahesh
|
Google Oneindia Kannada News

Hassan District Assembly Constituency Candidates
ಮಾಜಿ ಪ್ರಧಾನಿ ಎಚ್. ಡಿ ದೇವೇಗೌಡ, ನೀರಾವರಿ ತಜ್ಞ ಎ‌ಚ್ ಎನ್ ನಂಜೇಗೌಡ, ಎಚ್.ಸಿ ಶ್ರೀಕಂಠಯ್ಯ, ಹಾರನಹಳ್ಳಿ ರಾಮಸ್ವಾಮಿ, ಎಚ್ ಡಿ ಕುಮಾರಸ್ವಾಮಿ, ಎಚ್ ಡಿ ಕುಮಾರಸ್ವಾಮಿ ಅವರಂಥ ಮುಖಂಡರನ್ನು ಹಾಸನ ಜಿಲ್ಲೆ ನಾಡಿಗೆ ನೀಡಿದೆ. ಭೌಗೋಳಿಕವಾಗಿ ಮಲೆನಾಡು, ಅರೆ ಮಲೆನಾಡು ಹಾಗೂ ಬಯಲು ಸೀಮೆ ಪ್ರದೇಶಗಳನ್ನು ಒಳಗೊಂಡಿರುವ ಹಾಸನ ಜಿಲ್ಲೆಯ ರಾಜಕೀಯ ಬಹುತೇಕ ಬಂಡಾಯ ಪ್ರವೃತ್ತಿಯಿಂದ ಕೂಡಿದೆ ಎಂದರೆ ತಪ್ಪಾಗಲಾರದು.

ದಶಕಗಳಿಂದ ಜೆಡಿಎಸ್ ಪ್ರಾಬಲ್ಯ ಜಿಲ್ಲೆಯಲ್ಲಿ ಮುಂದುವರೆದಿದ್ದು, ಈ ಬಾರಿ ಜೆಡಿಎಸ್ ಪ್ರಾಬಲ್ಯ ಮುರಿಯುವುದೇ ಬಿಜೆಪಿ ಕಾಂಗ್ರೆಸ್ ಹಾಗೂ ಇನ್ನಿತರ ಪಕ್ಷಗಳ ಸವಾಲಾಗಿದೆ. ಜಾತಿವಾರು ಲೆಕ್ಕಾಚಾರದಲ್ಲಿ ಒಕ್ಕಲಿಗರೇ ಪ್ರಾಧಾನ್ಯ. ಅದರಲ್ಲೂ ಒಕ್ಕಲಿಗರ ಉಪಜಾತಿ ಓಲೈಸಿಕೊಂಡವರಿಗೆ ಕೆಲವು ನಿಶ್ಚಿತ. ಉಳಿದಂತೆ ಮುಸ್ಲಿಮರು, ಅಲ್ಪಸಂಖ್ಯಾತರು, ಲಿಂಗಾಯತರು, ಕುರುಬರು ಜಿಲ್ಲೆಯ ಕೆಲ ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರವಹಿಸುತ್ತಾರೆ. [ 2013 ಫಲಿತಾಂಶ: ಗೆದ್ದವರು, ಸೋತವರ ವಿವರ]

ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಹಾಲಿ ಶಾಸಕರು:
ಹಾಸನ: ಎಚ್ ಎಸ್ ಪ್ರಕಾಶ್ ( ಜೆಡಿಎಸ್)
ಶ್ರವಣಬೆಳಗೊಳ: ಜೆಡಿಎಸ್ ಶಾಸಕ ಪುಟ್ಟೇಗೌಡ ರಾಜೀನಾಮೆಯಿಂದ ಕ್ಷೇತ್ರಕ್ಕೆ ಶಾಸಕರಿಲ್ಲದ್ದಂತಾಗಿದೆ.
ಅರಸೀಕೆರೆ: ಕೆಎಂ ಶಿವಲಿಂಗೇಗೌಡ (ಜೆಡಿಎಸ್)
ಬೇಲೂರು : ವೈಎನ್ ರುದ್ರೇಶ್ ಗೌಡ(ಕಾಂಗ್ರೆಸ್)
ಹೊಳೆನರಸೀಪುರ : ಎಚ್ ಡಿ ರೇವಣ್ಣ (ಜೆಡಿಎಸ್)
ಅರಕಲಗೂಡು: ಎ. ಮಂಜು (ಕಾಂಗ್ರೆಸ್)
ಸಕಲೇಶಪುರ: ಎ‌ಚ್.ಕೆ ಕುಮಾರಸ್ವಾಮಿ

ಬೇಲೂರು ಕ್ಷೇತ್ರಕ್ಕಾಗಿ ಜೆಡಿಎಸ್ ಅಭ್ಯರ್ಥಿ ಆಯ್ಕೆ ಗೊಂದಲದ ಬಗ್ಗೆ ಈಗಾಗಲೇ ಒನ್ ಇಂಡಿಯಾ ಕನ್ನಡದಲ್ಲಿ ಸಾಕಷ್ಟು ಬಾರಿ ಓದಿರುತ್ತೀರಿ. ಬೇಲೂರು ಸೇರಿದಂತೆ ಅರಕಲಗೂಡು ಮೇಲೆ ಪ್ರಾಬಲ್ಯ ಸಾಧಿಸಲು ಜೆಡಿಎಸ್ ಯತ್ನಿಸುತ್ತಿದೆ. ಹೊಳೆನರಸೀಪುರದಲ್ಲಿ ಎಚ್ ಡಿ ರೇವಣ್ಣ ವಿರುದ್ಧ ಮಹಿಳಾ ಸ್ಪರ್ಧಿಗಳನ್ನು ಇಳಿಸಿ ವಿಪಕ್ಷಗಳು ವಿಶಿಷ್ಟ ತಂತ್ರಗಾರಿಕೆ ಮೆರೆದಿವೆ.

2013 ಕರ್ನಾಟಕ ವಿಧಾನಸಭಾ ಚುನಾವಣೆ ಅಧಿಕೃತ ಅಭ್ಯರ್ಥಿಗಳ ಪಟ್ಟಿ:

ಕ್ಷೇತ್ರ ಸಂಖ್ಯೆ ಕ್ಷೇತ್ರದ ಹೆಸರು ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಕೆಜೆಪಿ ಬಿಎಸ್ ಆರ್ಸಿ /ಪಕ್ಷೇತರರು/ಇತರೆ
193 ಶ್ರವಣಬೆಳಗೊಳ
ಪಟೇಲ್ ಮಂಜುನಾಥ್ ಸಿ.ಎಸ್ ಪುಟ್ಟೇಗೌಡ ಸಿ.ಎನ್ ಬಾಲಕೃಷ್ಣ ***** 11 ಪಕ್ಷೇತರರು
194 ಅರಸೀಕೆರೆ ಗಂಗಾಧರ್ ಬಿ.ಶಿವರಾಂ ಶಿವಲಿಂಗೇಗೌಡ
ಡಾ. ಲೋಕೇಶ್ 11
195 ಬೇಲೂರು
ಇ.ಎಚ್ ಲಕ್ಷ್ಮಣ್ ರುದ್ರೇಶ್ ಗೌಡ ವೈ.ಎಸ್ ಲಿಂಗೇಶ್ ವಿಶ್ವನಾಥ್ 11
196 ಹಾಸನ
ಎಂ.ಬಿ. ಗುರುಪ್ರಸಾದ್ ಮಹೇಶ್ ಎ‌ಚ್.ಕೆ ಪ್ರಕಾಶ್ *** ಕೋಡಿಹಳ್ಳಿ ಚಂದ್ರಶೇಖರ್ +14
197 ಹೊಳೆನರಸೀಪುರ ಹೇಮಂತ್
ಕುಮಾರ್ ಗೌಡ
ಅನುಪಮ. ಎಸ್.ಜಿ ಎಚ್.ಡಿ ರೇವಣ್ಣ ಎಚ್.ಎಲ್ ಯಮುನ 10
198 ಅರಕಲಗೂಡು
ಎಂ.ಕೆ ನಟರಾಜ್ ಎ.ಮಂಜು ಎ.ಟಿ ರಾಮಸ್ವಾಮಿ ಎಸ್. ಪುಟ್ಟಸ್ವಾಮಿ 11
199 ಸಕಲೇಶಪುರ
(ಎಸ್ ಸಿ)
ಡಾ.ನಾರಾಯಣ ಸ್ವಾಮಿ ಡಿ.ಮಲ್ಲೇಶ್ ಕುಮಾರಸ್ವಾಮಿ ಉಮೇಶ್
English summary
Karnataka assembly Election 2013 : Hassan District Assembly Constituency all party Candidates list. Haveri district consists 5 Assembly constituencies: Hassan, Shravanabelagola, Holenarasipur, Arsikere, Belur, Arakalgud, Sakaleshpur
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X